ಪಿಎಸ್‌ಐ ಬಂಡೆ ಕುಟುಂಬದ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 19 : ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ತಂದೆ ಕರಿಬಸಪ್ಪ ಅವರ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಮಲ್ಲಮ್ಮ ಬಂಡೆ ಅವರ ಚಿಕಿತ್ಸಾ ವೆಚ್ಚ ಭರಿಸುವುದು, ನಿವೃತ್ತಿಯ ತನಕ ಮಾಸಿಕ ವೇತನ ನೀಡುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಲ್ಲಿಕಾರ್ಜುನ ಬಂಡೆ ಅವರ ತಂದೆ ಕರಿಬಸಪ್ಪ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕರಿಬಸಪ್ಪ ಅವರ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು. [ಧರಣಿ ಕೂತ ಮಲ್ಲಿಕಾರ್ಜುನ ಬಂಡೆ ಕುಟುಂಬ]

siddaramaiah

ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ಬಂಡೆ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತೇವೆ, ಮಲ್ಲಿಕಾರ್ಜುನ ಬಂಡೆ ಅವರ ನಿವೃತ್ತಿ ತನಕ ಮಾಸಿಕ ವೇತನವನ್ನು ನೀಡುತ್ತೇವೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಕರಿಬಸಪ್ಪ ಅವರಿಗೆ ಹೇಳಿದರು. [ಮಲ್ಲಿಕಾರ್ಜುನ ಬಂಡೆ ಪ್ರಕರಣದ ಹಿನ್ನೋಟ]

ಪ್ರತಿಭಟನೆ ನಡೆಸಿದರು : ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಮೊದಲು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಮಲ್ಲಿಕಾರ್ಜುನ ಬಂಡೆ ಅವರ ತಂದೆ ಕರಿಬಸಪ್ಪ ಅವರು ಪ್ರತಿಭಟನೆ ನಡೆಸಿದರು.

Posted by Karnataka Government - Updates onFriday, February 19, 2016

ಪಿಎಸ್ಐ ಮಲ್ಲಿಕಾರ್ಜುನ ಬಂಡೆಯವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಸರ್ಕಾರ ಕೊಟ್ಟ ಭರವಸೆಗಳು ಈಡೇರಿಲ್ಲವೆಂದು ಅಳಲು ತೋಡಿಕೊಂಡರು ಮತ್ತು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಬಂಡೆ ಪತ್ನಿ ಮಲ್ಲಮ್ಮ ಬಂಡೆ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಬೇಡಿಕೆ ಇಟ್ಟಿದ್ದರು.

ಅಂದಹಾಗೆ 2014ರ ಜನವರಿ 8ರ ಮಧ್ಯಾಹ್ನ ಕಲಬುರಗಿಯ ರೋಜಾ ಪೊಲೀಸ್ ಠಾಣೆ ಸಮೀಪ ಭೂಗತ ಪಾತಕಿ ಮುನ್ನಾ ಮತ್ತು ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿತ್ತು. ಮುಂಬೈ ಮೂಲದ ಭೂಗತ ಪಾತಕಿ ಮುನ್ನಾ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದ. ದಾಳಿಯಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಮತ್ತು ಎಎಸ್ಐ ಉದ್ದಂಡಪ್ಪ ಗಾಯಗೊಂಡಿದ್ದರು. ತಲೆಗೆ ಗುಂಡು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah on Friday said, government will provide all necessary help to PSI Mallikarjuna Bande family. Bande family will get salary till his last day of his retirement. Mallikarjun Bande killed in shootout at Kalaburagi on January 2014.
Please Wait while comments are loading...