Anna Bhagya: ಕೇಂದ್ರದಿಂದ ರಾಜ್ಯಕ್ಕೆ 18 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಕೆ: ಬಿಜೆಪಿ

ಬೆಂಗಳೂರು, ಜೂನ್ 28: ಕರ್ನಾಟಕ ಕಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡದೇ ರಾಜಕೀಯ ಮಾಡುತ್ತಿದೆ ಎಂಬ ಹೇಳುತ್ತಿದೆ. ಈ ಕುರಿತ ಕಾಂಗ್ರೆಸ್ಸಿಗರ ಆಕ್ರೋಶದ ಕಿಡಿಯ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಲಕ್ಷಗಟ್ಟಲೇ ಅಕ್ಕಿಯನ್ನು ಪೂರೈಸಿದೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಏನೇನು ಒದಗಿಸಲಾಗಿದೆ ಎಂದು ತಿಳಿಸಿರುವ ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಇದರಲ್ಲಿ ಕಳೆದ ಹತ್ತು ದಿನಗಳಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬಂದ ಅಕ್ಕಿ ಪ್ರಮಾಣ, ಅನುದಾನ, ಜಿಎಸ್‌ಟಿ ಪಾಲು ಸೇರಿದಂತೆ ಹಲವು ಅಂಶಗಳನ್ನು ಹೇಳಲಾಗಿದೆ. ಈ ಮೂಲಕ ಕಾಂಗ್ರೆಸ್ ಕಾಲೆಳೆದು ಬಿಜೆಪಿ ವಾಗ್ದಾಳಿ ನಡೆಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಕಳೆದ ಹತ್ತು ದಿನಗಳಲ್ಲಿ ಕರ್ನಾಟಕಕ್ಕೆ 4,314 ಕೋಟಿ ರೂಪಾಯಿ ಜಿಎಸ್‌ಟಿ ಪಾಲು ನೀಡಿದೆ. ಇದರೊಂದಿಗೆ ಎಂದಿನಂತೆ ಪೂರೈಕೆ ಆಗುತ್ತಿದ್ದ ತಿಂಗಳ ಉಚಿತ 18,083.33 ಮೆಟ್ರಿಕ್‌ ಟನ್ ಅಕ್ಕಿಯನ್ನು ಸಹ ಕೇಂದ್ರ ರಾಜ್ಯಕ್ಕೆ ನೀಡಿದೆ.

Central Provided 18 Lakh MT Rice GST Share Grant To Karnataka State In last 10 Days

ಅಭಿವೃದ್ಧಿಗಾಗಿ 3.5ಸಾವಿರ ಕೋಟಿ ವಿತರಣೆ

ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ 3,647 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಎರಡನೇ ವಂದೇ ಭಾರತ್‌ ರೈಲಿಗೆ ಭಾರತೀಯ ರೈಲ್ವೆ ಇಲಾಖೆಯು ಕಾರ್ಯ ನಿರ್ವಹಣೆ ಆರಂಭವಾಗಿದೆ. ಅಷ್ಟೇ ಅಲ್ಲದೇ ಅಮೆರಿಕಾದ ಸಂಸ್ಥೆಗಳೊಂದಿಗೆ ರಾಜ್ಯಕ್ಕೆ ನೂತನ ಒಡಂಬಡಿಕೆಗಳು ಆಗಿದ್ದು, ಇದರಿಂದ ರಾಜ್ಯಕ್ಕೆ ಹೇರಳವಾಗಿ ಬಂಡವಾಳ ಹೂಡಿಕೆ ಹರಿದು ಬರುವ ನಿರೀಕ್ಷೆಗಳು ಇವೆ.

ಕರ್ನಾಟಕ ಸೇರಿದಂತ ದೇಶದ ಜನಸಾಮಾನ್ಯರನ್ನು ಕೇಂದ್ರದ ಸರ್ಕಾರದ ವಿವಿಧ ಯೋಜನೆಗಳ ಲಾಭ ತಲುಪಿದೆ. ಆದರೆ ಇದೇ ಅವಧಿಯಲ್ಲಿಕಳೆದ 10 ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸಿ, ಕಾಗೆ ಹಾರಿಸಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಅನ್ನಭಾಗ್ಯ ಯೋಜನೆ ಜಾರಿ ಯಾವಾಗ?

ಕಾಂಗ್ರೆಸ್‌ ಸರ್ಕಾರ ಅನ್ಯಭಾಗ್ಯ ಯೋಜನೆಯಡಿ ಉದ್ದೇಶಿತ ಪಡಿತರಿಗೆ ತಲಾ ಹತ್ತು ಕೇಜಿ ಅಕ್ಕಿ ನೀಡಲು ನಿರ್ಧರಿಸಿತ್ತು. ಈಗಾಗಲೇ ಹಾಲಿ 5 ಕೇಜಿ ಅಕ್ಕಿ ನೀಡಲಾಗುತ್ತಿದೆ. ಅಕ್ಕಿ ಇನ್ನೂ ಐದು ಕೇಜಿ ಸೇರಿಸಿ ಹತ್ತು ಕೇಜಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

Central Provided 18 Lakh MT Rice GST Share Grant To Karnataka State In last 10 Days

ಆದರೆ ಸರ್ಕಾರ ರಚನೆಯಾದ ಬಳಿಕ ಯೋಜನೆ ಜಾರಿಗೆ ವಿಳಂಬವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ ಎಂದು ಗೂಬೆ ಕೂರಿಸುತ್ತಿದೆ ಎಂದು ಬಿಜೆಪಿ ದೂರಿದೆ. ಪೂರ್ವ ತಯಾರಿ ಮಾಡಿಕೊಳ್ಳದೇ ಕೇಂದ್ರದ ಮೇಲೆ ಹೀಗೆ ಗೂಬೆ ಕೂರಿಸುವುದು ಸರಿಯಲ್ಲ ಎಂದಿದೆ.

ಕಾಂಗ್ರೆಸ್ ಸರ್ಕಾರ ಮಾತ್ರ ಬೇರೆ ರಾಜ್ಯಗಳನ್ನು ಸಂಪರ್ಕಿಸಿ ಅಕ್ಕಿ ಪಡೆಯುವಲ್ಲಿ ಮಗ್ನವಾಗಿದೆ. ಜುಲೈ 1ಕ್ಕೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಅಕ್ಕಿ ಪೂರೈಕೆಗೆ ಈಗಾಗಲೇ ಮೂರು ಸಂಸ್ಥೆಗಳು ತಾತ್ವಿಕ ಒಪ್ಪಿಗೆ ನೀಡಿವೆ. ಆದರೆ ಈ ಸಂಸ್ಥೆಗಳಿಂದ ಪ್ರತಿ ಕೇಜಿ ಅಕ್ಕಿಗೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ನೀವೆ ಅಕ್ಕಿ ದರ ನಿಗದಿ ಮಾಡಿ ಬಳಿಕ ಆ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ. ಕೆಲವೇ ದಿನಗಳಲ್ಲಿ ಈ ಗೊಂದಲಕ್ಕೆ ಪರಿಹಾರ ಸಿಗುವ ಭರವಸೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+