ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ: ಯುವತಿಯ ಮತ್ತೊಂದು ವಿಡಿಯೋ
ಬೆಂಗಳೂರು, ಮಾರ್ಚ್ 27: ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಶುಕ್ರವಾರ ಸಂತ್ರಸ್ತೆಯ ವಿಡಿಯೋ ಹಾಗೂ ಆಡಿಯೋವೊಂದು ಬಿಡುಗಡೆಯಾಗಿತ್ತು. ಶನಿವಾರ ಬೆಳಿಗ್ಗೆ ಸಂತ್ರಸ್ತೆಯ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಈ ಪ್ರಕರಣದಲ್ಲಿ ಆಗುತ್ತಿರುವ ಮಾನಸಿಕ ಹಿಂಸೆ ತಡೆಯಲಾಗದೆ ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ.
ಸಿಡಿ ಬಿಡುಗಡೆಯಾದ 24 ದಿನದಿಂದ ಬಹಳ ಹಿಂಸೆ ಆಗತ್ತಿದೆ. ನಾನು ಏನೇ ಮಾತನಾಡಿದರೂ ಏನೋ ಆಗುತ್ತಿದೆ, ಅದು ರಿವರ್ಸ್ ಆಗುತ್ತಿದೆ. ನನ್ನ ಮಾನ ಮರ್ಯಾದೆ ಹೋಗಿದೆ. ನಾನು ಸಂತ್ರಸ್ತೆಯಾಗಿರುವುದರಿಂದ ನನಗೆ ನ್ಯಾಯ ಬೇಕು. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಈ ಪ್ರಕರಣದಲ್ಲಿ ಇಲ್ಲದಿರುವುದನ್ನೆಲ್ಲ ಹೇಳಲಾಗುತ್ತಿದೆ ಎಂದು ಆರೋಪಿಸಿದ್ದಾಳೆ.
ಮಾಹಿತಿ ಸತ್ಯಾಸತ್ಯತೆ ಪರಿಗಣಿಸದೆ ವರದಿ ಮಾಡಲಾಗುತ್ತಿದೆ. ಸಿಡಿ ಬಿಡುಗಡೆಯಾದಾಗ ಎಲ್ಲಿಗೆ ಹೋಗಬೇಕು ಏನು ಮಾಡಬೇಕು ಎಂದು ಗೊತ್ತಿರಲಿಲ್ಲ. ಮಾಧ್ಯಮದಲ್ಲಿ ನರೇಶ್ ಎಂಬುವವರು ಮಾತ್ರ ನನಗೆ ಪರಿಚಯ. ಅವರಿಗೆ ಫೋನ್ ಮಾಡಿದ್ದೆ. ಏನು ಮಾಡಲಿ ಅಣ್ಣಾ ಎಂದು ನರೇಶ್ ಅವರನ್ನು ಕೇಳಿದೆ. ಮುಂಚೆಯೇ ಹೇಳದ್ದಿರಿ ನ್ಯಾಯ ದೊರಕಿಸುತ್ತೇನೆ ಎಂದು ಭರವಸೆ ನೀಡಿದ್ದಿರಿ. ಈಗ ಏನೇನೋ ಆಗುತ್ತಿದೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾಳೆ. ಮುಂದೆ ಓದಿ.

ದೊಡ್ಡವರ ಜತೆ ಮಾತಾಡೋಣ ಎಂದಿದ್ದರು
ಈ ವಿಚಾರದಲ್ಲಿ ನಾನು ತುಂಬಾ ಚಿಕ್ಕವನು. ದೊಡ್ಡವರ ಜತೆ ಮಾತನಾಡೋಣ ಎಂದಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜತೆ ಮಾತನಾಡೋಣ, ಅವರಿಂದ ನ್ಯಾಯ ಸಿಗುತ್ತದೆ ಎಂದು ನರೇಶ್ ಅಣ್ಣ ಹೇಳಿದ್ದರು. ನ್ಯಾಯ ದೊರಕಿಸುತ್ತೇನೆ. ಈ ವಿಚಾರದಲ್ಲಿ ರಾಜಕೀಯ ಬೆಂಬಲ ಬೇಕು. ನನ್ನ ಸಂಪರ್ಕ ಬಳಸಿಕೊಂಡು ಸಹಾಯ ಮಾಡುತ್ತೇನೆ ಎಂದು ಧೈರ್ಯ ಹೇಳಿದ್ದರು.

