ಇಲ್ಲಿ ಬಿಜೆಪಿ, ಅಲ್ಲಿ ಕಾಂಗ್ರೆಸ್ ಗೆ ಬೆಂಬಲ; ಇದು ಜೆಡಿಎಸ್ ರಾಜಕೀಯ
ಬೆಂಗಳೂರು, ಜೂನ್ 25: ರಾಜಕಾರಣ ಅಂದ್ರೆ ದೇವೇಗೌಡರು. ಜೆಡಿಎಸ್ ವರಿಷ್ಠ ದೇವೇಗೌಡರನ್ನು ಮೀರಿಸುವ ರಾಜಕಾರಣಿ ಇನ್ನೊಬ್ಬರಿರಲಿಕ್ಕಿಲ್ಲ.
ವಿಧಾನ ಪರಿಷತ್ ಅವಿಶ್ವಾಸ ನಿರ್ಣಯದ ಸಂದರ್ಭ ಬಿಜೆಪಿ ಜತೆಗೂಡಿ ಡಿಎಚ್ ಶಂಕರಮೂರ್ತಿ ಪರ ಮತ ಚಲಾಯಿಸಿದ್ದ ಜೆಡಿಎಸ್ ಇದೀಗ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಲಿದೆ.

ಇಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ನಾಮಪತ್ರಕ್ಕೆ ಸೂಚಕರಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಸಹಿ ಹಾಕಿದ್ದಾರೆ. ಈ ಮೂಲಕ ಒಂದೇ ತಿಂಗಳ ಅಂತರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಪರ ಜೆಡಿಎಸ್ ಮತದಾನ ಮಾಡಲಿದೆ.

ಮುಖ್ಯಮಂತ್ರಿಗಳಿಂದ ಸಹಿ
ಇದೇ ವೇಳೆ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಮೀರಾಕುಮಾರ್ ಅವರ ನಾಮಪತ್ರಕ್ಕೆ ಸೂಚಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಪಿಸಿಸಿ ಕಚೇರಿಯಲ್ಲಿ ಸಹಿ ಮಾಡಿದರು.
ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಮೀರಾಕುಮಾರ್ ಅವರ ನಾಮಪತ್ರಕ್ಕೆ ಸೂಚಕರಾಗಿ ಮುಖ್ಯಮಂತ್ರಿಗಳು ಕೆಪಿಸಿಸಿ ಕಚೇರಿಯಲ್ಲಿ ಸಹಿ ಮಾಡಿದರು. pic.twitter.com/RxBrCxnOj1
— CM of Karnataka (@CMofKarnataka) June 25, 2017











Click it and Unblock the Notifications