ಸಿಎಂ ಸಿದ್ದರಾಮಯ್ಯನವರ ಒಂದೇ.. ಒಂದು ಮಾತಿಗೆ ಭೋಪಾಲ್‌ನಲ್ಲಿ ಬಂಧಿತರಾಗಿದ್ದ ಕರ್ನಾಟಕದ 70 ರೈತರ ಬಿಡುಗಡೆ
"ದೆಹಲಿ ಚಲೋ" ಪ್ರತಿಭಟನಾ ಮೆರವಣಿಗೆಯಲ್ಲಿ ಭೋಪಾಲ್‌ನಲ್ಲಿ ಬಂಧಿತರಾಗಿದ್ದ ಸುಮಾರು 70 ಕರ್ನಾಟಕದ ರೈತರನ್ನು (ಫೆಬ್ರವರಿ 16) ಗುರುವಾರ ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರದೇಶದ ಮಧ್ಯಸ್ಥಿಕೆವಹಿಸಿ ಮೋಹನ್ ಯಾದವ್ ಅವರನ್ನು ಸಂಪರ್ಕಿಸಿದ ಕೆಲವೇ ಗಂಟೆಗಳಲ್ಲೇ ಬಂಧಿತ ರೈತರನ್ನು ಬಿಡುಗಡೆ ಮಾಡಲಾಯಿತು ಎನ್ನುವ ಮಾಹಿತಿಯೊಂದು ತಿಳಿದುಬಂದಿದೆ.
ಇನ್ನು ರೈತರು ಎಂಪಿ ಪೊಲೀಸ್ ರಕ್ಷಣೆಯಲ್ಲಿದ್ದಾರೆ ಮತ್ತು "ಎಲ್ಲಿ ಬೇಕಾದರೂ ಹೋಗಲು ಮುಕ್ತರಾಗಿದ್ದಾರೆ" ಎಂದು ಸಮರ್ಥಿಸಿಕೊಂಡರು.

ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನ ಹಲವಾರು ರೈತ ಸಂಘಗಳು ಫೆಬ್ರವರಿ 13ರಂದು 'ದೆಹಲಿ ಚಲೋ' ಮಿಷನ್‌ನ ಭಾಗವಾಗಿ ತಮ್ಮ ಉತ್ಪನ್ನಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನು, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ಪಿಂಚಣಿಗಾಗಿ ಒತ್ತಾಯಿಸಿ ಮೆರವಣಿಗೆಗೆ ಕರೆ ನೀಡಿದ್ದವು.
ರೈತರು ಮತ್ತು ಕೃಷಿ ಕಾರ್ಮಿಕರು, ಕೃಷಿ ಸಾಲ ಮನ್ನಾ, ಪೊಲೀಸ್ ಪ್ರಕರಣಗಳ ಹಿಂಪಡೆಯುವಿಕೆ ಮತ್ತು ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ "ನ್ಯಾಯ", ಭೂ ಸ್ವಾಧೀನ ಕಾಯಿದೆ 2013ರ ಮರುಸ್ಥಾಪನೆ, ವಿಶ್ವ ವ್ಯಾಪಾರ ಸಂಸ್ಥೆಯಿಂದ ಹಿಂಪಡೆಯುವಿಕೆ ಮತ್ತು ಹಿಂದಿನ ಅವಧಿಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಕುರಿತಂತೆ ಪ್ರತಿಭಟನೆಗೆ ಕರೆನೀಡಿದ್ದರು.
ಭಾನುವಾರ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕದ ರೈತರ ಗುಂಪನ್ನು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಬಂಧಿಸಲಾಗಿತ್ತು. ಈ ಹಿನ್ನೆಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದರು. ಹಾಗೆಯೇ ರೈತರ ಬಂಧನಕ್ಕೆ ವಿವಿಧ ವಲಯಗಳಿಂದ ಖಂಡನೆ ವ್ಯಕ್ತವಾಗಿದೆ.
