ಸೆವೆನ್ ಸ್ಟಾರ್ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಮಲಗಿಲ್ಲ: ಸಚಿವ ಚಲುವರಾಯಸ್ವಾಮಿ ಹೀಗೆ ಹೇಳಿದ್ಯಾಕೆ?
ಮಂಡ್ಯ , ಡಿಸೆಂಬರ್ 23: ಮುಖ್ಯಮಂತ್ರಿ ದ್ದರಾಮಯ್ಯ ಐಷಾರಾಮಿ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಅವರು ಐಷಾರಾಮಿ ಮಾಡೋಕೆ ಬಂದಿಲ್ಲ, 7ಸ್ಟಾರ್ ಹೋಟೆಲ್ ನಲ್ಲಿ ಮಲಗಿಲ್ಲ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,ಒಬ್ಬ ಮುಖ್ಯಮಂತ್ರಿಗಳು ಎಮಜ್ರೆನ್ಸಿ ಇದ್ದಾಗ ಉಪಯೋಗಿಸಿರುವುದು ಗೊತ್ತಿದೆ. ಬಸವರಾಜ ಬೊಮ್ಮಯಿ, ಯಡಿಯೂರಪ್ಪ ಎಷ್ಟು ವಿಮಾನದಲ್ಲಿ ಬಾರಿ ಓಡಾಡಿಲ್ಲ? ಮಾಹಿತಿ ಬಿಡುಗಡೆ ಮಾಡಿದ್ರೆ ಗೊತ್ತಾಗುತ್ತೆ ಅವರು ಎಷ್ಟು ಇವರು ಎಷ್ಟು ಅಂತ? ಮುಖ್ಯಮಂತ್ರಿಗಳು ರೋಡ್ ನಲ್ಲಿ ಬಂದ್ರೆ ಸಾರ್ವಜನಿಕರಿಗೆ ತೊಂದರೆ ಆಗುವ ದೃಷ್ಟಿ ಇದೆ. ಅನಾವಶ್ಯಕವಾಗಿ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಟೀಕೆ ಮಾಡೋಕೆ ಏನು ಸಿಗದಿದ್ದಾಗ ಈ ರೀತಿ ಮಾಡ್ತಾರೆ. ನಮ್ಮ ಮುಖ್ಯಮಂತ್ರಿ ಕಡಿಮೆ ಖರ್ಚಿನಲ್ಲಿ ಮಾಡ್ತಿದ್ದಾರೆ, ಸಿದ್ದರಾಮಯ್ಯ ಬಗ್ಗೆ ಇವರು ಹೇಳಿದ್ರೆ ಜನ ಕೇಳೊದಕ್ಕೆ ರೆಡಿ ಇಲ್ಲ.
ಸಿದ್ದರಾಮಯ್ಯ ಅವರು ಐಷಾರಾಮಿ ಮಾಡೋಕೆ ಬಂದಿಲ್ಲ. ಕರ್ನಾಟಕ ಭವನದಲ್ಲೆ ಉಳಿದುಕೊಂಡಿದರು. ಅವರು 7ಸ್ಟಾರ್ ಹೋಟೆಲ್ ನಲ್ಲಿ ಮಲಗಿಲ್ಲ. ಚುನಾವಣೆ ಹತ್ತಿರ ಬಂದಿದೆ ಬಿಜೆಪಿಯವರು ಮಾತನಾಡ್ಕೊಳ್ಳಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ಟಾಸ್ಕ್ ಕೊಟ್ಟಿದ್ದಾರೆ ಅವರ ಕಷ್ಟ ಅವರಿಗೆ ಪಾಪಾ. ಜೆಡಿಎಸ್ ನವರ ಅತ್ರ ಪಾಪಾ ಮೋದಿ ಅವರು ಹೇಗೆ ನಿಂತಿದ್ದಾರೆ, ಅವರ ಕಷ್ಟ ಅವರಿಗೆ ಬಿಡಿ. ಕುಮಾರಸ್ವಾಮಿ ಅವರು ಬಹಳ ಖುಷಿಯಾಗಿದ್ದಾರೆ ನೋಡಿದೆ. ಮೋದಿಗೆ ಇವರು ಅನಿವಾರ್ಯನೋ ಜೆಡಿಎಸ್ ನವರಿಗೆ ಮೋದಿ ಅನಿವಾರ್ಯನೋ ಫೆಬ್ರವರಿ ರಿಸಲ್ಟ್ ಬಂದ ಮೇಲೆ ಗೊತ್ತಾಗುತ್ತದೆ. ನಾವು ನೂರು ದಾಟುತ್ತೇವೆ ಅಂತ ಹೇಳಿದ್ವಿ ಜನರು ನಮ್ಮ ಕೈ ಹಿಡಿದ್ರು. 123 ಅಂತ ಕುಮಾರಸ್ವಾಮಿ ಹೇಳಿದ್ರು ಏನಾಯ್ತು? ಚುನಾವಣೆಗೂ ಮುಂಚೆ ಯಾರು ಸೋಲ್ತೇವೆ ಅಂತ ಹೇಳಲ್ಲ ಎಂದು ಹೇಳಿದರು.

