ಕರ್ನಾಟಕದ 22 ಜಲಾಶಯಗಳ ರಿಪೇರಿಗೆ 581 ಕೋಟಿ ಕೊಟ್ಟ ಕೇಂದ್ರ
Recommended Video

ನವದೆಹಲಿ, ಸೆಪ್ಟೆಂಬರ್ 20: ಕೇಂದ್ರ ಸರ್ಕಾರವು ಕರ್ನಾಟಕದ ಒಟ್ಟು 22 ಜಲಾಶಯಗಳ ದುರಸ್ತಿ ಹಾಗೂ ಅಭಿವೃದ್ಧಿಗಾಗಿ 581ಕೋಟಿ ರೂಗಳ ಯೋಜನೆಗೆ ಅಸ್ತು ಎಂದಿದೆ.
ವಿಶ್ವಬ್ಯಾಂಕ್ ಸಹಕಾರದಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದೆ, ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಈ ಬಾರಿ ಸಾಕಷ್ಟು ಮಳೆಯಾಗಿರುವ ಪರಿಣಾಮ ಕೆಲಸವೊಂದು ಸಣ್ಣಪುಟ್ಟ ತೊಂದರೆಗಳು ಉಂಟಾಗಿದೆ, 2020ರ ಜೂನ್ ಒಳಗೆ ಕಾಮಗಾರಿ ಮುಗಿಸಬೇಕಿದೆ, ಈ ಹಿಂದಿನ ಯೋಜನೆಯಲ್ಲಿ 276 ಕೋಟಿ ರೂ ,ಮೀಸಲಿಡಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ 305 ಕೋಟಿ ದೊರೆತಿದೆ.
ಒಟ್ಟಾರೆ ದೇಶಾದ್ಯಂತ 198 ಅಣೆಕಟ್ಟುಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 3466 ಕೋಟಿ ರೂ ಮೊತ್ತದ ಪರಿಷ್ಕೃತ ಯೋಜನೆಯನ್ನು ಘೋಷಿಸಿದೆ. ಹಿಂದಿನ ಯೋಜನೆ ಪ್ರಕಾರ 2100 ಕೋಟಿ ರೂ ವೆಚ್ಚ ನಿಗದಿಯಾಗಿತ್ತು.

ಪರಿಷ್ಕೃತ ಯೋಜನೆ ಪ್ರಕಾರ ವಿಶ್ವಬ್ಯಾಂಕ್ ನೀಂದ 2628 ಕೋಟಿ ಕೇಂದ್ರದಿಂದ 91 ಕೋಟಿ ದೊರೆಯಲಿದೆ. ರಾಜ್ಯ ಸರ್ಕಾರಗಳು 747 ಕೋಟಿ ರೂಗಳನ್ನು ತಾವೇ ಭರಿಸಿಕೊಳ್ಳಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.












Click it and Unblock the Notifications