ಇನ್ನು ಕರ್ನಾಟಕ ಸಿಎಂ ತಮ್ಮ ಸಂಸದರಿಗೆ ಪತ್ರ ಬರೆದಿದ್ದು, "ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಕರ್ನಾಟಕದ ರೈತರ ಗುಂಪನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಯಾವುದೇ ಕಾರಣವಿಲ್ಲದೆ ಬಂಧಿಸಲಾಗಿದೆ. ರೈತರನ್ನು ಬಂಧಿಸಿ ನಾಲ್ಕು ದಿನ ಕಳೆದರೂ ಬಿಡುಗಡೆ ಮಾಡಿಲ್ಲ. ನಿಮ್ಮ ಪೊಲೀಸ್ ಅಧಿಕಾರಿಗಳು ಅವರನ್ನು ವಾರಣಾಸಿಗೆ ಸ್ಥಳಾಂತರಿಸುತ್ತಿದ್ದಾರೆ ಎಂದು ಈಗ ತಿಳಿದುಬಂದಿದೆ ಎಂದರು.
"ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸುವುದು ಜನರ ಸಾಂವಿಧಾನಿಕ ಹಕ್ಕು. ಉತ್ತಮ ನೀತಿಗಳನ್ನು ಬಯಸುತ್ತಿರುವ ರೈತರನ್ನು ಮಧ್ಯಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳು ಬಂಧಿಸುತ್ತಿರುವುದು ಮತ್ತು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ," ಎಂದು ಅಸಮಾಧಾನ ಹೊರಹಾಕಿದರು.
ಈ ಬಗ್ಗೆ ಕರ್ನಾಟಕ ರೈತ ಒಕ್ಕೂಟದ ಪ್ರತಿನಿಧಿ ಪರಶುಮ್ರಾಮ ಯೆಟ್ಟಿನಗುಡ್ಡ ಮಾತನಾಡಿದ್ದು, "ಅವರು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆಂದು ನಮಗೆ ತಿಳಿಸಲಿಲ್ಲ ಮತ್ತು ನಂತರ ಮಧ್ಯಪ್ರದೇಶದ ಗಡಿಯಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನಮ್ಮನ್ನು ಇಳಿಸಿದರು. ಅಲ್ಲಿಂದ ವಾರಣಾಸಿಗೆ ಮತ್ತೊಂದು ರೈಲಿನಲ್ಲಿ ಹಾಕಲಾಯಿತು. ಆದರೆ ನಾವು ಅಯೋಧ್ಯೆಯ ಬಳಿ ಇಳಿದೆವು," ಎಂದು ಅವರು ಅಳಲು ತೋಡಿಕೊಂಡರು.
ರೈತರನ್ನು ಪೊಲೀಸರು ವಶಕ್ಕೆ ಪಡೆದರೂ ಬಿಡುಗಡೆ ಮಾಡಿದ ನಂತರ ಯಾವುದೇ ವಸತಿ ಅಥವಾ ಸಹಾಯವನ್ನು ನೀಡಲಿಲ್ಲ ಎಂದು ರೈತ ಮುಖಂಡರು ಹೇಳಿದರು. "ನಾವು ಉತ್ತರ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದೇವೆ ಮತ್ತು ನಾವು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುತ್ತೇವೆ. ನಮ್ಮ ನಾಯಕರು ಈಗಾಗಲೇ ದೆಹಲಿಯಲ್ಲಿದ್ದಾರೆ, ಆದ್ದರಿಂದ ನಾವು ಅವರೊಂದಿಗೆ ಚರ್ಚಿಸಿ ಮುಂದಿನದನ್ನು ನಿರ್ಧರಿಸುತ್ತೇವೆ ಎಂದು ಹೇಳಿದರು.
ಇನ್ನು ಆರೋಪಿಗಳು ಪೊಲೀಸ್ ರಕ್ಷಣೆಯಲ್ಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಉಜ್ಜಯಿನಿ) ಸಚಿನ್ ಶರ್ಮಾ ತಿಳಿಸಿದ್ದಾರೆ.
"ಅವರು ಎಲ್ಲಿ ಬೇಕಾದರೂ ಹೋಗಲು ಸ್ವತಂತ್ರರು. ಅವರು ಅಯೋಧ್ಯೆಗೆ ಹೋಗಬೇಕೆಂದು ಬಯಸಿದ್ದರಿಂದ ಬುಧವಾರದಂದು ರೈಲು ಹತ್ತಿ ಅಲ್ಲಿಗೆ ತಲುಪಿದರು. ಅವರ ಯೋಜನೆಯಲ್ಲಿ ನಾವು ಯಾವುದೇ ಪಾತ್ರವನ್ನು ವಹಿಸಲಿಲ್ಲ," ಎಂದು ಹೇಳಿದರು.












Click it and Unblock the Notifications