ಬಿಎಸ್‌ವೈ ಚಾರ್ಚ್‌ಶೀಟ್ ರದ್ದಿಗೆ ಸಿಬಿಐ ವಿರೋಧ
ನವದೆಹಲಿ, ಫೆ. 21 : ಡಿನೋಟಿಫಿಕೇಶನ್ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಚಾರ್ಚ್ ಶೀಟ್ ಅನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ. ಚಾರ್ಚ್‌ಶೀಟ್ ರದ್ದು ಮಾಡಬಾರದು ಎಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದೆ.
ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು, ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ. ಆದ್ದರಿಂದ ಅವರ ಅರ್ಜಿಯನ್ನು ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟ್‌ಗೆ ಸಿಬಿಐ ಅಫಿಡೆವಿಟ್ ಸಲ್ಲಿಸಿದೆ.

ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಬಲವಾದ ಸಾಕ್ಷಿಗಳಿವೆ. ಡಿನೋಟಿಫಿಕೇಶನ್ ಮಾಡಿಕೊಟ್ಟಿರುವುದಕ್ಕೆ ಅವರು ಪ್ರೇರಣಾ ಸಂಸ್ಥೆಗೆ ದೇಣಿಗೆ ಪಡೆದಿದ್ದಾರೆ. ಆದ್ದರಿಂದ ಅವರ ಚಾರ್ಚ್‌ಶೀಟ್‌ರದ್ದುಗೊಳಿಸಬಾರದು ಸಿಬಿಐ ಕೋರ್ಟ್‌ಗೆ ಹೇಳಿದೆ. [ಅರ್ಕಾವತಿ ಬಡಾವಣೆ ಫೈಟ್ ಯಾರು, ಏನು ಹೇಳಿದರು?]
ರಾಚೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ ಮತ್ತು ಪ್ರೇರಣ ಎಜುಕೇಶನ್ ಟ್ರಸ್ಟ್ ಅಕ್ರಮ ದೇಣಿಗೆ ಪ್ರಕರಣ ಸಂಬಂಧ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಎರಡು ಖಾಸಗಿ ದೂರುಗಳು ದಾಖಲಾಗಿದ್ದವು. ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದೆ. ಇದರ ಚಾರ್ಚ್ ಶೀಟ್ ರದ್ದುಗೊಳಿಸಬೇಕು ಎಂದು ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. [ಮಂಜುನಾಥ ಸ್ವಾಮಿಗೆ ಯಡಿಯೂರಪ್ಪ ವಿಶೇಷ ಪೂಜೆ]












Click it and Unblock the Notifications