ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ

|
Google Oneindia Kannada News

ಬೆಂಗಳೂರು, ಮೇ 19; ಕೋವಿಡ್ 2ನೇ ಅಲೆಯು ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಮೇ 10 ರಿಂದ 24ರ ತನಕ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ಆರ್ಥಿಕ ನಷ್ಟ ಅನುಭವಿಸಿದ ಜನರಿಗಾಗಿ ಕರ್ನಾಟಕ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

Recommended Video

ಬಡವರ ಕಷ್ಟಕ್ಕೆ ಸ್ಪಂದಿಸಿದ BSY!! | Oneindia Kannada

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಹೂವು ಬೆಳೆಗಾರರು, ಬೀದಿ ಬದಿ ವ್ಯಾಪಾರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಶೇಷ ಪ್ಯಾಕೇಜ್ ಅಡಿ ಸಹಾಯಧನ ಸಿಗಲಿದೆ.

ಕರ್ನಾಟಕ; ಮೋದಿ ಸಭೆ ಬಳಿಕ ಹಲವು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ಕರ್ನಾಟಕ; ಮೋದಿ ಸಭೆ ಬಳಿಕ ಹಲವು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್

"ಲಾಕ್‌ಡೌನ್ ಮೇ 24ರ ತನಕ ಜಾರಿಯಲ್ಲಿದೆ. ಮೇ 23ರಂದು ಸಭೆ ನಡೆಸಿ ವಿಸ್ತರಣೆ ಮಾಡಬೇಕೆ?, ಬೇಡವೇ? ಎಂಬ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ" ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಲಾಕ್ ಡೌನ್: ಆರ್ಥಿಕ ಪ್ಯಾಕೇಜ್ ಘೋಷಿಸಲು ಸಿಎಂಗೆ ಎಎಪಿ ಆಗ್ರಹ ಲಾಕ್ ಡೌನ್: ಆರ್ಥಿಕ ಪ್ಯಾಕೇಜ್ ಘೋಷಿಸಲು ಸಿಎಂಗೆ ಎಎಪಿ ಆಗ್ರಹ

"ಸರ್ಕಾರ ಘೋಷಣೆ ಮಾಡಿದ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನಿಂದಾಗಿ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಮೀನುಗಾರಿಕೆಗೆ 'ಲಾಕ್': ಕಾರ್ಮಿಕರಿಲ್ಲದೆ ಬಂದರುಗಳಲ್ಲಿ ನಿಂತಲ್ಲೇ ನಿಂತ ದೋಣಿಗಳುಮೀನುಗಾರಿಕೆಗೆ 'ಲಾಕ್': ಕಾರ್ಮಿಕರಿಲ್ಲದೆ ಬಂದರುಗಳಲ್ಲಿ ನಿಂತಲ್ಲೇ ನಿಂತ ದೋಣಿಗಳು

"ಕಳೆದ ಬಾರಿಯ ತಪ್ಪನ್ನು ಈ ಬಾರಿ ಮಾಡುವುದಿಲ್ಲ. ವಿಶೇಷ ಪ್ಯಾಕೇಜ್ ವ್ಯಾಪ್ಯಿಗೆ ಒಳಪಡುವ ಜನರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರವನ್ನು ಜಮೆ ಮಾಡಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ಯಾಕೇಜ್ ಘೋಷಣೆ ಮಾಡಿದ್ದೇವೆ

ಪ್ಯಾಕೇಜ್ ಘೋಷಣೆ ಮಾಡಿದ್ದೇವೆ

"ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಫಲಾನುಭವಿಗಳಿಗೆ ಸಹಾಯಧನ ನೀಡಲು ಶಕ್ತಿ ಮೀರಿ ಪ್ರಯತ್ನ ನಡೆಸುತ್ತೇವೆ. ಎಲ್ಲಾ ಫಲಾನುಭವಿಗಳಿಗೆ ಸಹಾಯಧನ ಸಿಗಲಿದೆ" ಎಂದು ಯಡಿಯೂರಪ್ಪ ಹೇಳಿದರು.

ಹೂವು ಬೆಳೆಗಾರರು

ಹೂವು ಬೆಳೆಗಾರರು

ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ಹೂವು ಹಾನಿಗೆ 10 ಸಾವಿರ ರೂ. ಮತ್ತು ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ನಷ್ಟ ಉಂಟಾಗಿದ್ದರೆ ಗರಿಷ್ಠ 1 ಹೆಕ್ಟೇರ್‌ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್‌ಗೆ 10,000 ರೂ.ನಂತೆ ಸಹಾಯ ಒದಗಿಸಲಾಗುತ್ತದೆ.

ಆಟೋ, ಟ್ಯಾಕ್ಸಿ ಚಾಲಕರು

ಆಟೋ, ಟ್ಯಾಕ್ಸಿ ಚಾಲಕರು

ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ (ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ) ರೂ. 3000 ಪ್ರತಿ ಚಾಲಕರಿಗೆ ಪರಿಹಾರ ನೀಡಲಾಗುತ್ತದೆ. ಇದರ ಅಡಿ ಒಟ್ಟು 2.10 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, 63 ಕೋಟಿ ವೆಚ್ಚವಾಗಲಿದೆ.

ಗ್ರಾಮ ಪಂಚಾಯಿತಿಗೆ ಅನುದಾನ

ಗ್ರಾಮ ಪಂಚಾಯಿತಿಗೆ ಅನುದಾನ

ಗ್ರಾಮಗಳಲ್ಲಿ ಕೋವಿಡ್ ನಿರ್ವಹಣೆಗಾಗಿ ಎಸ್. ಡಿ. ಆರ್. ಎಫ್. ಹಣವನ್ನು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ರೂ. 50 ಸಾವಿರ ಮುಂಗಡವಾಗಿ ನೀಡಲಾಗುತ್ತದೆ. ಇದರಿಂದಾಗಿ 6 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಸಹಕಾರಿಯಾಗಲಿದೆ.

ರಸ್ತೆ ಬದಿ ವ್ಯಾಪಾರಿಗಳು

ರಸ್ತೆ ಬದಿ ವ್ಯಾಪಾರಿಗಳು

ರಸ್ತೆ ಬದಿ ವ್ಯಾಪಾರಸ್ಥರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆತ್ಮ ನಿರ್ಭರ್ ನಿಧಿಯಲ್ಲಿ ನೋಂದಣಿ ಹೊಂದಿದ ವ್ಯಾಪಾರಿಗಳಿಗೆ ತಲಾ 2 ಸಾವಿರ ರೂ. ನೀಡಲಾಗುತ್ತದೆ. ಇದರಿಂದಾಗಿ 2.20 ಲಕ್ಷ ಜನರಿಗೆ ಸಹಾಯಕವಾಗಲಿದ್ದು, ಒಟ್ಟು ಮೊತ್ತ 44 ಕೋಟಿ ಆಗಿದೆ.

English summary
Karnataka got announces relief package of Rs 1250 crore for farmers, constructions workers, unorganised sector workers etc as financial help during second wave COVID19 lockdown. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X