Get Updates
Get notified of breaking news, exclusive insights, and must-see stories!

CM Bommai Reaction On Jagadish Shettar: ಕಾಂಗ್ರೆಸ್‌ ನವರು ಜಗದೀಶ್‌ ಶೆಟ್ಟರ್ ಅವರನ್ನ ಬಳಸಿಕೊಂಡು ಹೊರಗೆ ಹಾಕ್ತಾರೆ: ಸಿಎಂ

ಬೆಂಗಳೂರು,ಏಪ್ರಿಲ್17:‌ ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ರಾಜ್ಯ ಬಿಜೆಪಿಯಲ್ಲಿ ಟಿಕೆಟ್‌ ಘೋಷಣೆಯ ಬೆನ್ನಲ್ಲೇ ಬಂಡಾಯದ ಬೆಂಕಿ ಜೋರಾಗಿದ್ದು, ಹಲವು ಹಿರಿಯ ನಾಯಕರು ಬಿಜೆಪಿಗೆ ಗುಡ್‌ ಬೈ ಹೇಳಿದ್ದಾರೆ.

ಹುಬ್ಬಳ್ಳಿ- ಧಾರವಾಡ ಕೇಂದ್ರಕ್ಕೆ ಬಿಜೆಪಿ ಟಿಕೆಟ್‌ ನೀಡದ ಹಿನ್ನಲೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

CM Bommai: Congress Will Use Jagadish Shettar for Elections and Later Throughs Him Out of the Party

ಕಾಂಗ್ರೆಸ್‌ ನವರು ಬಿಜೆಪಿ ನಾಯಕರನ್ನ ಸೇರ್ಪಡೆ ಮಾಡಿಕೊಂಡಿರಬಹುದು. ಆದರೆ, ಅವರ ಓಟ್ ಬ್ಯಾಂಕ್ ಸಂಪೂರ್ಣ ಕುಸಿದಿದೆ. ಬಿಜೆಪಿ ಅವರಿಗೆ ಉನ್ನತ ಸ್ಥಾನಕೊಟ್ಟಿತ್ತು. ಪಕ್ಷ ಬಿಡುವಾಗ ಏನಾದ್ರು ಕಾರಣ ಹೇಳಬೇಕಲ್ಲ ಹೀಗಾಗಿ ಆ ರೀತಿ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಕೋರ್ ಕಮಿಟಿಯಲ್ಲಿದ್ದವರು ತೀರ್ಮಾನ ತೆಗೆದುಕೊಳ್ಳುವ ಮಟ್ಟದಲ್ಲಿದ್ದವರು ಎಂದು ಹೇಳಿದರು.

ಕಾಂಗ್ರೆಸ್‌ ಹಿರಿಯ ನಾಯಕರನ್ನ ಬಳಸಿಕೊಂಡು ಬೀಸಾಡಿ, ಹೊರಗಡೆ ಹಾಕಿದೆ. ವಿರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸರನ್ನ ಹೊರಹಾಕಿದ್ರು, ಅಂತಹ ಪಕ್ಷಕ್ಕೆ ಈಗ ಹೋಗಿದ್ದಾರೆ
ಜಗದೀಶ ಶೆಟ್ಟರ್ ಅವರನ್ನ ಬಳಸಿಕೊಂಡು ಹೊರಗೆ ಹಾಕ್ತಾರೆ. ಕಾಂಗ್ರೆಸ್‌ನವರಿಗೆ ಈಗ ಲಿಂಗಾಯತರಿಗೆ ಏಕೆ ಇಷ್ಟು ಪ್ರೀತಿ ಬಂದಿದೆ ಗೊತ್ತಿಲ್ಲ. ಕಳೆದ 50 ವರ್ಷ ಲಿಂಗಾಯತ ನಾಯಕರನ್ನ ತುಳಿದವರೆ ಕಾಂಗ್ರೆಸ್‌ ನವರು ಎಂದು ವಾಗ್ದಾಳಿ ನಡೆಸಿದರು.