ಸಂಸದರ ಅಮಾನತ್ತು ವಿಚಾರವಾಗಿ ಮಾತನಾಡಿ, ಇದನ್ನ ನಾವು ಖಂಡಿಸಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಮಾನತ್ತು ಮಾಡೋದು ಸರಿಯಲ್ಲ. ಇದು ಆಗಬಾರದಿತ್ತು, ಮೋದಿ ಅವರು ಈ ವಿಚಾರಕ್ಕೆ ಕೈ ಹಾಕಬಾರದಿತ್ತು. ಆದ್ರೂ ಅವರ ಉದ್ಘಟತನ ಮಾಡಿದ್ದಾರೆ ನಾವು ಖಂಡಿಸುತ್ತೇವೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ತಮಿಳುನಾಡಿಗೆ ಎರಡೂ ತಿಂಗಳಿಂದ ನೀರು ಬಿಡ್ತಿಲ್ಲ. ಒಂದು ಹನಿ ನೀರನ್ನು ಸಹ ಕೊಟ್ಟಿಲ್ಲ, ಇದು ಹಿಂದಿನಿಂದಲೂ ಇರುವ ಆದೇಶ ಕೊಟ್ಟಿದ್ದಾರೆ ಅಷ್ಟೆ. ನಮಗೆ ಕುಡಿಯಲು ನೀರಿನ ಆತಂಕದ ಪರಿಸ್ಥಿತಿ ಇದೆ. ತಮಿಳುನಾಡಿಗೆ ಬಿಡೋದು ಹೇಗೆ ಸಾಧ್ಯ? ರೈತರು ಹೋರಾಟ ಕೈ ಬಿಡಲು ಮನವಿ ಮಾಡುತ್ತೇವೆ. ರೈತರ ಹಿತ ಕಾಪಾಡುವ ದೃಷ್ಟಿಯಿಂದ ಲೀಗಲ್ ಟೀಂ ಜೊತೆ ಮಾತನಾಡಿದ್ದೇವೆ.
ಎಲ್ಲಾ ಭತ್ತದ ಬೆಳೆ ಕಟಾವುಗೆ ಬಂದಿದೆ. ಸಂಪೂರ್ಣವಾಗಿ ಕೈ ಸೆರೆ ರೈತರಿಗೆ ಅನುಕೂಲವಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ 16TMC ನೀರು ಮಾತ್ರ ಇದೆ. ಅದರಲ್ಲಿ ಬೇಸಿಗೆಯಲ್ಲಿ 2 ರಿಂದ 3 ಟಿಎಂಸಿ ಆವಿಯಾಗಿ ಹೋಗುತ್ತೆ.13 ಟಿಎಂಸಿ ಮಾತ್ರ ಉಳಿಯುತ್ತೆ. ತಿಂಗಳಿಗೆ 2.1 ಟಿಎಂಸಿ ನೀರನ್ನು ಕುಡಿಯಲು ಹಾಗೂ ಬೆಳೆಗೆ ಅಂದಾಜು ಮಾಡಲಾಗಿದೆ ಎಂದರು.
ಜೂನ್ ವರೆಗೂ 16 ಟಿಎಂಸಿ ಕುಡಿಯಲು ನೀರು ಬೇಕಾಗುತ್ತದೆ. ಮೇ ಜೂನ್ ನಲ್ಲಿ ಮಳೆ ಬರದಿದ್ದರೆ ಲಾಸ್ಟ್ ಎರಡೂ ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತೆ, ಸಮಿತಿ ಮೂಲಕ ರೈತರಿಗೆ ಬೇಸಿಗೆ ಬೆಳೆಯನ್ನು ಬೆಳೆಯಬಾರದು. ರೈತರಿಗೆ ವಿನಂತಿ ಮಾಡ್ತೇನೆ ತೊಂದರೆಗೆ ಸಿಲುಕುವುದು ಬೇಡಾ. ನೀರು ಇಲ್ಲ ಏನು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಆಗಲ್ಲ. ಬೇಸಿಗೆ ಅಲ್ಪಾವಧಿ, ದೀರ್ಘಾವಧಿಯ ಬೆಳೆ ಹಾಕಬೇಡಿ, ಮುಂಗಾರಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಕೊಟ್ಟಿದ್ದೇವೆ.
ಈಗಾಗಲೇ ಬರ ಘೋಷಣೆಯಗಿದೆ. ಬರ ಪರಿಹಾರ ಕೊಡಲು ಕೇಂದ್ರ ತಿಳಿಸಿದೆ, ಕೇಂದ್ರದ ಪರಿಹಾರ ತಡವಾಗಿದ್ದರಿಂದ ಎಕರೆಗೆ 2 ಸಾವಿರ ರೂ ಕೊಡಲು ಸಿಎಂ ಘೋಷಣೆ ಮಾಡಿದ್ದಾರೆ. ಪರಿಹಾರದಲ್ಲಿ ರೈತರಿಗೆ ಅನ್ಯಾಯ ಅಗಲ್ಲ. ಪ್ರಾಧಿಕಾರಗಳಿಂದ ಕರ್ನಾಟಕಕ್ಕೆ ಹಿನ್ನಡೆ ಆಗುತ್ತಿದೆ. ರೈತರ ಬೆಳೆ ಉಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ, ಮುಂದೆ ಬರುವ ಎಲ್ಲಾ ಬೆಳೆಗು ಬರ ಪರಿಹಾರ ಕೊಡ್ತೇವೆ.
ರೈತರಿಗೆ ವಿನಂತಿ ಮಾಡಿದ್ದೇವೆ ಸಿಎಂ ಕೂಡ ವಿನಂತಿ ಮಾಡಿದ್ದೇವೆ.ಹೋರಾಟ ನಿಲ್ಲಿಸಿ ನಮ್ಮ ಜೊತೆ ಸಹಕರಿಸಿ ಎಂದು ಹೇಳಿದರು.












Click it and Unblock the Notifications