ಡಿಸಿಗೆ ಏಕವಚನದಲ್ಲಿ ಗದರಿದ ಸಿಎಂ ಸಿದ್ದರಾಮಯ್ಯ, ವಿಡಿಯೋ ವೈರಲ್
ಜಿಲ್ಲಾಧಿಕಾರಿಯನ್ನು ತುಂಬಿದ ವೇದಿಕೆಯಲ್ಲಿ ಏಕ ವಚನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗಿದ್ದು. ಈ ವೈರಲ್ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೀನ್ಯಾಕೆ ಇಲ್ಲಿ ಕೂತಿದ್ದೀಯಾ ಎಂದು ಸಿದ್ದರಾಮಯ್ಯ ಅವರು ಏಕವಚನದಲ್ಲೇ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು, ಅಧಿಕಾರಿಗಳನ್ನು ಗದರುವುದು ಹೊಸ ವಿಷಯವೇನೂ ಅಲ್ಲ. ಆದರೆ ಈ ಬಾರಿ ಜಿಲ್ಲಾಧಿಕಾರಿಗಳನ್ನೇ ತುಂಬಿದ ಸಭೆಯಲ್ಲಿ ಕರೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು. ಇದಕ್ಕೆ ವಿರೋಧ ಪಕ್ಷಗಳು ಹಾಗೂ ಜನರಿಂದಲೂ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ದಿವಾಕರ್ ಅವರ ಸೀಟ್‌ನಿಂದ ಬೇರೆ ಕಡೆ ಕೂರುವಂತೆ ಮುಖ್ಯಮಂತ್ರಿ ಮಾಡಿರುವುದು ಹಾಗೂ ಏಕವಚನದಲ್ಲೇ ಮಾತನಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು. ಸಿದ್ದರಾಮಯ್ಯ ಅವರ ವರ್ತನೆಗೆ ವಿರೋಧ ವ್ಯಕ್ತವಾಗುತ್ತಿದೆ.

ಘಟನೆಯ ಹಿನ್ನೆಲೆ ಏನು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭವೊಂದರಲ್ಲಿ ಮಾತನಾಡುತ್ತಿರುವಾಗ ಡಿಸಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಕುಳಿತಿರುವುದು ಇದೆ. ಇದನ್ನು ನೋಡಿದ ಮುಖ್ಯಮಂತ್ರಿ ಅವರು ನೀನ್ಯಾಕೆ ಇಲ್ಲಿ ಕುಂತಿದ್ದೀಯ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮುಂದೆ ಬಂದ ಡಿಸಿ ಅವರು ಸರ್ ನಾನು ಡಿಸಿ ಅಂತ ಹೇಳಿದ್ದಾರೆ. ಅದಕ್ಕೆ ಸ್ವಾಮೀಜಿ ಪಕ್ಕ ಕುಳಿತುಕೊಳ್ಳುತ್ತೀಯಾ.. ಎಲ್ಲಿ ಹೋಗು ಅಂತ ಬೇರೆ ಜಾಗ ತೋರಿಸಿದ್ದಾರೆ. ಡಿಸಿ ಅವರು ಎದ್ದು ಆ ಕಡೆ ಹೋದ ಮೇಲೂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಇದೀಗ ಈ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಜೆಪಿಯಿಂದಲೂ ವಿರೋಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳನ್ನು ಏಕವಚನದಲ್ಲಿ ಕರೆದಿರುವ ವಿಡಿಯೋ ವೈರಲ್ ಆಗುತ್ತಿದ್ದು. ಇದಕ್ಕೆ ವಿರೋಧ ಪಕ್ಷ ಬಿಜೆಪಿ ಸಹ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರದ ಅಮಲು ನೆತ್ತಿಗೆ ಏರಿದಾಗ ಈ ರೀತಿಯ ದುರಹಂಕಾರದ ಮಾತುಗಳು ಬರುತ್ತವೆ. ವೇದಿಕೆ ಮೇಲೆ ಜನರ ಮುಂದೆ ಹೀರೋ ಆಗುವುದಕ್ಕೆ ಹೋದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗೆ ಏಕವಚನದಲ್ಲಿ ಕರೆದು ದುರಹಂಕಾರ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಹಂಚಿ ರಾಜಕೀಯ ಪ್ರಭಾವ ಬಳಸಿಕೊಂಡು ಚುನಾವಣೆ ಗೆಲ್ಲುವ ಸಿದ್ದರಾಮಯ್ಯ ಅವರೇ ಅವರು ನಿಮ್ಮಂತೆ ದಲಿತರನ್ನು ತುಳಿದು ದಲಿತರ ಅಧಿಕಾರ ಆಸ್ತಿ ಕಿತ್ತುಕೊಂಡು ಅಧಿಕಾರಿ ಆಗಿಲ್ಲ. ಕಷ್ಟಪಟ್ಟು ಹಗಲುರಾತ್ರಿ ಎನ್ನದೇ ಓದಿ ದೇಶದ ಅತ್ಯುನ್ನತ ಅಧಿಕಾರವನ್ನು ಗಿಟ್ಟಿಸಿಕೊಂಡಿದ್ದಾರೆ.
ಗೌರವ ಕೊಟ್ಟು ಗೌರವ ಪಡೆಯುವ ವಿವೇಕ ರಾಜ್ಯದ ಮುಖ್ಯಮಂತ್ರಿಗೆ ಇಲ್ಲ ಎಂದರೆ ಹೇಗೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಸಾರ್ವಜನಿಕರಿಂದ ಆಕ್ರೋಶ: ಇನ್ನು ಡಿಸಿಯನ್ನು ತುಂಬಿದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದರಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಸಾರ್ವಜನಿಕರು ಸಹ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ದಲಿತ ಡಿಸಿಗೆ ಅವಮಾನ: ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ದಲಿತ ಡಿಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಮಾನ ಮಾಡಿದ್ದಾರೆ. ದಲಿತ ಡಿಸಿ ಸ್ವಾಮೀಜಿಗಳ ಪಕ್ಕ ಕುಳಿತಿರುವುದನ್ನು ನೋಡಿ ಕೋಪಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು. ಹಲವರು ಪರ - ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications