ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಆಯ್ತು ಈಗ ತಮಿಳುನಾಡಿನಲ್ಲಿ ಕುಮಾರಸ್ವಾಮಿ ಟೆಂಪಲ್ ರನ್

|
Google Oneindia Kannada News

ತೂತುಕುಡಿ, ಸೆಪ್ಟೆಂಬರ್ 27: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಟೆಂಪಲ್ ರನ್ ಮುಂದುವರೆದಿದ್ದು, ಇಂದು ತಮಿಳುನಾಡಿನ ಕೆಲವು ದೇವಸ್ಥಾನಗಳಿಗೆ ಕುಟುಂಬ ಸಮೇತ ಅವರು ಭೇಟಿ ನೀಡಿದ್ದಾರೆ.

ಕುಮಾರಸ್ವಾಮಿ ಅವರು ಇಂದು ತಿರುಚೆಂಡನೂರಿನ ಮುರುಗ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸಹ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದ್ದರು.

ವಸಂತಪುರದ 'ಕಲ್ಯಾಣಿ' ಚೆಂದ ಮಾಡಿ, ಸರ್ಕಾರಕ್ಕೆ ಕೊಟ್ಟ ಇನ್ಫೋಸಿಸ್ವಸಂತಪುರದ 'ಕಲ್ಯಾಣಿ' ಚೆಂದ ಮಾಡಿ, ಸರ್ಕಾರಕ್ಕೆ ಕೊಟ್ಟ ಇನ್ಫೋಸಿಸ್

ಕುಮಾರಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದನ್ನು ಮುಂದುವರೆಸಿದ್ದಾರೆ. ಈ ಮುಂಚೆ ಅವರು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಶೃಂಗೇರಿ ಶಾರದಾಂಬೆ, ಚಾಮುಂಡೇಶ್ವರಿ, ತಿರುಪತಿ, ಹಾಸನಾಂಬೆ ಅಷ್ಟೆ ಅಲ್ಲದೆ ಅಜ್ಮೇರ್‌ ದರ್ಗಾಗಳಿಗೂ ಸಹ ಭೇಟಿ ನೀಡಿದ್ದರು.

CM Kumaraswamy and family visits temple in Tamilnadu

ಮುಖ್ಯಮಂತ್ರಿ ಅವರ ಟೆಂಪಲ್ ರನ್ ಮಾಧ್ಯಗಳಲ್ಲಿ ಬಹಳ ಟೀಕೆಗೆ ಗುರಿಯಾಗಿತ್ತು. ಅಧಿಕಾರಕ್ಕೆ ಬಂದ ಕೇವಲ 82 ದಿನಗಳಲ್ಲೇ ಅವರು 40 ಕ್ಕೂ ದೇವಾಲಯಗಳಿಗೆ ಭೇಟಿ ನೀಡಿ ಸುದ್ದಿಯಾಗಿದ್ದರು. ಬಹಳಷ್ಟು ಟೀಕೆಗೆ ಗುರಿ ಆಗಿದ್ದರೂ ಸಹ ಸಿಎಂ ಅವರು ಟೆಂಪಲ್ ರನ್ ಮುಂದುವರೆಸಿದ್ದಾರೆ.

ರಾಜಕೀಯ ಜಂಜಾಟದ ನಡುವೆಯೇ ಮುಂದುವರೆದ ಎಚ್ಡಿಕೆ ಟೆಂಪಲ್ ರನ್ ರಾಜಕೀಯ ಜಂಜಾಟದ ನಡುವೆಯೇ ಮುಂದುವರೆದ ಎಚ್ಡಿಕೆ ಟೆಂಪಲ್ ರನ್

ತಮಿಳುನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಡಳಿತ ಪಕ್ಷದ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು, ಯಾವುದೇ ಕಾರಣಕ್ಕೂ ಸರ್ಕಾರ ಪಥನವಾಗುವುದಿಲ್ಲ ಎಂದು ಹೇಳಿದ್ದಾರೆ.

English summary
Cm Kumaraswamy visit temple in Tamilnadu's Tutukudi long with his wife Anita Kumaraswamy and son Nikhil Kumaraswamy. He keep on visiting many temples from the time he become CM of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X