ಪಿಎಸ್‌ಐ ಜಗದೀಶ್ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರ
ಬೆಂಗಳೂರು, ಅಕ್ಟೋಬರ್ 21 : ಪೊಲೀಸ್ ಸಂಸ್ಮರಣಾ ದಿನದ ಪ್ರಯುಕ್ತ ಹುತಾತ್ಮ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಠಾಣೆಯ ಪಿಎಸ್‌ಐ ಜಗದೀಶ್ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರದ ಚೆಕ್ ಅನ್ನು ನೀಡಿದರು.
ಪೊಲೀಸ್ ಸಂಸ್ಮರಣಾ ದಿನದ ಪ್ರಯುಕ್ತ ಮೈಸೂರು ರಸ್ತೆಯಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ ಬುಧವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್ ಹುತಾತ್ಮ ಪೊಲೀಸರಿಗೆ ನಮನವನ್ನು ಸಲ್ಲಿಸಿದರು. [ಜಗದೀಶ್ ಕೊಂದವರು ಸಿಕ್ಕಿಬಿದ್ದದ್ದು ಹೇಗೆ?]

2014ರ ಸೆಪ್ಟೆಂಬರ್ 1 ರಿಂದ 2015ರ ಸೆಪ್ಟೆಂಬರ್ 31ರವರೆಗೆ ದೇಶಾದ್ಯಂತ ಕರ್ತವ್ಯ ನಿರತರಾಗಿದ್ದ ವೇಳೆ ಮೃತಪಟ್ಟ ಪೊಲೀಸ್ ಸಿಬ್ಬಂದಿಗೆ ಇಂದು ನಮನ ಸಲ್ಲಿಸಲಾಯಿತು. ಡಿಜಿಪಿ ಓಂ ಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [ಜಗದೀಶ್ ಕೊಂದ ಮಧು ಬಗ್ಗೆ ಓದಿ]
ಚೆಕ್ ವಿತರಣೆ : ಬೈಕ್ ಕಳ್ಳರನ್ನು ಹಿಡಿಯಲು ಹೋದಾಗ ಅವರಿಂದ ಹತ್ಯೆಯಾದ ದೊಡ್ಡಬಳ್ಳಾಪುರ ಠಾಣೆಯ ಪಿಎಸ್‌ಐ ಜಗದೀಶ್ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಣೆ ಮಾಡಲಾಯಿತು. ಜಗದೀಶ್ ಅವರ ಪತ್ನಿ ರಮ್ಯಾ ಅವರು ಚೆಕ್ ಪಡೆದರು. [ಜಗದೀಶ್ ಪರಿಚಯ ಓದಿ]

ಸರ್ಕಾರಿ ಉದ್ಯೋಗ ನೀಡಲು ಮನವಿ : 'ಮೃತ ಪಿಎಸ್‌ಐ ಜಗದೀಶ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಜಗದೀಶ್ ಕುಟುಂಬ ಸದಸ್ಯರು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. 'ರಮ್ಯಾ ಅವರು ಎಂ.ಕಾಂ ಓದಿದ್ದಾರೆ. ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕೆಂದು ಮನವಿ ಮಾಡಲಾಯಿತು.
#PoliceCommemorationDayParade at City Armed Reserve - Head Quarters, Bengaluru. @CPBlr @CMofKarnataka @thekjgeorge
Posted by BENGALURU CITY POLICE onTuesday, October 20, 2015












Click it and Unblock the Notifications