ಪದ್ಮವಿಭೂಷಣ ಎಸ್‌ಎಂ ಕೃಷ್ಣ ಸನ್ಮಾನಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣಾರನ್ನು ಭೇಟಿ ಮಾಡಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು.
ಬೆಂಗಳೂರು, ಜನವರಿ 27; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರನ್ನು ಭೇಟಿ ಮಾಡಿ ಅಭಿನಂದಿಸಿ, ಸನ್ಮಾನಿಸಿದರು.
ಶುಕ್ರವಾರ ಬೆಳಗ್ಗೆ ಬಸವರಾಜ ಬೊಮ್ಮಾಯಿ ಸದಾಶಿವನಗರದಲ್ಲಿನ ನಿವಾಸದಲ್ಲಿ ಎಸ್. ಎಂ. ಕೃಷ್ಣರನ್ನು ಭೇಟಿ ಮಾಡಿದರು. ಸಚಿವರಾದ ಆರ್. ಅಶೋಕ, ಡಾ. ಕೆ. ಸುಧಾಕರ್ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಸ್. ಎಂ. ಕೃಷ್ಣರನ್ನು ಅಭಿನಂದಿಸಿದರು. ಶಾಲು ಹೊದಿಸಿ ಅವರನ್ನು ಸನ್ಮಾಸಿಸಿದರು. ಬಳಿಕ ಅವರ ಜೊತೆ ಮಾತುಕತೆ ನಡೆಸಿದರು. ಜನವರಿ 25ರಂದು ಕೇಂದ್ರ ಸರ್ಕಾರ 2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟಿಸಿತ್ತು. ಎಸ್. ಎಂ. ಕೃಷ್ಣರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಎಸ್. ಎಂ. ಕೃಷ್ಣ ಭೇಟಿ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಎಸ್‌ಎಂಕೆ ಕರ್ನಾಟಕದ ಹೆಮ್ಮೆ, ನಾಡು ಕಂಡ ಸೃಜನಶೀಲ ಸರಳ ಸಜ್ಜನಿಕೆಯ ರಾಜಕಾರಣಿ. ಉತ್ತಮ ಆಡಳಿತಕ್ಕೆ ಹೆಸರಾದವರು" ಎಂದು ಬಣ್ಣಿಸಿದರು.
"ಎಸ್. ಎಂ. ಕೃಷ್ಣಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದು ಅತೀವ ಸಂತೋಷ ತಂದಿದೆ. ಅವರ ಆಡಳಿತದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ರೈತರಿಗಾಗಿ ಯಶಸ್ವಿನಿ ಯೋಜನೆ ಮತ್ತು ಮಧ್ಯಾಹ್ನದ ಬಿಸಿಊಟ ಯೋಜನೆಗಳನ್ನು ಮರೆಯೋಕೆ ಸಾಧ್ಯವಿಲ್ಲ" ಎಂದರು.

ರಾಜ್ಯದ ಜನರ ಪರವಾಗಿ ಅಭಿನಂದನೆ
ಎಸ್. ಎಂ. ಕೃಷ್ಣ ಸನ್ಮಾನಿಸಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, "ಕಾವೇರಿ, ಕೃಷ್ಣಾ ವಿಚಾರದಲ್ಲಿ ಅವರು ತಗೆದುಕೊಂಡು ನಿರ್ಧಾರ, ರಾಜ್ಯದಲ್ಲಿ ಐಟಿ-ಬಿಟಿ ಬೆಳೆಸಿದ್ದು ಎಸ್. ಎಂ. ಕೃಷ್ಣ ಅವರು. ನರೇಂದ್ರ ಮೋದಿಯವರು ಎಸ್. ಎಂ. ಕೃಷ್ಣ ಕಾರ್ಯವೈಖರಿಯನ್ನು ಗುರುತಿಸಿ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದಾರೆ. ಸಮಸ್ತ ರಾಜ್ಯದ ಜನತೆಯ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.

ಮಾಜಿ ಸಿಎಂ ಎಸ್. ಎಂ. ಕೃಷ್ಣ ಹೇಳಿಕೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, "ನನ್ನ ಯೋಗ್ಯತೆ ಮೀರಿ ದೊಡ್ಡ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೀಡಿದ್ದಾರೆ. ಈ ಪ್ರಶಸ್ತಿ ಕನಸು ಮನಸಿನಲ್ಲೂ ನೀರಿಕ್ಷಿಸಿರಲಿಲ್ಲ. ಬಯಸದೇ ಬಂದ ಭಾಗ್ಯವಿದು, ನನ್ನ ಆಡಳಿತ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಯಶಸ್ವಿನಿ ಮತ್ತು ಬಿಸಿಊಟ ನನ್ನ ಹೃದಯಕ್ಕೆ ಹತ್ತಿರವಾದದ್ದು. ಇನ್ನೂ ಹಲವಾರು ಸುಧಾರಣೆ ತರುವ ದಿಕ್ಕಿನಲ್ಲಿ ಬಸವರಾಜ ಬೊಮ್ಮಾಯಿ ಹೋಗಿದ್ದಾರೆ. ಕೆಂಪೇಗೌಡ ಪ್ರಶಸ್ತಿ ಬಳಿಕ ಪದ್ಮವಿಭೂಷಣ ನೀಡಿರುವುದು ಸಂತೋಷ, ನನ್ನ ಸಣ್ಣ ಸೇವೆ ಗುರುತಿಸಿದ್ದಾರೆ" ಎಂದರು.

