ಹನುಮ ಜಯಂತಿಗೆ ಶುಭಕೋರಿದ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್: ನೆಟ್ಟಿಗರು ಹೇಳಿದ್ದೇನು ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನುಮ ಜಯಂತಿಯ (ಹನುಮದ್ವ್ರತದ) ಶುಭಾಶಯ ಕೋರಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿದ್ದಾರೆ. ಡಿಸೆಂಬರ್ 3ರ ಬುಧವಾರ ಶುಭಕೋರಿದ್ದಾರೆ. ಇನ್ನು ನೆನ್ನೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಶುಭಕೋರಿ ಸಂದೇಶ ಹಂಚಿಕೊಂಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಮಬಂಟ ಹನುಮನ ಸ್ವಾಮಿನಿಷ್ಠೆ, ವಚನಪಾಲನೆ ಸರ್ವಕಾಲಕ್ಕೂ ಆದರಣೀಯವಾದುದ್ದು.

CM Siddaramaiah DCM Shivakumar Wish People on Hanuman Jayanti Here s How Netizens Responded

ಅಚಲ ನಂಬಿಕೆ, ನಿಸ್ವಾರ್ಥ ಸೇವೆ, ಪರಮ ಭಕ್ತಿಯ ಮೂಲಕ ಸಾಮಾನ್ಯನೊಬ್ಬ ದೈವತ್ವಕ್ಕೇರಬಹುದು ಎಂಬುದು ಹನುಮನ ಜೀವನ ಸಂದೇಶ. ಹನುಮ ಜಯಂತಿಯು ನಾಡಿನಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ನಾಡಬಾಂಧವರಿಗೆ ಹನುಮ ಜಯಂತಿಯ ಶುಭಾಶಯಗಳು.

#HanumaJayanti ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಡಿಸೆಂಬರ್ 02ರ ಮಂಗಳವಾರ ಸೋಷಿಯಲ್ ಮೀಡಿಯಾದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಶುಭ ಕೋರಿದ್ದರು. ಜಯ ಹನುಮಾನ ಜ್ಞಾನ ಗುಣ ಸಾಗರ ।

ಜಯ ಕಪೀಶ ತಿಹು ಲೋಕ ಉಜಾಗರ ॥

ರಾಮದೂತ ಅತುಲಿತ ಬಲಧಾಮಾ ।

ಅಂಜನಿ ಪುತ್ರ ಪವನಸುತ ನಾಮಾ ॥

ಸತ್ಯ, ಧೈರ್ಯ, ಭಕ್ತಿ ಮತ್ತು ಸೇವಾ ಮನೋಭಾವದ ಸಾಕ್ಷಾತ್ ರೂಪವೇ ಆದ ಶ್ರೀ ಆಂಜನೇಯನಿಗೆ ಕೋಟಿ ಕೋಟಿ ಪ್ರಣಾಮಗಳು. ಸಂಕಷ್ಟಹರನಾದ ಮಾರುತಿರಾಯನ ಕೃಪಾಶೀರ್ವಾದವು ನಿಮ್ಮೆಲ್ಲರ ಮೇಲೆ ಸದಾ ಇರಲಿ. ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪೋಸ್ಟ್‌ ಹಂಚಿಕೊಂಡಿದ್ದರು.

ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ಹನುಮ ಜಯಂತಿಗೆ ಶುಭಕೋರಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶುಭಕೋರಿರುವ ಪೋಸ್ಟ್‌ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೆಚ್ಚು ರೀಟ್ವೀಟ್‌ ಸಹ ಆಗುತ್ತಿದೆ.

ಡಿ.ಕೆ ಶಿವಕುಮಾರ್ ಅವರ ಪೋಸ್ಟ್‌ಗೆ ನೆಟ್ಟಿಗರು ರಿಯಾಕ್ಟ್‌ ಮಾಡಿದ್ದು, ಒಬ್ಬ ರಾಜಕೀಯ ಧುರೀಣರಾದ ನಿಮ್ಮಲ್ಲಿ ಇಷ್ಟೊಂದು ದೈವಭಕ್ತಿ ಕಂಡು ಸಂತೋಷವಾಗುತ್ತದೆ. ನೀವು ನಂಬಿದ ದೇವರು ನಿಮ್ಮನ್ನು ಸನ್ಮಾರ್ಗದಲ್ಲಿ ನಡೆಸಿ ಸುಜ್ಞಾನ ಮತಿ ಕೊಟ್ಟು ಸತ್ಪ್ರಜೆ ಗಳಿಗೆ ಸತ್ಕರ್ಮಗಳನ್ನು ಮಾಡಿಸಿ ಕರ್ನಾಟಕ ಮಾತೆಯ ಸತ್ಪುತ್ರರಾಗಿ ಬಾಳಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಮುಕುಂದಾ ಎನ್ನುವವರು, ಹನುಮ ಜಯಂತಿಯಲ್ಲ ಹನುಮ ವ್ರತ ಡಿಕೆಶಿ ಯವರೇ. ಇಂದು ಹನುಮ ವ್ರತ ಅಂತ ಗೊತ್ತಿದ್ದೂ ಕೂಡ ಸಿದ್ದರಾಮಯ್ಯನವರಿಗೆ ಮನೆಯಲ್ಲಿ ನಾಟಿಕೋಳಿ ಸಾರು ವ್ಯವಸ್ಥೆ ಮಾಡಿದ್ದಾದರೂ ಹೇಗೆ ತಾವು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರ ಪೋಸ್ಟ್‌ಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶುಭಕೋರಿದರೆ ಇನ್ನೂ ಕೆಲವರು ಮಂಗಳವಾರವೇ ಹನುಮದ್ವ್ರತ ಆಗಿದೆ ಇಂದು ಶುಭಕೋರುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+