CM Bommai: Congress Will Use Jagadish Shettar for Elections and Later Throughs Him Out of the Party

50 ವರ್ಷ ಲಿಂಗಾಯತರನ್ನ ದೂರ ಇಟ್ಟವರು ಕಾಂಗ್ರೆಸ್‌ ನವರು. ಇವರಿಂದ ಪಾಠ ಕಲಿಯಬೇಕಾ..? ಲಿಂಗಾಯತ ಸಮುದಾಯ ಜಾಗೃತ ಸಮುದಾಯ. ಯಾರು ಅವರನ್ನ ಬೆಂಬಲಿಸಿದ್ದಾರೆ, ಅವರ ಹಿತರಕ್ಷಣೆ ಮಾಡಿದ್ದಾರೆ ಎಂದು ಗೊತ್ತಿದೆ. ಯಡಿಯೂರಪ್ಪ ನವರಂತ ಮೇರು ನಾಯಕತ್ವ, ಬಹಳ ದೊಡ್ಡ ನಾಯಕತ್ವ ಇರುವಾಗ ಲಿಂಗಾಯತ ನಾಯಕರು ನಮ್ಮ ಜೊತೆ ಇರ್ತಾರೆ. ಇತರೆ ಸಮುದಾಯಗಳು ನಮ್ಮ ಜೊತೆ ಇರ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು.ಆದರೆ ಬಿಜೆಪಿಯ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ. ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದರು.

ಕಳೆದ 25 ವರ್ಷದ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್ ಗೆ ಎಲ್ಲವನ್ನೂ ಕೊಟ್ಟಿದೆ. ಅವರನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ.ಹೋಗಿದ್ದಾರೆ ಅದಕ್ಕೊಂದು ನೆಪ ಅಷ್ಟೇ ಎಂದ ಅವರು, ಜಗದೀಶ್ ಶೆಟ್ಟರ್ ಅವರು ವಾಪಸ್ಸು ಬರ್ತಾರೆ ಎಂಬ ಬಗ್ಗೆ ನಾವು ನಿರೀಕ್ಷೆ ಮಾಡಲ್ಲ ಎಂದರು.

ಜಗದೀಶ್ ಶೆಟ್ಟರ್ ಕೈ ಸೇರ್ಪಡೆ; ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಜಗದೀಶ್ ಶೆಟ್ಟರ್ ಹಾಗೂ ಅಮರ ಸಿಂಗ್ ಪಾಟೀಲ್ ಅವರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇವರಿಬ್ಬರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತ ಕೋರುತ್ತೇನೆ. ನಮ್ಮ ಪಕ್ಷದ ನೀತಿ, ಸಿದ್ಧಾಂತ ಅವರಿಗೆ ತಿಳಿದಿದೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ, ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅನೇಕ ವರ್ಷಗಳಿಂದ ಒಂದು ಪಕ್ಷ ಕಟ್ಟಿ ಬೆಳೆಸಿ ಅದಕ್ಕೆ ಶಕ್ತಿಯಾಗಿ ಕೆಲಸ ಮಾಡಿದ್ದರು. ಅದೇ ರೀತಿ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಕೆಲಸ ಮಾಡುವ ವಿಶ್ವಾಸವಿದೆ. ಅವರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗುವ ವಿಶ್ವಾಸವಿದೆ.

ಪಾಟೀಲ್ ಅವರು ಸಂಸದರು, ಪರಿಷತ್ ಸದಸ್ಯರು, ಶಾಸಕರಾಗಿದ್ದರು. ಅವರ ತಂದೆ ಅವರು ಕೂಡ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇವರು ನೂರಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.

ಶೆಟ್ಟರ್ ಅವರಿಗೆ ಜನಸಂಘದ ಹಿನ್ನೆಲೆ ಇದ್ದರೂ ಅವರೂ ಎಂದಿಗೂ ವಿವಾದವಿಲ್ಲದೇ ಕೆಲಸ ಮಾಡಿದಿದ್ದಾರೆ. ನಾವು ಸರ್ಕಾರದಲ್ಲಿದ್ದಾಗ ಅವರು ವಿರೋಧ ಪಕ್ಷದಲ್ಲಿದ್ದರು. ರಾಜಕೀಯವಾಗಿ ಜಟಾಪಟಿ ಇದ್ದರೂ ವೈಯಕ್ತಿಕವಾಗಿ ಎಂದಿಗೂ ಜಗಳವಾಡಿಲ್ಲ. ಅವರು ಬಹಳ ಸೌಮ್ಯವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.

ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮನವಿ ಮಾಡಿದ್ದರು. ಇಂದು ಶೆಟ್ಟರ್ ಅವರ ಪಕ್ಷ ಸೇರ್ಪಡೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ 150 ಕ್ಷೇತ್ರ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಅವರು ತಮ್ಮ ಕ್ಷೇತ್ರ ಮಾತ್ರವಲ್ಲ. ರಾಜ್ಯದ ಇತರೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ.'

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+