ಕಾವೇರಿ ಕಿಚ್ಚು: ಕೇಂದ್ರ ಸರಕಾರ, 25 ಸಂಸದರು ರಾಜ್ಯದ ಜೊತೆ: ತೇಜಸ್ವಿ ಸೂರ್ಯ ಹೇಳಿದಿಷ್ಟು!

ಬೆಂಗಳೂರು, ಸೆಪ್ಟೆಂಬರ್‌ 29: ಕಾಂಗ್ರೆಸ್ಸಿನವರು 25 ಬಿಜೆಪಿ ಸಂಸದರ ಬಗ್ಗೆ ಮಾತನಾಡುತ್ತಾರೆ. ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಹಿಂದೆಯೂ, ಇವತ್ತು ಮತ್ತು ಮುಂದೆಯೂ ಕರ್ನಾಟಕದ ಜೊತೆಗಿದೆ. ರಾಜ್ಯದ 25 ಸಂಸದರೂ ರಾಜ್ಯದ ನೆಲ, ಜಲದ ಪರವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಈ ಕುರಿತು ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ನೀರಿನ ಆದೇಶದ ಸಂಬಂಧ ಅದನ್ನು ಪರಿವರ್ತಿಸಲು 2018ರಲ್ಲಿ ಕೋರಲಾಗಿತ್ತು. ಅದಕ್ಕಾಗಿ ಅಫಿಡವಿಟ್ ಸಲ್ಲಿಸಲಾಗಿತ್ತು. ಹೆಚ್ಚು ನೀರು ಕೊಡಲು ಕೇಳಲಾಗಿತ್ತು. ಪರಿಣಾಮವಾಗಿ ಸುಪ್ರೀಂ ಕೋರ್ಟ್ ಆದೇಶ ಮಾರ್ಪಾಡು ಮಾಡಿ 14.75 ಟಿಎಂಸಿ ಹೆಚ್ಚು ನೀರನ್ನು ಕೊಟ್ಟಿತ್ತು. ಅದರಲ್ಲಿ ಹಿಂದಿನ ಸಚಿವ ಅನಂತಕುಮಾರರ ಪಾತ್ರ ಪ್ರಮುಖವಾಗಿತ್ತು.

Central Government And 25 MPs Are With The State On The Cauvery Issue MP Tejasvi Surya Said

ನೀರಿನಲ್ಲಿ ರಾಜಕೀಯ ನಮ್ಮದಲ್ಲ. ಕರ್ನಾಟಕಕ್ಕೆ ನಮ್ಮ ಬದ್ಧತೆ ಇದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 24, 25ನೇ ಸಭೆಯಲ್ಲಿ ರಾಜ್ಯದ ಪರವಾಗಿ ಸಂಸದರು ನಿಂತಿದ್ದಾರೆ. ರಾಜ್ಯ ಸರಕಾರದ ವಸ್ತುಸ್ಥಿತಿ ಕುರಿತು ವರದಿಯನ್ನು ನಾವು ಬೆಂಬಲಿಸಿದ್ದೇವೆ. ಇದರ ಹಿಂದೆ ರಾಜ್ಯ 25 ಸಂಸದರ ಪ್ರಯತ್ನ ಇತ್ತು. ಮಾನ್ಯ ಯಡಿಯೂರಪ್ಪ, ಪ್ರಲ್ಹಾದ್ ಜೋಷಿ, ನಾನು, ಪಿ.ಸಿ.ಮೋಹನ್, ಸದಾನಂದ ಗೌಡ, ಮುನಿಸ್ವಾಮಿ, ಪ್ರತಾಪಸಿಂಹ ಮತ್ತಿತರರು ಇದಕ್ಕಾಗಿ ಶ್ರಮಿಸಿದ್ದೇವೆ.

