ಚಿತ್ರಗಳು : ಕೊಪ್ಪಳದಲ್ಲಿ ರೈತ ಸಮಾವೇಶ ಉದ್ಘಾಟಿಸಿದ ಸಿದ್ದರಾಮಯ್ಯ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಪ್ಪಳ, ಆಗಸ್ಟ್ 29 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳದಲ್ಲಿ ಸೋಮವಾರ 'ಸ್ವಾವಲಂಬಿ ಸ್ವಾಭಿಮಾನಿ ರೈತರ ಬೃಹತ್ ಸಮಾವೇಶ'ಕ್ಕೆ ಚಾಲನೆ ನೀಡಿದರು. ಸರ್ಕಾರದ ಕೃಷಿಭಾಗ್ಯ ಯೋಜನೆ ಯಶಸ್ಸಿನ ಹಿನ್ನಲೆಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ.

ಕೃಷಿಭಾಗ್ಯ ಯೋಜನೆ ಫಲಾನುಭವಿಗಳ ಸಮಾವೇಶಕ್ಕೆ ಮೊದಲು ಟಣಕನಲ್ಲು ಗ್ರಾಮದಲ್ಲಿ ಕೃಷಿ ಹೊಂಡವನ್ನು ಸಿದ್ದರಾಮಯ್ಯ ಅವರು ವೀಕ್ಷಿಸಿದರು. ನಂತರ ಬೃಹತ್ ರೈತ ಸಮಾವೇಶಕ್ಕೆ ಚಾಲನೆ ನೀಡಿದರು.[ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯ]

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ವರ್ಷಗಳಲ್ಲಿ ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ ಕೃಷಿ ಭಾಗ್ಯ ಯೋಜನೆಯೂ ಸೇರಿದೆ. ಈ ಯೋಜನೆ ಬಗ್ಗೆ ಟೀಕೆ ವ್ಯಕ್ತವಾದರೂ, ಯೋಜನೆಯಿಂದ ರೈತರಿಗೆ ಅಪಾರವಾದ ಅನುಕೂಲವಾಗಿದೆ.[ರಸಗೊಬ್ಬರ ಸಬ್ಸಿಡಿ ನೇರವಾಗಿ ರೈತರ ಖಾತೆಗೆ]

121 ತಾಲೂಕು ಗಳಲ್ಲಿ 1,651 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಮಳೆ ನೀರನ್ನು ಕೃಷಿ ಹೊಂಡದಲ್ಲಿ ಶೇಖರಿಸಿದರೆ ಸುಲಭವಾಗಿ ಕೃಷಿ ಮಾಡಬಹುದು. ಕೃಷಿ ಹೊಂಡ ಮತ್ತು ನೆರಳು ಪರದೆಗಳಿಗೆ ಭಾರಿ ಬೇಡಿಕೆ‌ ಇದೆ..[ಕೊಪ್ಪಳ ರೈತನ ಮುಖದಲ್ಲಿ ಕಳೆ ತಂದ ಬಾಳೆ, ತರಕಾರಿ]

ಕೃಷಿಭಾಗ್ಯ ಯೋಜನೆ

ಕೃಷಿಭಾಗ್ಯ ಯೋಜನೆ

ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರ ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತಂದಿದೆ. ಸ್ವಾಭಾವಿಕ ಸಂಪನ್ಮೂಲ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಮತ್ತು ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಯೋಜನೆ ಉದ್ದೇಶ.

ಪ್ಯಾಕೇಜ್ ಘಟಕಗಳು

ಪ್ಯಾಕೇಜ್ ಘಟಕಗಳು

ಈ ಯೋಜನೆಯಡಿ ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಿತ ನೀರಾವರಿಗೆ ವಿಶೇಷ ಪ್ಯಾಕೇಜ್‌ಅನ್ನು ರೂಪಿಸಲಾಗಿದ್ದು, ಈ ಪ್ಯಾಕೇಜ್‌ನಡಿ ಪಾಲಿಥೀನ್/ಟಾರ್ಪಾಲಿನ ಸಹಿತ ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ಕೃಷಿ ಹೊಂಡದಿಂದ ನೀರನ್ನು ಬಳಸಲು ಗರಿಷ್ಠ 5 ಹೆಚ್.ಪಿ. ಡೀಸೆಲ್ ಪಂಪ್‌ಸೆಟ್ ಅನ್ನು ಶೇ.80ರ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

121 ತಾಲೂಕುಗಳಲ್ಲಿ ಯೋಜನೆ

121 ತಾಲೂಕುಗಳಲ್ಲಿ ಯೋಜನೆ

121 ತಾಲೂಕು ಗಳಲ್ಲಿ 1,651 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. 600 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡುವಂತೆ ಕೃಷಿ ಇಲಾಖೆಯಿಂದ ಪ್ರಸ್ತಾವನೆ ಬಂದಿತ್ತು. 300 ಕೋಟಿ ರೂ. ಬಿಡುಗಡೆಗೆ‌ ಒಪ್ಪಿಗೆ ಸೂಚಿಸಲಾಗಿದೆ.

ರೈತರ ಸಾಲಮನ್ನಾ

ರೈತರ ಸಾಲಮನ್ನಾ

ವಾಣಿಜ್ಯ ಬ್ಯಾಂಕ್ ಗಳ ಮೂಲಕ ರೈತರು ಪಡೆದಿರುವ 29 ಸಾವಿರ ಕೋಟಿ ರೂ. ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರ ಸಂಘ ಮತ್ತು ಬ್ಯಾಂಕ್ ಗಳ ಮೂಲಕ ಅವರು ಪಡೆದಿರುವ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಲಿದೆ.

ಭತ್ತ ನಾಟಿ ಮಾಡುವ ವಿಧಾನ ವೀಕ್ಷಣೆ

ಭತ್ತ ನಾಟಿ ಮಾಡುವ ವಿಧಾನ ವೀಕ್ಷಣೆ

ಸಮಾವೇಶಕ್ಕೂ ಮೊದಲು ಆಧುನಿಕ ತಂತ್ರಜ್ಞಾನದ ಮೂಲಕ ಭತ್ತ ನಾಟಿ ಮಾಡುವ ವಿಧಾನವನ್ನು ಸಿದ್ದರಾಮಯ್ಯ ವೀಕ್ಷಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah inaugurated Raita samavesha in Koppal on Monday, August 29, 2016.
Please Wait while comments are loading...