Get Updates
Get notified of breaking news, exclusive insights, and must-see stories!

ಗುಪ್ತಚರ ಇಲಾಖೆಯ ಗುಪ್ತ್ ಗುಪ್ತ್ ವರದಿ: ಈ 4 ಕ್ಷೇತ್ರಗಳಲ್ಲಿ 50:50, ಬಿಎಸ್ವೈ ಫುಲ್ ಟೆನ್ಸನ್

Recommended Video

      Karnataka By Elections 2019 : 10 AM updates

      ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಳ್ಳಲು ಕಾರಣಕರ್ತರಾದ ಹದಿನೈದು ಶಾಸಕರ ಪೈಕಿ, ಹದಿಮೂರು ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

      ಸೋಮವಾರ (ಡಿ 9) ಮಧ್ಯಾಹ್ನದ ಹೊತ್ತಿಗೆ, ಇವರೆಲ್ಲರೂ ಅರ್ಹರೋ, ಅನರ್ಹರೋ ಎನ್ನುವ ಜನತಾ ನ್ಯಾಯಾಲಯದ ತೀರ್ಪು ಹೊರಬೀಳಲಿದೆ. ಈ ನಡುವೆ, ಗುಪ್ತಚರ ಇಲಾಖೆಯ ಅಂತಿಮ ವರದಿ, ಮುಖ್ಯಮಂತ್ರಿಗಳ ಕೈಸೇರಿದೆ ಎನ್ನುವ ಮಾಹಿತಿಯಿದೆ.

      ಬಿಜೆಪಿ ಹದಿಮೂರು, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಲಿವೆ ಎನ್ನುವ ವಿಶ್ವಾಸದ ಮಾತನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಆಡಿದ್ದಾರೆ. ಆದರೂ, ಅವರ ಮುಖದಲ್ಲಿ ಆ ವಿಶ್ವಾಸ ಎದ್ದು ಕಾಣುತ್ತಿರಲಿಲ್ಲ.

      ಮುಖ್ಯಮಂತ್ರಿಗಳೇನೋ ಹದಿಮೂರು ಎಂದರೂ, ನಾಲ್ಕು ಕ್ಷೇತ್ರಗಳಲ್ಲಿ ಫಲಿತಾಂಶ ಹೇಗೆ ಬೇಕಾದರೂ ಬರಬಹುದು ಎನ್ನುವ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ನಾಲ್ಕು ಕ್ಷೇತ್ರಗಳು ಇವೇ...

      ಬಿಜೆಪಿ ಸರಕಾರ ಸೇಫ್

      ಬಿಜೆಪಿ ಸರಕಾರ ಸೇಫ್

      ಗುಪ್ತಚರ ಇಲಾಖೆ ನೀಡಿದೆ ಎನ್ನಲಾಗುತ್ತಿರುವ ಫಲಿತಾಂಶದ ಮುನ್ನಾ ಅಂತಿಮ ವರದಿಯ ಪ್ರಕಾರ, ಬಿಜೆಪಿ ಸರಕಾರ ಸೇಫ್. ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಒಂಬತ್ತು ಕ್ಷೇತ್ರದಲ್ಲಿ ಜಯ ಸಾಧಿಸಲಿದೆ. ಆದರೆ, ಸಿಎಂ ಹೇಳಿರುವ ಹದಿಮೂರರಲ್ಲಿ, ನಾಲ್ಕು ಕ್ಷೇತ್ರಗಳಲ್ಲಿ ಫಲಿತಾಂಶ 50:50 ಸಾಧ್ಯತೆ.

      ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ನೇರ ಫೈಟ್

      ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ನೇರ ಫೈಟ್

      ಹೊಸಕೋಟೆಯಲ್ಲಿ ಬಿಜೆಪಿಗೆ ನಿರಾಯಾಸ ಗೆಲುವು ಸಾಧ್ಯವಿಲ್ಲ. ಅಲ್ಲಿ, ಭಾರೀ ಎನ್ನಬಹುದಾದ ಶೇ. 90.90ರಷ್ಟು ಮತದಾನವಾಗಿದೆ. ವರದಿಯ ಪ್ರಕಾರ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆಯಿದೆ. ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ನೇರ ಫೈಟ್ ಇದ್ದು, ಫಲಿತಾಂಶ ಹೇಗೆ ಬೇಕಾದರೂ ಬರಬಹುದು.