ನಾನು, ಪಿ.ಸಿ.ಮೋಹನ್, ಸದಾನಂದ ಗೌಡ, ಮುನಿಸ್ವಾಮಿ, ಪ್ರತಾಪಸಿಂಹ ಮತ್ತಿತರರು ಪ್ರಲ್ಹಾದ್ ಜೋಷಿಯವರ ನೇತೃತ್ವದಲ್ಲಿ ಕೇಂದ್ರ ಸಚಿವ ರನ್ನೂ ಭೇಟಿ ಮಾಡಿದ್ದೇವೆ. ಪ್ರಲ್ಹಾದ್ ಜೋಷಿ, ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಸಂಸದರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್‍ರನ್ನು ಭೇಟಿ ಮಾಡಿದ್ದಾರೆ. ಇದೆಲ್ಲದರ ಬಳಿಕ ಮಾಧ್ಯಮಗಳ ಮುಂದೆ 25 ಸಂಸದರ ನಿಲುವಿನ ಬಗ್ಗೆ ಪ್ರಶ್ನಿಸುವುದು ರಾಜಕೀಯ ಹೊರತು ಮತ್ತೇನಲ್ಲ ಎಂದು ಆಕ್ಷೇಪಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದ ಸುಳ್ಳು ಹೇಳಿಕೆ ಆಕ್ಷೇಪಾರ್ಹ ಎಂದು ಹೇಳಿದರು.

ರಾಜ್ಯ ಸರಕಾರದ ನಿಲುವನ್ನು ಸತತವಾಗಿ ನಾವು ಸಮರ್ಥಿಸಿದ್ದೇವೆ. ಕರ್ನಾಟಕದಲ್ಲಿ ನೀರಿನ ಕೊರತೆ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಪರವಾಗಿ ಕೇಂದ್ರದ ಅಧಿಕಾರಿಗಳು ವಾದ ಮಾಡಿಲ್ಲವೆಂದು ಸಿಎಂ, ಡಿಸಿಎಂ ಅವರು ದಾಖಲೆ ನೀಡಿ ಹೇಳಲಿ ಎಂದು ಸವಾಲೆಸೆದರು. ನೀರು, ನಾಡಿನ ನುಡಿ, ಭಾಷೆ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಬೇರೆಬೇರೆಯಲ್ಲ. ನಾವು ನಾಡಿನ ನ್ಯಾಯದ ಪರ ಇರಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದಿರಿ ಎಂದು ಮನವಿ ಮಾಡಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ವಸ್ತುಸ್ಥಿತಿ ತಿಳಿಯದೆ ಎ.ಸಿ. ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ನೀರು ಬಿಡಲು ಸೂಚಿಸಬಾರದು. ತಜ್ಞರ ಮೂಲಕ ವಸ್ತುಸ್ಥಿತಿ ತಿಳಿದುಕೊಳ್ಳಿ ಎಂದು ಒತ್ತಾಯಿಸಿದರು. ಇದಕ್ಕಾಗಿ ತಜ್ಞರ ಸಮಿತಿ ಕಳಿಸಲು ರಾಜ್ಯ ಸರಕಾರ ಆಗ್ರಹಿಸಬೇಕು ಎಂದರು.

ಕಾಂಗ್ರೆಸ್- ಡಿಎಂಕೆ 'ಇಂಡಿಯ' ಮೈತ್ರಿಕೂಟದಲ್ಲಿವೆ. ರಾಜ್ಯದ ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡಿನ ಜೊತೆ ಸಲೀಸಾಗಿ ಮಾತನಾಡಲು ಕಾಂಗ್ರೆಸ್ಸಿಗರಿಗೆ ಅವಕಾಶವಿದೆ. ರಾಜಕೀಯ ದೋಸ್ತಿಯನ್ನು ಸಮಸ್ಯೆ ಪರಿಹಾರಕ್ಕಾಗಿ ಬಳಸಿ. ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಳ್ಳಿ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.

ಕರ್ನಾಟಕದ ಇತಿಹಾಸದಲ್ಲಿ ಎಂದೆಂದಿಗೂ ಕಾವೇರಿ ಸಮಸ್ಯೆ ಪರಿಹರಿಸಿದವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಂದು ದಾಖಲಾಗುತ್ತದೆ. ಖಾಯಂ ಪರಿಹಾರ ನೀಡಿದವರೆಂದು ನಿಮಗೆ ಕ್ರೆಡಿಟ್ ಸಿಗುತ್ತದೆ ಎಂದು ತಿಳಿಸಿದರು. ಕಾವೇರಿ ನೀರಿನ ವಿಷಯದಲ್ಲಿ ಸ್ಟಾಲಿನ್ ಜೊತೆ ಮಾತನಾಡುವ ವಿಚಾರದಲ್ಲಿ ಬಿಜೆಪಿ ನಿಮ್ಮ ಜೊತೆಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+