Get Updates
Get notified of breaking news, exclusive insights, and must-see stories!

Government Employee: ಸರ್ಕಾರಿ ನೌಕರರ ಕೆಜಿಐಡಿ ನಿಯಮ ತಿದ್ದುಪಡಿ, ಮಾಸಿಕ ಎಷ್ಟು ಪಾವತಿಸಬೇಕು

ಬೆಂಗಳೂರು, ಅಕ್ಟೋಬರ್ 26: ಕರ್ನಾಟಕದ ಸರ್ಕಾರಿ ನೌಕರರಿಗೆ ಪ್ರಮುಖವಾದ ಮಾಹಿತಿ ಇದೆ. ಕೆಜಿಐಡಿ ನಿಯಮ ತಿದ್ದುಪಡಿ ಮಾಡಲಾಗಿದೆ. ಈಗಾಗಲೇ ಸರ್ಕಾರ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣವಾಗಿ ಗಣಕೀಕರಣ ಮಾಡಿದೆ. ವಿಮಾದಾರರಿಗೆ ಆನ್‌ಲೈನ್ ಮೂಲಕವೇ ಸೇವೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರಿ ನೌಕರರು ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ತಪ್ಪಾಗಿ ನಮೂದಾಗಿರುವ ಕೆಜಿಐಡಿ ಪ್ರಥಮ ಪಾಲಿಸಿ ಸಂಖ್ಯೆಯನ್ನು ಸರಿಪಡಿಸಲು ಅವಕಾಶ ನೀಡಲಾಗಿತ್ತು.

ಕೆಜಿಐಡಿ ನಿಯಮ ತಿದ್ದುಪಡಿ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನೇತ್ರಪ್ರಭಾ ಎಂ. ಧಾಯಪುಲೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಆಡಳಿತ & ಮುಂಗಡಗಳು) ಆದೇಶವನ್ನು ಹೊರಡಿಸಿದ್ದಾರೆ.

Change In Government Employees KGID Rule Details

ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 ರ (1990 ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ ಪರಂತುಕದೊಡನೆ ಓದಿಕೊಂಡು ಅದೇ 3ನೇ ಪ್ರಕರಣದ (1) ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದೆ ಎಂದು ಹೇಳಿದೆ.

ಶೀರ್ಷಿಕೆ ಮತ್ತು ಪ್ರಾರಂಭ:- ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು. ಈ ನಿಯಮಗಳು 2024ರ ಆಗಸ್ಟ್ ಒಂದನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

ನಿಯಮ 8 ರ ತಿದ್ದುಪಡಿ. ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು 1958ರ, ನಿಯಮ 8ರ 'ಕೋಷ್ಟಕ' ದಲ್ಲಿ ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಈ ಕೆಳಕಂಡಂತೆ ಪ್ರತಿಸ್ಥಾಪಿಸತಕ್ಕದ್ದು ಎಂದು ಹೇಳಿದೆ. ಕೋಷ್ಟಕದಲ್ಲಿ ವೇತನ ಶ್ರೇಣಿ ರೂ.ಗಳಲ್ಲಿ ಮತ್ತು ಕನಿಷ್ಟ ಮಾಸಿಕ ವಿಮಾ ಕಂತಿನ ಮೊಬಲಗು (ರೂ.ಗಳಲ್ಲಿ) ಎಂದು ವಿವರ ನೀಡಲಾಗಿದೆ.

1 ರಿಂದ 25ನೇ ವೇತನ ಶ್ರೇಣಿ ತನಕದ ಸರ್ಕಾರಿ ನೌಕರರು ಕನಿಷ್ಟ ಮಾಸಿಕ ವಿಮಾ ಕಂತು ಎಷ್ಟು ಪಾವತಿಸಬೇಕು? ಎಂದು ಮಾಹಿತಿ ನೀಡಲಾಗಿದೆ.

1. 27000-46675- 2300 ರೂ.ಗಳು.
2. 29600-52800 - 2580
3. 31775-61300 - 2910
4. 34100-67600 - 3180
5. 37500-76100 - 3550
6. 41300-81800 - 3850
7. 44425-83700 - 4000
8. 49050-92500 - 4420
9. 54175-99400 - 4800
10. 58300-107500 - 5180
11. 61300-112900 - 5440
12. 65950-124900 - 5960
13. 69250-134200 - 6360 ರೂ.ಗಳು.

14. 72550-141200 - 6680 ರೂ.ಗಳು.
15. 78000-148200 - 7070
16. 83700-155200 - 7470
17. 90200-163200 - 7790
18. 97100-163200 - 8130
19. 107500-167200 - 8580
20. 112900-171200 - 8880
21. 118700-175200 - 9180
22. 131100-188200 - 9980
23. 144700-197200 - 10680
24. 155200-226200 - 11920
25. 167200-241200 - 12760 ರೂ.ಗಳು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+