ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಸುತ್ತೋಲೆಗೆ ಶಕ್ತಿಸೌಧದ ಮಹಿಳಾ ಉದ್ಯೋಗಿಗಳು ಗರಂ

|
Google Oneindia Kannada News

ಬೆಂಗಳೂರು, ಜೂ. 04 : ವಿಧಾನಸೌಧದ ನೌಕರರಿಗೆ ಹೊರಡಿಸಿರುವ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ. ಮೊಬೈಲ್‌ನಲ್ಲಿ ಮಾತನಾಡಬೇಡಿ, ಕಾರಿಡಾರ್‌ನಲ್ಲಿ ತಿರುಗಾಡಬೇಡಿ ಎಂಬ ಸುತ್ತೋಲೆಗೆ ನೋಡಿದ ಮಹಿಳಾ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳಾ ಉದ್ಯೋಗಿಗಳನ್ನು ಮಾತ್ರ ಗುರಿಯಾಗಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಆದೇಶದಂತೆ ಮೇ 21ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿತ್ತು. ಕಚೇರಿ ಸಮಯದಲ್ಲಿ ನೌಕರರು ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಬಾರದು, ಕಾರಿಡಾರ್‌ನಲ್ಲಿ ಸುಮ್ಮನೆ ತಿರುಗಾಡಬಾರದು, ಗುಂಪು-ಗುಂಪಾಗಿ ಓಡಾಡಬಾರದು ಎಂಬುದು ಸುತ್ತೋಲೆಯ ಪ್ರಮುಖ ಅಂಶಗಳು.

vidhana soudha

ಆದರೆ, ಈ ಸುತ್ತೋಲೆಯಲ್ಲಿ ಮಹಿಳಾ ನೌಕರರು ಎಂದು ನಮೂದಿಸಿರುವುದು ಮಹಿಳಾ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಸುತ್ತೋಲೆಗೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ಜರುಗಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದ್ದು, ನೌಕರರು ಇದನ್ನು ನೋಡಿ ಗರಂ ಆಗಿದ್ದಾರೆ. [ಈ ಗ್ರಾಮದಲ್ಲಿ ಯುವತಿಯರು ಮೊಬೈಲ್ ಬಳಸುವಂತಿಲ್ಲ]

ನಮಗೆ ಮಾತ್ರ ಏಕೆ ನಿಯಮ? : ವಿಧಾನಸೌಧದ ನೌಕರರಿಗೆ ಬಂದಿರುವ ಸುತ್ತೋಲೆ ಹಿಂದಿರುವುದು ಸ್ಪೀಕರ್ ಕಾಗೋಡು ತಿಮ್ಮಪ್ಪ. ಉದ್ಯೋಗಿಗಳು ಕಚೇರಿ ಸಮಯದಲ್ಲಿ ಸುಮ್ಮನೆ ಕಾರಿಡಾರ್‌ನಲ್ಲಿ ಓಡಾಡುವುದು, ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುವುದನ್ನು ಪ್ರತ್ಯಕ್ಷವಾಗಿ ನೋಡಿದ್ದ ಅವರು, ಸುತ್ತೋಲೆ ಹೊರಡಿಸಲು ಸೂಚಿಸಿದ್ದರು. [ಮೊಬೈಲ್ ಅಲುಗಾಡಿಸಿ, ಕಾಮಾಂಧರನ್ನು ಹಿಡಿದು ಕೊಡಿ]

ಎರಡು ದಿನಗಳ ಹಿಂದೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಾಗೋಡು ತಿಮ್ಮಪ್ಪ ಅವರು, 'ಹಲವಾರು ಉದ್ಯೋಗಿಗಳು ಕಚೇರಿ ಸಮಯದಲ್ಲಿ ಕಾಲಹರಣ ಮಾಡುವುದು, ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುವುದನ್ನು ನಾನು ಗಮನಿಸಿದ್ದೇ. ಆದ್ದರಿಂದ ಸುತ್ತೋಲೆ ಹೊರಡಿಸಲು ಸೂಚನೆ ಕೊಟ್ಟಿದ್ದೆ' ಎಂದು ಹೇಳಿದ್ದರು.

ಆದರೆ, ಈ ಸುತ್ತೋಲೆಯಲ್ಲಿ ಮಹಿಳಾ ನೌಕರರು ಎಂದು ಮಾತ್ರ ಏಕೆ ನಮೂದಿಸಲಾಗಿದೆ? ಎಂಬುದು ಉದ್ಯೋಗಿಗಳ ಪ್ರಶ್ನೆ. ಪುರುಷ ನೌಕರರು ಕಾರಿಡಾರ್‌ನಲ್ಲಿ ಸುತ್ತಾಡುವುದಿಲ್ಲವೇ? ಎಂದು ಉದ್ಯೋಗಿಗಳು ಪ್ರಶ್ನಿಸಿದ್ದಾರೆ.

English summary
Karnataka personnel and administrative reforms department circular issued for vidhana soudha employees warning them against wasting office time by talking on the phone or walking in the corridors, sparks controversy for is that it was addressed to women employees only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X