      ಬಿಜೆಪಿಯ ಸರವಣ ಮತ್ತು ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ನಡುವೆ ಹಣಾಹಣಿ

      ಬಿಜೆಪಿಯ ಸರವಣ ಮತ್ತು ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ನಡುವೆ ಹಣಾಹಣಿ

      50:50 ಇರುವ ಇನ್ನೊಂದು ಕ್ಷೇತ್ರವೆಂದರೆ ಅದು ಬೆಂಗಳೂರು ವ್ಯಾಪ್ತಿಯ ಶಿವಾಜಿನಗರ. ಇಲ್ಲಿ, ಮತ್ತೆ ಜೆಡಿಎಸ್ಸಿನ ತನ್ವೀರ್ ಅಹಮದ್ ಮೂರನೇ ಸ್ಥಾನದಲ್ಲಿ ತೃಪ್ತಿ ಪಡಬೇಕಾಗಬಹುದು. ಬಿಜೆಪಿಯ ಸರವಣ ಮತ್ತು ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ನಡುವೆ ಹಣಾಹಣಿ. ಕ್ಷೇತ್ರದಲ್ಲಿ ಶೇ. 48.05 ಮತದಾನವಾಗಿದೆ.

      ಬಿಜೆಪಿಯ ಶ್ರೀಮಂತ ಪಾಟೀಲ ಮತ್ತು ಕಾಂಗ್ರೆಸ್ಸಿನ ರಾಜು ಕಾಗೆ

      ಬಿಜೆಪಿಯ ಶ್ರೀಮಂತ ಪಾಟೀಲ ಮತ್ತು ಕಾಂಗ್ರೆಸ್ಸಿನ ರಾಜು ಕಾಗೆ

      ಕಾಗವಾಡದಲ್ಲೂ ಇದೇ ರೀತಿಯ ವಾತಾವರಣವಿದೆ. ಮತದಾನಕ್ಕೆ ಇಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ. 76.24 ಮತದಾನವಾಗಿದೆ. ಜೆಡಿಎಸ್ಸಿನ ಶ್ರೀಶೈಲ ತುಗಶೆಟ್ಟಿ ಮೂರನೇ ಸ್ಥಾನಕ್ಕೆ ಹೋಗಬಹುದು. ಬಿಜೆಪಿಯ ಶ್ರೀಮಂತ ಪಾಟೀಲ ಮತ್ತು ಕಾಂಗ್ರೆಸ್ಸಿನ ರಾಜು ಕಾಗೆ ನಡುವೆ ನೇರ ಸ್ಪರ್ಧೆ. ಇಲ್ಲಿಯ ಫಲಿತಾಂಶ ಕೂಡಾ ಫಿಫ್ಟಿ.. ಫಿಫ್ಟಿ

      ಬಿಜೆಪಿಯ ನಾರಾಯಣ ಗೌಡ ಮತ್ತು ಜೆಡಿಎಸ್ಸಿನ ದೇವರಾಜ್ ಬಿ.ಎಲ್

      ಬಿಜೆಪಿಯ ನಾರಾಯಣ ಗೌಡ ಮತ್ತು ಜೆಡಿಎಸ್ಸಿನ ದೇವರಾಜ್ ಬಿ.ಎಲ್

      50:50 ಸಾಧ್ಯತೆಯಿರುವ ಇನ್ನೊಂದು ಕ್ಷೇತ್ರವೆಂದರೆ ಕೆ.ಆರ್.ಪೇಟೆ. ಇಲ್ಲಿ, ಕಾಂಗ್ರೆಸ್ಸಿನ ಕೆ.ಬಿ.ಚಂದ್ರಶೇಖರ್ ಮೂರನೇ ಸ್ಥಾನಕ್ಕೆ ಹೋಗುವ ಸಾಧ್ಯತೆಯಿದೆ. ಇಲ್ಲಿ, ಬಿಜೆಪಿಯ ನಾರಾಯಣ ಗೌಡ ಮತ್ತು ಜೆಡಿಎಸ್ಸಿನ ದೇವರಾಜ್ ಬಿ.ಎಲ್ ನಡುವೆ ನೇರ ಸ್ಪರ್ಧೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+