2016ರ ಸಿಇಟಿ ಪರೀಕ್ಷೆಗೆ ಇಂದಿನಿಂದ ಅರ್ಜಿ ಸಲ್ಲಿಸಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 13 : 2016-17ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿಗಳನ್ನು ಆಹ್ವಾನಿಸಿದೆ. ಜನವರಿ 13ರಿಂದ ಫೆಬ್ರವರಿ 13ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಭರ್ತಿಮಾಡುವ ವೇಳೆ ಗೊಂದಲವಾಗದಂತೆ ಮಾರ್ಗದರ್ಶನ ನೀಡುವ ವಿದ್ಯುನ್ಮಾನ ಮಾಹಿತಿ ಪುಸ್ತಕವನ್ನು ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ನೀಡಲಾಗಿದೆ. [ವೆಬ್ ಸೈಟ್ ವಿಳಾಸ]

cet

ಜನವರಿ 13ರಿಂದ ಫೆಬ್ರವರಿ 13ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿದ ನಂತರ ಅದನ್ನು ಪೂರ್ಣವಾಗಿ ಓದಿದ ಬಳಿಕ ಭರ್ತಿ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕೆಇಎ ಸಲಹೆ ನೀಡಿದೆ. [ಸಿಇಟಿ 2016 ವೇಳಾಪಟ್ಟಿಯಲ್ಲಿ ಬದಲಾವಣೆ]

ಅರ್ಜಿ ಶುಲ್ಕ : ಅರ್ಜಿಯ ಜೊತೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗಿದೆ. ಕರ್ನಾಟಕದ ಸಾಮಾನ್ಯ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 650 ರೂ. ಮತ್ತು ಪ.ಜಾ/ಪ.ಪಂ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಬ್ಯಾಂಕ್‌ನಲ್ಲಿ ಪಾವತಿಸಲು ಫೆ.15 ಕೊನೆಯ ದಿನ. [ಸಿಇಟಿ ಫಲಿತಾಂಶದಲ್ಲೂ ಪ್ರಕಾಶಿಸಿದ ದೀಕ್ಷಾ ಲರ್ನಿಂಗ್ ಸೆಂಟರ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Candidates for the Common Entrance Test (CET 2016) can apply online from January 13 to February 13 on the official website of the Karnataka Examinations Authority (KAE).
Please Wait while comments are loading...