ಸಂಚಾರಕ್ಕೆ ತೆರೆದುಕೊಂಡ ಚಾರ್ಮಾಡಿ ಘಾಟ್, ಭಾರೀ ವಾಹನಕ್ಕಿಲ್ಲ ಅನುಮತಿ
ಚಿಕ್ಕಮಗಳೂರು, ಜೂನ್ 15: ಭಾರೀ ಮಳೆಯಿಂದ ಸಂಭವಿಸಿದ್ದ ಗುಡ್ಡ ಕುಸಿತದಿಂದ ಮುಚ್ಚಲ್ಪಟ್ಟಿದ್ದ ಚಾರ್ಮಾಡಿ ಘಾಟ್ ನಿನ್ನೆ(ಜೂನ್ 14) ತಡರಾತ್ರಿಯಿಂದ ಮತ್ತೆ ಸಂಚಾರಕ್ಕೆ ತೆರೆದುಕೊಂಡಿದೆ.
ಆದರೆ ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಬಸ್ಸು, ಲಾರಿ ಇತ್ಯಾದಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿಲ್ಲ.
ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಚಾರ್ಮಾಡಿ ಘಾಟ್ ನ 4, 7, 8, 9ನೇ ತಿರುವಿನಲ್ಲಿ ಗುಡ್ಡ ಕುಸಿದುಬಿದ್ದಿದ್ದವು. ಮುಂಜಾಗ್ರತೆಯಿಂದ ವಾಹನ ಸಂಚಾರ ಬಂದ್ ಮಾಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

ಮೂರು ದಿನಗಳಿಂದ ಜೆಸಿಬಿ, ಹಿಟ್ಯಾಚಿಗಳ ಮೂಲಕ ನಿರಂಗತರವಾಗಿ ಮಣ್ಣನನ್ನು ತೆರುವುಗೊಳಿಸವ ಕಾರ್ಯ ನಡೆದಿದ್ದು, ಇದೀಗ ಕೊಂಚ ಮಳೆಯೂ ಕಡಿಮೆಯಾಗಿರುವುದರಿಂದ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಮೂರು ದಿನಗಳ ಹಿಂದೆ ಈ ಮಾರ್ಗವಾಗಿ ಹೊರಟಿದ್ದ ಸಾವಿರಾರು ಜನ ಚಾರ್ಮಾಡಿ ಘಾಟ್ ತಾತ್ಕಾಲಿಕವಾಗಿ ಮುಚ್ಚಿದ್ದರಿಂದ ಪರದಾಡುವಂತಾಗಿತ್ತು.












Click it and Unblock the Notifications