ಆರ್. ಅಶೋಕ ಹೇಳಿಕೆ
ಎಸ್. ಎಂ. ಕೃಷ್ಣ ಭೇಟಿ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, "ಕೃಷ್ಣ ಅವರಿಗೆ ಪ್ರಶಸ್ತಿ ಬಂದಿದೆ, ಅವರ ಯೋಗ್ಯತೆಗೆ ತಕ್ಕ ಪ್ರಶಸ್ತಿ ಬಂದಿದೆ. ಅವರ ಪದ ಪ್ರಯೋಗ ಅಷ್ಟು ಹರಿತ, ಶುದ್ಧವಾಗಿತ್ತು ಬೆಂಗಳೂರು ಐಟಿಸಿಟಿ ಆಗಿದ್ದರೆ ಕೃಷ್ಣ ಅವರು ಕಾರಣ. ಕೆಂಪೇಗೌಡ ಹೇಗೆ ಬೆಂಗಳೂರು ಕಟ್ಟಿದರೋ ಅದೇ ರೀತಿಯಲ್ಲಿ ಬೆಂಗಳೂರು ಅಭಿವೃದ್ಧಿ ಮಾಡಿದ್ದು ಕೃಷ್ಣ ಅವರು. ಬೆಂಗಳೂರು ಅಭಿವೃದ್ಧಿ ಬಗ್ಗೆ ಮೊದಲ ಸಾಲಿನಲ್ಲಿ ಕೃಷ್ಣ ಅವರು ನಿಲ್ಲುತ್ತಾರೆ. ರಾಜಕಾರಣಿ ನಡವಳಿಕೆ ಹೇಗೆ ಇರಬೇಕು ಎಂದು ತೋರಿಸಿಕೊಟ್ಟವರು ಅವರು. ಟೀಕೆ ಟಿಪ್ಪಣಿಗೆ ಅವರದೇ ರೀತಿಯ ಉತ್ತರ ಕೊಟ್ವವರು. ನಾನು ಅಭಿಮಾನಿಯಾಗಿ ಶುಭ ಹಾರೈಕೆ ಮಾಡುತ್ತೇನೆ" ಎಂದರು.

ಆರೋಗ್ಯ ಸಚಿವರ ಹೇಳಿಕೆ
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, "ಕೃಷ್ಣ ಅವರು ರಾಜ್ಯ ಖಂಡ ಅಪರೂಪದ ವ್ಯಕ್ತಿ. ರಾಜ್ಯದ ಜನ ಅವರನ್ನು ಪ್ರೀತಿ ಮಾಡುತ್ತಾರೆ. ರಾಜ್ಯದ ಹಿರಿಮೆ, ಗರಿಮೆ ಹೆಚ್ಚು ಮಾಡಿರುವ ನಾಯಕರು ಅವರು. ಪಕ್ಷಾತೀತವಾಗಿ ಇದ್ದವರು ಅವರು. ಸಿಎಂ, ವಿದೇಶಾಂಗ ಸಚಿವರಾಗಿ ರಾಜ್ಯ ಮತ್ತು ದೇಶದ ಅಭಿವೃದ್ಧಿ ಮಾಡಿದ್ದಾರೆ. ಅವರ ನೆರಳಿನಲ್ಲಿ ನಾವು ರಾಜಕೀಯದಲ್ಲಿ ತೊಡಗಿಸಿಕೊಂಡರುವುದು ನಮ್ಮ ಅದೃಷ್ಟ. ಇವರ ಮಾರ್ಗ ದರ್ಶನ ನಮಗೆ ಅಗತ್ಯ, ಇದರಿಂದ ರಾಜಕೀಯಕ್ಕೆ ಗೌರವ ಸಿಗುತ್ತದೆ. ಮೇರು ವ್ಯಕ್ತಿತ್ವ ರಾಜಕಾರಣಿ ಮತ್ತು ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ಸಿಗುತ್ತದೆ ಎಂದು ಕೇಂದ್ರ ಸರ್ಕಾರ ತೋರಿಸಿದೆ. ನಮ್ಮ ತಂದೆಗೆ ಪ್ರಶಸ್ತಿ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications