ಟಿಪ್ಪು ಜಯಂತಿ ರದ್ದು: ಹೊಸ ಸರ್ಕಾರದ ಕ್ರಮಕ್ಕೆ ಯಾರು, ಏನಂದ್ರು?

Recommended Video

      ಬಿ ಎಸ್ ಯಡಿಯೂರಪ್ಪ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದ ಹಿನ್ನೆಲೆ ಯಾರು ಏನು ಹೇಳಿದರು? | Oneindia Kannada

      ಬೆಂಗಳೂರು, ಜುಲೈ 30: ವಿವಾದಿತ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ನಡೆಗೆ ಪರ-ವಿರೋಧದ ಚರ್ಚೆ ಆರಂಭವಾಗಿದೆ.

      ಬಲಪಂಥೀಯರು ಈ ನಡೆಯನ್ನು ಸ್ವಾಗತಿಸಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ನಾಯಕರು ಈ ನಡೆಯನ್ನು ಟೀಕಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ತನ್ನ ಆಕ್ರೋಶ ಹೊರಹಾಕಿದೆ.

      ಪ್ರತಿ ವರ್ಷ ನವೆಂಬರ್ 10 ಅನ್ನು ಟಿಪ್ಪು ಜಯಂತಿಯನ್ನಾಗಿ ಆಚರಿಸಲು 2016 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ನಿರ್ಧರಿಸಲಾಗಿತ್ತು. ನಂತರ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಈ ಜಯಂತಿಯನ್ನು ಆಚರಿಸಲಾಗುತ್ತಿತ್ತು.

      ತೇಜಸ್ವಿ ಸೂರ್ಯ

      ತೇಜಸ್ವಿ ಸೂರ್ಯ

      ಸಾವಿರಾರು ಹಿಂದುಗಳ ಮಾರಣಹೋಮಕ್ಕೆ ಕಾರಣನಾದ ಟಿಪ್ಪು ಸುಲ್ತಾನ್ ನ ಜಯಂತಿಯನ್ನು ಆಚರಿಸುವುದನ್ನು ತನ್ನ ಕರ್ತವ್ಯ ಎಂದು ಈ ಹಿಂದಿನ ಸರ್ಕಾರಗಳು ಅಂದುಕೊಂಡಿದ್ದವು. ಆದರೆ ಅದು ತಪ್ಪು ಎಂದು ತೋರಿಸಿ, ಜಯಂತಿಯನ್ನು ರದ್ದು ಮಾಡುವ ಮೂಲಕ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ- ತೇಜಸ್ವಿ ಸೂರ್ಯ, ಬಿಜೆಪಿ ಸಂಸದ

      ದಿನೇಶ್ ಗುಂಡೂರಾವ್

      ದಿನೇಶ್ ಗುಂಡೂರಾವ್

      ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದ್ದು ದ್ವೇಷ ರಾಜಕಾರಣದ ಪರಮಾವಧಿ. ಬಿಜೆಪಿಗೆ ಟಿಪ್ಪು ಕೇವಲ ಓಟ್ ಬ್ಯಾಂಕ್, ಪ್ರಚೋದನೆಯ ಸರಕು. ವಾಸ್ತವದಲ್ಲಿ ಟಿಪ್ಪು ಈ ನೆಲೆದ ಭಾವೈಕ್ಯ ಸಂಸ್ಕೃತಿಯ ಒಬ್ಬ ರಾಯಭಾರಿ'ಸರ್ವಜನಾಂಗದ ಶಾಂತಿಯ ತೋಟ'ವನ್ನು ಹಿಂಬಾಗಿಲ ಸಿಎಂ, ಉತ್ತರಪ್ರದೇಶ ಮಾದರಿ‌ ಮಾಡಲು ಹೊರಟಿದ್ದಾರೆ- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

      ಶೋಭಾ ಕರಂದ್ಲಾಜೆ

      ಶೋಭಾ ಕರಂದ್ಲಾಜೆ

      ಸಾವಿರಾರು ಹಿಂದುಗಳ ಧ್ವನಿಯನ್ನು ಆಲಿಸಿ, ನಿರಂಕುಶ ಟಿಪ್ಪುವಿನ ಜಯಂತಿಯನ್ನು ರದ್ದು ಮಾಡಿದ್ದಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಕೋಮುವಾದಿ ಕಾಂಗ್ರೆಸ್ ಈ ಕೊಲೆಗಾರನ ಜಯಂತಿ ಆಚರಿಸುವುದರಲ್ಲಿ ತಲ್ಲೀನವಾಗಿತ್ತು. ಆದರೆ ಬಿ.ಎಸ್.ಯಡಿಯೂರಪ್ಪನವರು ತಾವು ನೀಡಿದ ಮಾತನ್ನು ಉಳಿಸಿಕೊಂಡರು- ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ

      ಕರ್ನಾಟಕ ಕಾಂಗ್ರೆಸ್

      ಕರ್ನಾಟಕ ಕಾಂಗ್ರೆಸ್

      ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ವಚನ ಭ್ರಷ್ಟ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರ ಕೇವಲ ಕೋಮುವಾದ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ/ಆರೆಸ್ಸೆಸ್ ಇತಿಹಾಸವನ್ನು, ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ. ಟಿಪ್ಪು ಜಯಂತಿ ರದ್ದತಿಯಿಂದ ಬಿಜೆಪಿಯ ದ್ವಿಮುಖ ನೀತಿ ಬಹಿರಂಗವಾಗಿದೆ. -ಕರ್ನಾಟಕ ಕಾಂಗ್ರೆಸ್

      ಸಿಟಿ ರವಿ

      ಸಿಟಿ ರವಿ

      ಟಿಪ್ಪು ಜಯಂತಿಯನ್ನು ರದ್ದು ಮಾಡುವ ಕನ್ನಡಿಗರ ಬೇಡಿಕೆಯನ್ನು ಈಡೇರಿಸಿದ ಬಿ ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಧನ್ಯವಾದಗಳು. ಸಾವಿರಾರು ಹಿಂದುಗಳನ್ನು ಕೊಂದ ಕ್ರೂರಿಯ ಜಯಂತಿ ಆಚರಿಸಿ, ಕೋಮು ಸೌಹಾರ್ದ ಕದಡಿ, ಆ ಮೂಲಕ ತನ್ನ ಮತ ಬ್ಯಾಂಕ್ ಗಟ್ಟಿಗೊಳಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿತ್ತು- ಸಿಟಿ ರವಿ, ಬಿಜೆಪಿ ಶಾಸಕ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+