ಡಾರ್ಜಿಲಿಂಗ್ ಹಿಂಸಾಚಾರದಲ್ಲಿ ಚಿಕ್ಕಬಳ್ಳಾಪುರದ ಯೋಧ ಹುತಾತ್ಮ
ಚಿಕ್ಕಬಳ್ಳಾಪುರ, ಜೂನ್ 22 : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಪ್ರತ್ಯೇಕ ಗೋರ್ಖಾ ಲ್ಯಾಂಡ್ ನಿರ್ಮಾಣಕ್ಕೆ ನಡೆಸುತ್ತಿರುವ ಹಿಂಸಾಚಾರದ ವೇಳೆ ಬುಧವಾರ ಕನ್ನಡಿಗ ಯೋಧ ಹುತಾತ್ಮರಾಗಿದ್ದಾರೆ.
ಗೋರ್ಖಾ ಲ್ಯಾಂಡ್ ನಿರ್ಮಾಣಕ್ಕೆ ಆಗ್ರಹಿಸಿ ಗೋರ್ಖಾ ಮುಕ್ತಿ ಮೋರ್ಚಾ ನಡೆಸಿದ ಹಿಂಸಾಚಾರದ ಗುಂಡಿನ ದಾಳಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದ ಯೋಧ ಗಂಗಾಧರ್ ಹುತಾತ್ಮರಾಗಿದ್ದಾರೆ.

ಕಳೆದ 20 ವರ್ಷಗಳಿಂದ ಬಿಎಸ್ ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮುನಿಯಪ್ಪ ಲಕ್ಷಮ್ಮ ದಂಪತಿಯ ಹಿರಿಯ ಪುತ್ರರಾದ ಗಂಗಾಧರ್, ಪತ್ನಿ ಶಿಲ್ಪಾ ಹಾಗೂ 10 ವರ್ಷದ ಪುತ್ರನನ್ನು ಆಗಲಿದ್ದಾರೆ.
ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಸಂಜೆ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸುವ ಸಾಧ್ಯತೆಗಳಿವೆ












Click it and Unblock the Notifications