ಮೂಢನಂಬಿಕೆ, ಮಡೆಸ್ನಾನ ಬಗ್ಗೆ ಸಿದ್ದು ಗುಡುಗು
ಜಮಖಂಡಿ, ಜು.21: ರಾಜ್ಯದಲ್ಲಿ ಮೂಢನಂಬಿಕೆ ಆಚರಣೆ ಮಾಡಿದರೆ ಅಥವಾ ಪ್ರಚೋದಿಸಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಶೀಘ್ರವೇ ಮಡೆಸ್ನಾನದಂಥ ಮೂಢನಂಬಿಕೆ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾನೂನು ರಚಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮಖಂಡಿ ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ಹೇಳಿದ್ದಾರೆ.
'ನಾವು ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತೇವೆ. ಆದರೆ ಮಾಡುವ ಪೂಜೆ, ಪದ್ಧತಿಗಳು ವೈಚಾರಿಕತೆಯಿಂದ ಕೂಡಿರಬೇಕೇ ಹೊರತು ಮೌಢ್ಯತೆಯಿಂದ ಅಲ್ಲ. ಯಾವ ಶಾಸ್ತ್ರದಲ್ಲಿಯೂ ಉಲ್ಲೇಖವಾಗದ ಮಡೆಸ್ನಾನದಂಥ ಪದ್ಧತಿಗಳನ್ನು ನಿಷೇಧಿಸಬೇಕು. ಇಂದು ಜಾತಿ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಕಾಯಕ ಮಾಡಿ ಶ್ರೇಷ್ಠರಾಗಬೇಕೆ ಹೊರತು ಜಾತಿಯಿಂದ ಶ್ರೇಷ್ಠರಾಗುವುದು ಬೇಡ. ಮನುಕುಲ ಉದ್ಧಾರಕ್ಕೆ ಕನಕದಾಸರು ಶ್ರೇಷ್ಠ ಮಹಾನ್ ಪುರುಷರಾಗಿ ಹೋದರು. ಜಾತಿ, ಮತ-ಪಂಥಗಳಿಂದ ದೂರವಿದ್ದು, ಶ್ರೇಷ್ಠ ವ್ಯಕ್ತಿಗಳಾಗುವ ಕೆಲಸ ಮಾಡಬೇಕು ಎಂದರು.

ವಿವಾದಿತ ಮಡೆ ಮಡೆಸ್ನಾನ, ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ, ಪಂಕ್ತಿಭೇದ, ಮೇಲು-ಕೀಳು ಭಾವನೆ ಪ್ರಚೋದಿಸುವ ಅಜಲು ಪದ್ಧತಿ, ಗೆಜ್ಜೆಪೂಜೆ, ಬೆತ್ತಲೆ ಸೇವೆ, ವಾಮಾಚಾರ, ಕುಂಡಲಿನಿ, ಹಸ್ತಸಾಮುದ್ರಿಕೆ, ಕಣಿ-ಶಕುನ, ಪ್ರಶ್ನೆ ಕೇಳುವುದು ಹಾಗೂ ಮಾಧ್ಯಮಗಳಲ್ಲಿ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಬೇಕು. ಶಾಲಾ ಹಂತದಿಂದಲೇ ಜಾತ್ಯತೀತ-ವೈಚಾರಿಕತೆ ಬಿತ್ತುವ ಸಲುವಾಗಿ ಅದನ್ನು ಪಠ್ಯಕ್ರಮವಾಗಿ ಅಳವಡಿಸಬೇಕು ಮುಂತಾದ ಶಿಫಾರಸ್ಸುಳ್ಳ ವಿಧೇಯಕದ ಕರಡು ಪ್ರತಿಯನ್ನು ರಾಷ್ಟ್ರೀಯ ಕಾನೂನು ವಿದ್ಯಾಲಯದ ನಿರ್ದೇಶಕ ಜಾಫೆಟ್ ನೇತೃತ್ವದ ಸಮಿತಿ ಕಳೆದ ವರ್ಷ ಸರ್ಕಾರಕ್ಕೆ ಸಲ್ಲಿಸಿತ್ತು.
ಆದರೆ, ಸರ್ಕಾರಿ ಕಚೇರಿಗಳಲ್ಲಿ ಪೂಜೆ-ಪುನಸ್ಕಾರ ನಡೆಸುವ, ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಗುದ್ದಲಿ ಪೂಜೆ ಮಾಡಿಸುವ, ವಿಧಾನಸೌಧ- ವಿಕಾಸಸೌಧಗಳಂತಹ ಸಾರ್ವಜನಿಕ ಕಟ್ಟಡಗಳಲ್ಲಿರುವ ಕೊಠಡಿಗಳನ್ನು ವಾಸ್ತುದೋಷ ನಿವಾರಣೆಯ ಹೆಸರಿನಲ್ಲಿ ಮನಬಂದಂತೆ ಬದಲಿಸಿ ಕಟ್ಟುವ ಮೌಢ್ಯಾಚರಣೆಗಳನ್ನು ಪ್ರತಿಬಂಧಿಸಬೇಕು ಎಂಬ ಅಂಶಗಳು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಮಠ-ಮಾನ್ಯಗಳ ವಿವಿಧ ಆಚರಣೆಗೂ ಕಡಿವಾಣ ಹಾಕುವಂತೆ ಸೂಚಿಸಲಾಗಿತ್ತು. ಹೀಗಾಗಿ ವಿಧೇಯಕ ಚರ್ಚೆ ಹಂತದಲ್ಲೇ ಇದ್ದು, ಇನ್ನೂ ಸದನದಲ್ಲಿ ಮಂಡನೆಯಾಗಿ ಕಾನೂನಾಗಿ ಜಾರಿಗೊಳ್ಳಬೇಕಿದೆ. [ಕರಡು ಮಸೂದೆ ವಿವರ ಇಲ್ಲಿ ಓದಿ]
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications