Government Employee: ಸರ್ಕಾರಿ ನೌಕರರಿಗೆ ಪ್ರಭಾರ ಭತ್ಯೆ ಕುರಿತು ಸ್ಪಷ್ಟೀಕರಣಗಳು

ಬೆಂಗಳೂರು, ಜುಲೈ 29: ಕರ್ನಾಟಕದ ಸರ್ಕಾರಿ ನೌಕರರ ಪ್ರಭಾರ ಭತ್ಯೆ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಕಾಲ ಕಾಲಕ್ಕೆ ಈ ಕುರಿತು ಆರ್ಥಿಕ ಇಲಾಖೆ ಸ್ಪಷ್ಟನೆ ನೀಡುತ್ತಲೇ ಬಂದಿದೆ. ಮತ್ತೆ ಮತ್ತೆ ಸುತ್ತೋಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ನೌಕರರ ಗಮನಕ್ಕೆ ತರಲಾಗುತ್ತಿದೆ.

ಈಗ ಅಜಯ್ ಎಸ್. ಕೂರಡೆ, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-1) ಪ್ರಭಾರ ಭತ್ಯೆ ಮಂಜೂರಾತಿ ಬಗ್ಗೆ ನೀಡಿರುವ ಸ್ಪಷ್ಟೀಕರಣವೊಂದು ವೈರಲ್ ಆಗುತ್ತಿದೆ. 19/8/2023ರಂದು ಹೊರಡಿಸಿರುವ ಸುತ್ತೋಲೆ ಇದಾಗಿದೆ.

Clarification On Government Employee Deputation Allowance

ಸುತ್ತೋಲೆಯ ವಿವರಗಳು; ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಮತ್ತೊಂದು ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿ ಅಥವಾ ಹೆಚ್ಚುವರಿ ಪ್ರಭಾರದಲ್ಲಿ ಇರಿಸಿದ ಸಂದರ್ಭದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 68 ರಲ್ಲಿ ತಿಳಿಸಿರುವಂತೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

ಈ ಕುರಿತು ಹೊರಡಿಸಲಾಗಿರುವ ಉಲ್ಲೇಖಿತ ದಿನಾಂಕ 23/09/2022ರ ಸರ್ಕಾರಿ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಸೃಷ್ಟೀಕಣವನ್ನು ಕೋರುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಅಂಶಗಳನ್ನು ಸ್ಪಷ್ಟೀಕರಿಸಿದೆ ಎಂದು ಹೇಳಿದ್ದಾರೆ.

ಪ್ರಭಾರ ಭತ್ಯೆಯು, ಪ್ರಭಾರದಲ್ಲಿರಿಸಲ್ಪಟ್ಟ ಅಧಿಕಾರಿಯು ಸೆಳೆಯುತ್ತಿರುವ ಮೂಲ ವೇತನದ ಮೇಲೆಯೇ ನಿರ್ಧರಿತವಾಗುತ್ತದೆ. ಇದು ಅದೇ ನಿಯಮಾವಳಿಯ ನಿಯಮ 32 ರಡಿಯಲ್ಲಿನ ಸ್ವತಂತ್ರ ಪ್ರಭಾರ ವ್ಯವಸ್ಥೆ ಮತ್ತು ನಿಯಮ 68 ರ ಟಿಪ್ಪಣಿ 1 ರಡಿ ಮಾಡಲಾದ ಹೆಚ್ಚುವರಿ ಪ್ರಭಾರ ವ್ಯವಸ್ಥೆಗಳ ಎರಡೂ ಸಂದರ್ಭಗಳಲ್ಲಿ ಅನ್ವಯವಾಗುತ್ತದೆ.

ಪ್ರಭಾರ ಭತ್ಯೆಯು ಒಂದು ತಾತ್ಕಾಲಿಕ ಭತ್ಯೆಯಾಗಿದ್ದು, ಪ್ರಭಾರವನ್ನು ಹೊಂದಿದ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಇದು ಕರ್ನಾಟಕ ಆರ್ಥಿಕ ಸಂಹಿತೆಯ ಕಂಡಿಕೆ 99 ರಲ್ಲಿ ಉದ್ದೇಶಿತ ಸ್ಥಿರ ಭತ್ಯೆಯಾಗಿರುವುದಿಲ್ಲವಾದ್ದರಿಂದ ಈ ಭತ್ಯೆಯನ್ನು ಮಂಜೂರು ಮಾಡಲು ಮಹಾಲೇಖಪಾಲರು ಪ್ರಾಧಿಕರಿಸಬೇಕಾಗಿರುವುದಿಲ್ಲ.

