Chetan Ahimsa: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ, SIR ವಿವಾದದ ಬಗ್ಗೆ ಸರಣಿ ಪೋಸ್ಟ್; ಬಿಜೆಪಿಗೆ ಪರೋಕ್ಷ ಬೆಂಬಲ?
ಕಾಕ್ರೋಚ್ ಜನತಾ ಪಾರ್ಟಿಯ ವಿರುದ್ಧ ಹಾಗೂ ಮತದಾದರ ಪಟ್ಟಿ ಸಮಗ್ರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ಚೇತನ್ ಅಹಿಂಸಾ ಅವರು ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದಂತೆ ಸರಣಿ ಟ್ವೀಟ್ ಮಾಡಿದ್ದಾರೆ.
ಚೇತನ್ ಅಹಿಂಸಾ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಒಂದು ಪೋಸ್ಟ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಗೆ ಅವಕಾಶ ನೀಡುವಂತೆ ಚೇತನ್ ಅಹಿಂಸಾ ಅವರು ಹೇಳಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಎಸ್‌ಐಆರ್ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ.

ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚಿ, 23,000 ಪೊಲೀಸರನ್ನು ನಿಯೋಜಿಸಿರುವುದು ಶಾಂತಿಯುತ ಪ್ರತಿಭಟನೆ ನಡೆಸುವ ಸಂವಿಧಾನದ 19ನೇ ವಿಧಿಯ ಹಕ್ಕಿನ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಜಿರಳೆಗಳನ್ನು ಪ್ರತಿಭಟಿಸಲು ಬಿಡಿ! ಜನರೇ ತೀರ್ಮಾನಿಸಲಿ, ಕರ್ನಾಟಕದಲ್ಲೇ ನಡೆದಂತೆ. ಪ್ರತಿಭಟನೆಯ ಧ್ವನಿಯನ್ನು ಅಡಗಿಸಲು ಪೊಲೀಸರನ್ನು ಬಳಸುವುದು ಪ್ರಜಾಪ್ರಭುತ್ವವಲ್ಲ, ಅದು ಅಧಿಕಾರದಲ್ಲಿರುವವರ ಬಗ್ಗೆ ಜನರ ಅನುಮಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ವಿಪರ್ಯಾಸವೆಂದರೆ, ಪ್ರತಿಭಟಿಸುವ ಕಾಕ್ರೋಚ್‌ಗಳ ವಿಚಾರಧಾರೆಯಲ್ಲ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದಬ್ಬಾಳಿಕೆಯೇ ಅದರ ಪತನಕ್ಕೆ ದಾರಿ ಮಾಡಿಕೊಟ್ಟಿರುವಂತೆ ಕಾಣುತ್ತದೆ ಎಂದು ಚೇತನ್ ಅಹಿಂಸಾ ಅವರು ಹೇಳಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ "ಮೋದಿ ಅವರು ಮತಗಳ್ಳತನ ಮಾಡಿ ಪ್ರಧಾನಿ ಆದರು' ಎನ್ನುವ ಸಾಲುಗಳೊಂದಿಗೆ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಮೋದಿ ಅವರು ಮತಗಳ್ಳತನ ಮಾಡಿ ಪ್ರಧಾನಿ ಆದರು ಎಂಬ ಕಾಕ್‌ರೋಚ್‌ನ ಆರೋಪವು, ಮನುವಾದಿಗಳು ಮತ್ತು SIR ವಿರೋಧಿಗಳು ಯಾವುದೇ ಆಧಾರವಿಲ್ಲದೆ ಮಾಡುವ ಆರೋಪಗಳಿಗೆ ಮತ್ತೊಂದು ಉದಾಹರಣೆ.
ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ತಮಿಳುನಾಡಿನ ಟಿವಿಕೆ ಮುಖ್ಯಮಂತ್ರಿ ಕೂಡ 'ಮತಗಳ್ಳರೇ'? ನಿಮ್ಮಕೈಯಲ್ಲಿ ಸುತ್ತಿಗೆ ಒಂದೇ ಇದ್ದರೆ, ಎಲ್ಲವೂ ಮೊಳೆಯಂತೆ ಕಾಣುತ್ತದೆ. ಅದೇ ರೀತಿ, ನಿಮ್ಮ ಮನಸ್ಸಿನಲ್ಲಿ ಬಿಜೆಪಿಯನ್ನು ವಿರೋಧಿಸುವ ಒಂದೇ ಆಲೋಚನೆ ಇದ್ದರೆ, ಪ್ರತಿಯೊಂದೂ ಪಿತೂರಿಯಂತೆ ಕಾಣುತ್ತದೆ. ನಿಮ್ಮ ಅಜೆಂಡಾಗೆ ಹೊಂದಿಕೆಯಾಗದ ಪ್ರತಿಯೊಂದು ಚುನಾವಣಾ ಫಲಿತಾಂಶವೂ 'ಮತಗಳ್ಳತನ' ಎನಿಸುತ್ತದೆ. ಮತ್ತೊಂದು ಕಾಕ್‌ರೋಚ್ ಸುಳ್ಳೇ? ಬಹುಶಃ ಹೌದು. ಎಂದಿನಂತೆ
ಕಾಕ್‌ರೋಚ್‌ನ ಅಜ್ಞಾನವೇ? ಖಂಡಿತ ಎಂದೂ ಮತ್ತೊಂದು ಪೋಸ್ಟ್‌ನಲ್ಲಿ ಚೇತನ್ ಅಹಿಂಸಾ ಅವರು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಈಗ ನಡೆಯುತ್ತಿರುವ ಮನುವಾದಿಗಳ-ಬೆಂಬಲಿತ SIR ವಿರೋಧಿ ಪ್ರತಿಭಟನೆಗಳನ್ನು ನೋಡಿದಾಗ, ಸುಮಾರು ಒಂದು ಶತಮಾನದ ಹಿಂದೆ ಕಾಂಗ್ರೆಸ್ ಬೆಂಬಲಿಸಿದ್ದ ಖಿಲಾಫತ್ ಚಳವಳಿ ನೆನಪಾಗುತ್ತದೆ. SIR ವಿರೋಧಿ ಪ್ರತಿಭಟನೆ ಮತ್ತು ಖಿಲಾಫತ್ ಚಳವಳಿ-ಎರಡರ ಬೇಡಿಕೆಗಳೂ ದೋಷಪೂರಿತವಾಗಿವೆ; ಎರಡಕ್ಕೂ ಲಿಬರಲ್ ಮಾಧ್ಯಮಗಳ ಭಾರೀ ಬೆಂಬಲವಿದೆ; ಅಲ್ಲದೆ, ಅಂದಿನ ಬ್ರಿಟಿಷ್ ಆಡಳಿತವಾಗಲಿ, ಇಂದಿನ ಕೇಂದ್ರ ಸರ್ಕಾರವಾಗಲಿ, ಎರಡೂ ಚಳವಳಿಗಳ ವಿಚಾರದಲ್ಲಿ ವಿರೋಧ ಮತ್ತು ನಿರ್ಬಂಧಗಳ ಆರೋಪಗಳು ಕೇಳಿಬಂದಿವೆ.
ಇತಿಹಾಸ ಆಗಾಗ ಮರುಕಳಿಸದ್ದರೂ, ಅದರ ಪ್ರತಿಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಒಂದು ಪ್ರತಿಭಟನೆ ಕಾಲದ ಪರೀಕ್ಷೆಯಲ್ಲಿ ಗೆಲ್ಲಬೇಕಾದರೆ, ಮಾಧ್ಯಮಗಳು ಕಟ್ಟಿಕೊಡುವ ಕಥನವಲ್ಲ, ಅದರ ಬೇಡಿಕೆಗಳ ನ್ಯಾಯಸಮ್ಮತತೆಯೇ ಮುಖ್ಯವಾಗಬೇಕು ಎಂದೂ ಚೇತನ್ ಅಹಿಂಸಾ ಅವರು ಹೇಳಿದ್ದಾರೆ.


Click it and Unblock the Notifications
