ದಾರಿಯಲ್ಲಿ ಸಿಕ್ಕ ಅಭಿಮಾನಿಗಳನ್ನು ನಿಂತು ಮಾತನಾಡಿಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜೂನ್ 02: ಕುಮಾರಸ್ವಾಮಿ ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳು, ಅವರು ಎಲ್ಲೇ ಹೋಗಲಿ ಅಲ್ಲಿ ಜನ ಜಾತ್ರೆ ಚುನಾವಣಾ ಪ್ರಚಾರದ ಸಮಯದಲ್ಲೂ ಇದನ್ನು ಕಾಣಬಹುದಾಗಿತ್ತು. ಅವರೂ ಅಷ್ಟೆ ತಮ್ಮ ಅಭಿಮಾನಿಗಳ ಮನಸ್ಸಿಗೆ ಬೇಸರ ತರುವವರಲ್ಲ ಅದಕ್ಕೆ ಇಲ್ಲಿದೆ ನೋಡಿ ತಾಜಾ ಉದಾಹರಣೆ.

ಬಿಗಿ ಭದ್ರತೆಯಲ್ಲಿ ಹೋಗುತ್ತಿದ್ದಾಗಲೂ ದಾರಿ ಬದಿಯಲ್ಲಿ ತಮ್ಮನ್ನು ನೋಡಲೆಂದು ಕಾದಿದ್ದ ಅಭಿಮಾನಿಗಳಿಗಾಗಿ ವಾಹನ ನಿಲ್ಲಿಸಿ ಅವರ ಕೈಕುಲುಕಿ ಮಾತನಾಡಿಸಿ ಹೋಗಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ.

ನಿನ್ನೆಯಷ್ಟೆ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಅವರ ಮನೆಗೆ ತೆರಳ ಬೇಕಾದ ಸಂದರ್ಭ ದಾರಿಯಲ್ಲಿ ಹಲವು ಜನ ಮಹಿಳೆಯರೂ ಸೇರಿದಂತೆ ಕುಮಾರಸ್ವಾಮಿ ಅವರನ್ನು ನೋಡಲು ಕಾತರರಾಗಿ ನಿಂತಿದ್ದರು. ಇದನ್ನು ಗಮನಿಸಿದ ಕುಮಾರಸ್ವಾಮಿ ಅವರು ಬಿಗಿ ಭದ್ರತೆ ಇದ್ದರೂ ಸಹ ವಾಹನ ನಿಲ್ಲಿಸಿ ಅವರನ್ನು ಮಾತನಾಡಿಸಿದರು.

CM Kumaraswamy break his security to meet his fans

ಈ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದ್ದು, ಕುಮಾರಸ್ವಾಮಿ ಅವರ ಕೈಕುಲುಕುವ ಅಭಿಮಾನಿಗಳು ನಾವು ನಿಮ್ಮೊಂದಿಗೆ ಇದ್ದೇವೆ ನೀವು ಮುಂದುವರೆಯಿರಿ ಎಂದು ಭರವಸೆ ಮಾತುಗಳನ್ನು ಆಡಿ ಸಿಎಂ ಅವರನ್ನು ಹುರಿದುಂಬಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+