ದಿನಾಂಕ 31/08/2022ರ ವರೆಗಿನ ಪ್ರಭಾರದ ಅವಧಿಗೆ ದಿನಾಂಕ 30/04/2019ರ ಸರ್ಕಾರಿ ಆದೇಶ ಆಇ 8 ಎಸ್‌ಆರ್‌ಎಸ್ 2018 ಹಾಗೂ ದಿನಾಂಕ 25/11/2019ರ ಸರ್ಕಾರದ ಸುತ್ತೋಲೆ ಸಂಖ್ಯೆ ಆಇ 05 (ಇ) ಸೇನಿಸೇ 2019ರಲ್ಲಿನ ಮಾರ್ಗಸೂಚಿ ಅನ್ವಯವಾಗುವುದಾಗಿದ್ದು, ದಿನಾಂಕ 01/09/2022ರ ನಂತರದ ಪ್ರಭಾರದ ಅವಧಿಗೆ ಉಲ್ಲೇಖಿತ ದಿನಾಂಕ 23/09/2022ರ ಸರ್ಕಾರಿ ಅದೇಶದಲ್ಲಿನ ಮಾರ್ಗಸೂಚಿ ಅನ್ವಯವಾಗುತ್ತದೆ. ಈಗಾಗಲೇ ಇತ್ಯರ್ಥಪಡಿಸಿರುವ ಪ್ರಕರಣಗಳಲ್ಲಿ ದಿನಾಂಕ 01/09/2022ರ ನಂತರದ ಅವಧಿಯಲ್ಲಿ ಪ್ರಭಾರ ನಿರ್ವಹಿಸಿರುವ ಪ್ರಕರಣಗಳಿಗೆ ಶೇ.7.5ರಷ್ಟು ದರದಲ್ಲಿ ಪ್ರಭಾರ ಭತ್ಯೆಯನ್ನು ಪಾವತಿಸಿರುವ ಪ್ರಕರಣಗಳಲ್ಲಿ ವ್ಯತ್ಯಾಸವನ್ನು ಪಾವತಿಸಬಹುದು.

ಒಂದು ವೇಳೆ ಹೆಚ್ಚುವರಿಯಾಗಿ ಪ್ರಭಾರ ಭತ್ಯೆ ಪಾವತಿಯಾಗಿದ್ದಲ್ಲಿ, ಅದನ್ನು ಹಿಂಭರಿಸಿಕೊಳ್ಳುವ ಹಕ್ಕನ್ನು ಸರ್ಕಾರವು ಕಾಯ್ದಿರಿಸಿಕೊಂಡಿರುತ್ತದೆ ಎಂಬ ಷರತ್ತನ್ನು ಪ್ರಭಾರ ಭತ್ಯೆಯನ್ನು ಮಂಜೂರು ಮಾಡುವ ಆದೇಶದಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.

ನಿಯಮ 68 ರಡಿಯಲ್ಲಿನ ಪ್ರಭಾರ ವ್ಯವಸ್ಥೆಯ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಂಬಂಧಿತ ನೌಕರರು ಪ್ರಭಾರ ಭತ್ಯೆಯನ್ನು ಕ್ಲೈಮು ಮಾಡಿದ ತಿಂಗಳ ವೇತನದ ಬಿಲ್ಲಿನೊಂದಿಗೆ ಕ್ಲೈಮ್‌ ಅನ್ನು ಇತ್ಯರ್ಥಪಡಿಸಿ ಪ್ರಭಾರ ಭತ್ಯೆಯ ಮೊತ್ತವನ್ನು ಪಾವತಿಸುವುದು.

ಪ್ರಭಾರ ವ್ಯವಸ್ಥೆಯನ್ನು ಮಾಡುವ ಸಕ್ಷಮ ಪ್ರಾಧಿಕಾರಿಗಳು ಹಾಗೂ ಅವರ ಅಧಿಕಾರ ಬಹಿರಂಗ ವ್ಯಾಪ್ತಿಯಲ್ಲಿ ನಿಯಮ 68 ರ ಟಿಪ್ಪಣಿ-8 ರಲ್ಲಿ ತಿಳಿಸಲಾಗಿರುವ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+