ಕಾಂಗ್ರೆಸ್‌ ನಲ್ಲಿ ಕುರ್ಚಿಗಾಗಿ ಜಟಾಪಟಿ; ದಯಮಾಡಿ ಎಲ್ರೂ ಸುಮ್ಮನಿರಿ ಎಂದ ಚಲುವರಾಯಸ್ವಾಮಿ

ಹಾಸನ, ಅಕ್ಟೋಬರ್‌ 23: ನನ್ನ ನಾಯಕನಿಗೆ ಕುರ್ಚಿ ಸಿಗಲಿಲ್ಲವೆಂದು ಸ್ವಪಕ್ಷಿಯರೇ ಕುರ್ಚಿಗಾಗಿ ಕೈ-ಕೈ ಗಲಾಟೆ ಮಾಡಿಕೊಂಡ ಪ್ರಸಂಗ ನಡೆಯಿತು. ಹಾಸನ ಹೊರವಲಯದ ಕಲ್ಯಾಣ ಮಂಟಪವೊಂದರಲ್ಲಿ ಲೋಕಸಭಾ ಚುನಾವಣೆಗೆ ಅರ್ಭರ್ಥಿಯಾರಾಗಬೇಕೆಂದು ನಿರ್ಧರಿಸಲು ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.

ಈ ವೇಳೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಕರ್ಚಿ ಸಿಗಲಿಲ್ಲ ಎಂಬ ಕಾರಣಕ್ಕೆ ಗದ್ದಲ ಉಂಟಾಗಿದೆ. ಆಸನ ಸಿಕ್ಕಿಲ್ಲವೆಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್ ಬೆಂಬಲಿಗರಿಂದ ಗದ್ದಲ ಮಾಡಿದ್ರು. ಕಾರ್ಯಕರ್ತರ ವರ್ತನೆಗೆ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದ್ರು.

Clash Among Activists At Hassan Congress Meeting

ಹೌದು, ಹಾಸನ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಮೆಗಾ ಪ್ಲ್ಯಾನ್ ಮಾಡ್ತಿದೆ. ಹಾಗಾಗಿ ಹಾಸನ ಹೊರವಲಯದ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆದಿದ್ದು, ಗದ್ದಲ ಉಂಟಾಗಿದೆ. ಆಸನ ಸಿಕ್ಕಿಲ್ಲವೆಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್ ಬೆಂಬಲಿಗರಿಂದ ಕ್ಯಾತೆ ತೆಗೆದ್ರು. ಕಾರ್ಯಕರ್ತರ ವರ್ತನೆಗೆ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ಮಾಡಿಕೊಂಡು, 40 ವರ್ಷದ ನನ್ನ ರಾಜಕೀಯದಲ್ಲಿ ಇಂತಹ ಘಟನೆ ನೋಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ದಯಮಾಡಿ ಎಲ್ರೂ ಸುಮ್ಮನಿರಿ. ನೀವು ಈ ರೀತಿ ಗಲಾಟೆ ಮಾಡಿದರೆ ನಾನು ಹೊರಟು ಹೋಗುತ್ತೇನೆ. 40 ವರ್ಷದಲ್ಲಿ ಈ ರೀತಿ ಸಭೆ ನೋಡಿಲ್ಲ. ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೆ ಸರಿ ಮಾಡಿಕೊಂಡು ಹೋಗಬೇಕು. ಅದನ್ನು ಬಿಟ್ಟು ಈ ರೀತಿ ನಡೆದುಕೊಳ್ಳಬಾರದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಮನವಿ ಮಾಡಿದರು.

Clash Among Activists At Hassan Congress Meeting

ಹಾಸನ ಲೋಕಸಭಾ ಕ್ಷೇತ್ರ ಗೆಲ್ಲಲು 5 ತಿಂಗಳ ಮುಂಚೆಯೇ ಕಾಂಗ್ರೆಸ್ ಚುನಾವಣಾ ತಯಾರಿ ನಡೆಸಿದ್ದು, ಸಚಿವರಾದ ಕೆ.ಎನ್.ರಾಜಣ್ಣ, ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಕಾರ್ಯಕರ್ತರು, ಟಿಕೆಟ್ ಆಕಾಂಕ್ಷಿಗಳ ಜತೆ ಸಭೆ ನಡೆಸಿದರು. ಸಭೆಯಲ್ಲಿ ಕಾರ್ಯಕರ್ತರು, ಪ್ರಮುಖರಿಂದ ಮಾಹಿತಿ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+