ಅಪ್ಪ, ಅಮ್ಮ ಅಳುತ್ತಿದ್ದರು
ನಾನಿರುವ ಜಾಗ ಯಾವುದು ಎಂದು ಕೇಳಿ ಅಲ್ಲಿಗೆ ಬಂದು ಡಿಕೆ ಶಿವಕುಮಾರ್ ಅವರ ಮನೆಗೆ ಹೋಗೋಣ ಎಂದಿದ್ದರು. ಈ ಸಮಯದಲ್ಲಿ ನನಗೆ ಮನೆಯಿಂದ ಪದೇ ಪದೇ ಫೋನ್ ಬಂದಿತ್ತು. ಅಪ್ಪ ಅಮ್ಮ ಅತ್ತುಕೊಂಡು ಮಾತನಾಡುತ್ತಿದ್ದರು. ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸಿದೆ. ಅವರು ಅಳುವುದು ನೋಡಿ ಜೀವಕ್ಕೆ ಏನಾದರೂ ಮಾಡಿಕೊಳ್ಳುತ್ತಾರೋ ಎಂದು ನನಗೆ ಭಯ ಆಗುತ್ತಿತ್ತು. ಡಿಕೆ ಶಿವಕುಮಾರ್ ಅವರ ಮನೆಗೆ ಹೋಗುತ್ತಿದ್ದೇನೆ. ಎಲ್ಲವೂ ಸರಿಯಾಗುತ್ತದೆ ಎಂದು ಸಮಾಧಾನಪಡಿಸಿದ್ದೆ ಎಂದಿದ್ದಾಳೆ.

ಪೋಷಕರನ್ನು ಬೆಂಗಳೂರಿಗೆ ಕರೆಸಿ
ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿದ್ದೆವು. ಅವರು ಅಂದು ಸಿಗಲಿಲ್ಲ. ಅಷ್ಟರಲ್ಲಿ ಏನೇನಲ್ಲ ಆಗಿ ಹೋಗಿತ್ತು. ಈಗ ಆಡಿಯೋ ಕ್ಲಿಪ್ ಈಚೆಗೆ ಬಂದಿರುವುದು ನೋಡಿದರೆ ನನ್ನ ಕುಟುಂಬದವರು ಸುರಕ್ಷಿತವಾಗಿದ್ದಾರೆ ಎನಿಸುತ್ತಿಲ್ಲ. ನಾನು ಸುರಕ್ಷಿತವಾಗಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನನ್ನ ಪೋಷಕರು ಎಲ್ಲಿದ್ದಾರೋ ಗೊತ್ತಿಲ್ಲ. ಎಸ್‌ಐಟಿ ರಕ್ಷಣೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ನಮ್ಮ ಅಪ್ಪ ಅಮ್ಮ ಎಲ್ಲಿದ್ದಾರೋ ಅಲ್ಲಿ ರಕ್ಷಣೆ ಕೊಡಬೇಡಿ. ಅವರು ಎಲ್ಲೇ ಇದ್ದರೂ ಬೆಂಗಳೂರಿಗೆ ಕರೆಸಿ ಸೂಕ್ತ ಜಾಗದಲ್ಲಿರಿಸಿ ರಕ್ಷಣೆ ಕೊಡಿ ಎಂದು ಯುವತಿ ಒತ್ತಾಯಿಸಿದ್ದಾಳೆ.

ನನ್ನನ್ನೇ ಸಾಯಿಸಬಹುದು
ಒಂದೇ ದಿನದಲ್ಲಿ ಸರ್ಕಾರ ಬೀಳಿಸಬಲ್ಲೆ. ಎಷ್ಟೇ ದುಡ್ಡು ಖರ್ಚಾದರು ಪರ್ವಾಗಿಲ್ಲ ಎಲ್ಲರನ್ನೂ ಜೈಲಿಗೆ ಹಾಕುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಾರೆ. ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಎಂದರೆ ಅರ್ಥ ಏನು? ಅವರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಹಾಗಾದರೆ ದುಡ್ಡು ಬಳಸಿ ಅವರು ಬೇಕಾದರೂ ಮಾಡಬಹುದು, ನಾಳೆ ನನ್ನನ್ನು ಸಾಯಿಸಬಹುದು, ಅಪ್ಪ ಅಮ್ಮನ ತಲೆ ತೆಗೆಯಬಹುದು. ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ.
Recommended Video

ಹೆಸರು ಬರೆದಿಟ್ಟು ಸಾಯೋಣ ಎನಿಸುತ್ತಿದೆ
ನನಗೆ ಆಗುತ್ತಿರುವ ಹಿಂಸೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದಿಟ್ಟು ಸಾಯೋಣ ಎನಿಸುತ್ತಿದೆ. ಎಸ್‌ಐಟಿ ಅವರಿಗೆ ನನ್ನ ಮನವಿ, ನಾನು ಏನೇ ಹೇಳಿಕೆ ನೀಡಿದರೂ ಅಪ್ಪ, ಅಮ್ಮ, ಅಜ್ಜಿ ಮತ್ತು ತಮ್ಮನ ಮುಂದೆಯೇ ನೀಡಬೇಕು. ಅದಕ್ಕಾಗಿ ಅವರಿಗೆ ರಕ್ಷಣೆ ನೀಡಬೇಕು. ಅವರಿಗೆ ಯಾವುದೇ ರೀತಿಯ ರಕ್ಷಣೆ ಸಿಗುತ್ತಿಲ್ಲ ಎಂದು ಆಕೆ ತಿಳಿಸಿದ್ದಾಳೆ.












Click it and Unblock the Notifications