ಮಕ್ಕಳು ಮತದಾರರಲ್ಲ-ಫಲಾನುಭವಿಗಳು; ಸಿದ್ದರಾಮಯ್ಯಗೆ ಪತ್ರ ಮುಖೇನ ಮನವಿ
ಬೆಂಗಳೂರು, ಮೇ 21: ಕೊರೊನಾ ಲಾಕ್‌ಡೌನ್ ನಂತರ ಮಕ್ಕಳ ಬದುಕಿನಲ್ಲಿ ಹಲವಾರು ಬದಲಾವಣೆ ಆಗಿವೆ. ಮಕ್ಕಳ ರಕ್ಷಣೆ ಕ್ರಮಗಳ ಬಗ್ಗೆ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಯಾವ ಅಂಶಗಳನ್ನು ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಮಕ್ಕಳು ಹಕ್ಕುಗಳ ಟ್ರಸ್ಟ್ (Child Rights Trust) ಪತ್ರದ ಮುಖೇನ ಮನವಿ ಮಾಡಿದೆ.
ಇತ್ತೀಚೆಗೆ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಪ್ರತಿದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ವಲಸೆ ಬಂದ ನಂತರ ಹಲವು ಮಕ್ಕಳು ಸ್ಥಳಾಂತರವಾಗಿದ್ದಾರೆ. ಮಕ್ಕಳಿಗೆ ನೀಡುವ ಮೂಲಕ ಹಲವಾರು ಶಿಕ್ಷಣದ ವಿಚಾರಗಳನ್ನು ಕುರಿತು ಮುಂಜಾಗ್ರತೆ ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್. ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಅನೇಕ ವಿಚಾರಗಳ ಕುರಿತು ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಕಚೇರಿಗೆ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ತಲುಪಿಸಲಾಗಿದೆ.
ರಾಜ್ಯದ ಮಕ್ಕಳ ಭಾಗವಹಿಸುವ ಹಕ್ಕನ್ನು ಎತ್ತಿಹಿಡಿಯಲು ತಮಗೆ ಅವಕಾಶ ನೀಡಿದ್ದೇವೆ. ಈ ಹಿಂದೆ ತಾವು ಮುಖ್ಯ ಮಂತ್ರಿಗಳಾಗಿದ್ದಾಗ ತಮ್ಮ ಮಾರ್ಗದರ್ಶನದ ವಿಧಾನಸೌಧದಲ್ಲಿ ಎರಡು ಬಾರಿ ''ಮಕ್ಕಳ ಹಕ್ಕುಗಳ ಸಂಸತ್ತು '' ಆಯೋಜಿತವಾಗಿತ್ತು . ತಾವು ಮಕ್ಕಳೊಂದಿಗೆ ಒಡನಾಡಿದ ರೀತಿ, ಮಕ್ಕಳ ಪ್ರಶ್ನೆಗೆ ಸಮಾಧಾನದಿಂದ ಉತ್ತರಿಸಿದ ರೀತಿಗೆ ಮಾಧ್ಯಮ ಮಿತ್ರರು '' ಮಕ್ಕಳ ಸ್ನೇಹಿತ ಮುಖ್ಯ ಮಂತ್ರಿಗಳೆಂದು ಗುರುತಿಸಿದ್ದರು.
ಮಕ್ಕಳು ಮತದಾರರು ಅಲ್ಲ, ಫಲಾನುಭವಿಗಳು
ಮಕ್ಕಳು ಮತದಾರರು ಅಲ್ಲ, ಕೇವಲ ಅಭ್ಯರ್ಥಿಗಳು ಕೆಲವೊಮ್ಮೆ ಚುನಾವಣಾ ಮಕ್ಕಳ ಹಲವಾರು ಸಮಸ್ಯೆಗಳು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಕಂಡುಬರುವುದಿಲ್ಲ. ಆದರೆ ಆ ಸಮಸ್ಯೆಗಳಿಗೆ ಸರ್ಕಾರವು ಒಂದು ಪ್ರತಿಕ್ರಿಯೆ ಬೇಕಾದರೂ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ಯಾವುದೇ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಬಿಟ್ಟು ಹೋಗಿರುವ ಮಕ್ಕಳ ರಕ್ಷಣೆಯ ವಿಚಾರಗಳನ್ನು ತಾವು ಗಮನಿಸಿ ಕ್ರಮ ಕೈ ಗೊಳ್ಳ ರಾಜ್ಯದ ಮಕ್ಕಳ ಪರವಾಗಿ ತಮ್ಮಲ್ಲಿ ಈ ಮೂಲಕ ಮನವಿ ಮಾಡಲಾಗುವುದು. ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳ ಕುರಿತ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಕೋರಿದರು.
ಕೊರೊನಾ ಪಿಡುಗಿನ ನಂತರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಮಕ್ಕಳ ಸಂಸತ್ತು ಸಮಾಲೋಚನೆಗಳು ಆಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳೊಂದಿಗೆ ಶಿಕ್ಷಣ , ರಕ್ಷಣೆ, ಮನೋರಂಜನ ಹಾಗೂ ಇತರ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವ ಅವಶ್ಯಕತೆಯಿದೆ ಎಂದು ಅವರು ಸರ್ಕಾರಕ್ಕೆ ವಿವರಿಸಿದರು.
1989 ರ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992 ರಲ್ಲಿ ಸಹಿ ಮಾಡಿ ಮಕ್ಕಳ ಹಕ್ಕುಗಳು ಜಾರಿಗೆ ಆಗಿವೆ. ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವು ವ್ಯವಸ್ಥೆಗಳನ್ನು ಮಾಡಿದರೂ ಸಹ ನಿರಂತರವಾಗಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ದುರಂತದ ವಿಚಾರವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇಂದಿನ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಬೇಕಾದ ಹೊಣೆ ಸಮುದಾಯ, ಕುಟುಂಬ ಹಾಗೂ ಸರ್ಕಾರ ಜವಾಬ್ದಾರಿಯಾಗಿದೆ. ಮಕ್ಕಳನ್ನು ರಾಷ್ಟ್ರದ ಸಂಪತ್ತಾಗಿ ನಿರ್ಮಿಸಲು ಮಕ್ಕಳಿಗೆ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳು ದೊರಕುವಂತೆ ಮಾಡಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು. ಯೋಜನೆಗಳನ್ನು ರೂಪಿಸಬೇಕು ಎಂದು ಅವರು ತಿಳಿಸಿದರು.












Click it and Unblock the Notifications