All Party Meeting: ರೈತರ ರಕ್ಷಣೆ ನಮ್ಮ ಜವಾಬ್ದಾರಿ; ಯಾವುದೇ ಕಾರಣಕ್ಕೂ ರೈತರ ಹಿತ ಬಲಿ ಕೊಡಲ್ಲ: ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್‌ 23: ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ರೈತರ ರಕ್ಷಣೆ ನಮ್ಮ ಜವಾಬ್ದಾರಿ ಯಾವುದೇ ಕಾರಣಕ್ಕೂ ರೈತರ ಹಿತ ಬಲಿ ಕೊಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರೈತ ಸಂಘ, ಎಂಪಿ ಗಳು ಎಲ್ಲ ಪಕ್ಷದವರು. ಸರ್ಕಾರ ಪ್ರತಿನಿಧಿಸುವ ಲೀಗಲ್ ಟೀಂ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ವಸ್ತು ಸ್ಥಿತಿಯನ್ನು ಗ್ರೌಂಡ್ ರಿಯಾಲಿಟಿಯನ್ನು ಜಲಸಂಪನ್ಮೂಲ ಸಚಿವ ಡಿಕೆಶಿ ವಿವರಿಸಿದರು.

Cauvery water: The Protection Of Farmers Is Oour Responsibility Says CM Siddaramaiah

ಅದಾದಮೇಲೆ ಕಾತರಕಿ ಹಾಗೂ ಅಡ್ವೋಕೇಟ್ ಜನರಲ್ ಕಾನೂನು ದೃಷ್ಟಿಯಿಂದ ಏನೇನಾಗಿದೆ ವಿವರಿಸಿದರು. ಮಾಜಿ ಸಿಎಂ ಗಳು ಅವರವರ ಅಭಿಪ್ರಾಯ ಹೇಳಿದರು, ಸಂಸದರು ಕೆಲವರು ಮಾತಾಡಿದರು. ಎಲ್ಲರ ಒಟ್ಟು ಅಭಿಪ್ರಾಯ: ಜಲ ವಿವಾದ ಬಗ್ಗೆ ಭಾಷೆ ಗಡಿ ಬಗ್ಗೆಯಾಗಲಿ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ

ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲ ಎಂದೂ ಕೂಡ ಹೇಳಿದ್ದಾರೆ. ಆಗಸ್ಟ್ ಕೊನೆಯವರೆಗೆ 86.38 ಟಿಎಂಸಿ ನೀರು ಬಿಡಬೇಕಾಗಿತ್ತು. ಜೂನ್ ನಲ್ಲಿ ಮಳೆ ಕೊರತೆ ಆಗಿತ್ತು, ಜುಲೈನಲ್ಲಿ ಮಳೆ ಬಂದಿದೆ, ಆಗಸ್ಟ್ ನಲ್ಲಿ ಕೊರತೆ ಆಗಿದೆ. ಕಬಿನಿಗೆ ನೀರು ಬರುವುದೂ ಕೂಡ ಕಡಿಮೆಯಾಯ್ತು. ಸುಪ್ರಿಂ ತೀರ್ಪಿನ ಪ್ರಕಾರ ಇಲ್ಲಿಯವರೆಗೆ ಜೂನ್ ೨ ಟಿಎಂಸಿ,
ಜುಲೈ 5.74 ಹಾಗೂ ಆಗಸ್ಟ್ 26 ಟಿಎಂಸಿ ನೀರು ಬಿಟ್ಟಿದ್ದೇವೆ. 86 ಟಿಎಂಸಿ ಬದಲು 26 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಇವತ್ತಿನ ತನಕ ಸಂಕಷ್ಟದ ಸ್ಥಿತಿಯಲ್ಲಿ ನೀರು ಬಿಡಲಾಗುವುದಿಲ್ಲ ಎಂದು ಹೇಳಿದ್ದೇವೆ. ಹೀಗಾಗಿ ಕಡಿಮೆ ನೀರನ್ನೇ ಬಿಟ್ಟಿದ್ದೇವೆ, ರೈತರ ಬೆಳೆಗಳನ್ನು ರಕ್ಷಣೆ ಮಾಡಬೇಕು, ಕುಡಿಯುವ ನೀರನ್ನೂ ಕೊಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ಅಥಾರಿಟಿ ಮುಂದೆ ವಾದ ಮಂಡಿಸಿದ್ದೇವೆ. 11 ನೇ ತಾರೀಕು ಕಾವೇರಿ ಅಥಾರಿಟಿ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಅಂತ ಹೇಳಿದ್ದಾರೆ.
ಅಷ್ಟು ನೀರು ನಮ್ಮಲ್ಲಿಲ್ಲ ಎಂದಾಗ ರೆಗ್ಯುಲೇಟರಿ ಕಮಿಟಿ 10 ಸಾವಿರ ಕ್ಯುಸೆಕ್ಸ್ ನೀರು ಬಿಡಲು ಹೇಳಿದ್ದಾರೆ. ಇದರ ಮಧ್ಯೆ ಸುಪ್ರಿಂ ಕೋರ್ಟ್ ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿದೆ.

Cauvery water: The Protection Of Farmers Is Oour Responsibility Says CM Siddaramaiah

ಸುಪ್ರಿಂ ಹಾಗೂ ಟ್ರಿಬ್ಯುನಲ್ ನಲ್ಲಿ ಸಂಕಷ್ಟ ಸೂತ್ರ ತಯಾರಾಗಿಲ್ಲ. ಮೊದಲು ಸಂಕಷ್ಟ ಸೂತ್ರ ಆಗಬೇಕು, ಮೇಕೆದಾಟು ಜಲಾಶಯ ನಾವು ಕಟ್ಟಬೇಕು. ಆಗ ಇಂಥ ಸಂಕಷ್ಟ ಸ್ಥಿತಿ ಬಂದಾಗ ತಮಿಳುನಾಡಿಗೆ ನಾವು ನೀರು ಕೊಡಬಹುದು. ಯಾವುದೇ ಚರ್ಚೆ ಇಲ್ಲದೆ ಪುರಾವೆ ಇಲ್ಲದೆಯೇ ತಮಿಳುನಾಡು ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಮರ್ಥವಾಗಿ ವಾದ ಮಂಡಿಸುವಂತೆ ನಮ್ಮ ಕಾನೂನು ತಂಡಕ್ಕೆ ಹೇಳಿದ್ದೇವೆ. ಮೂರು ಜನರ ನ್ಯಾಯಾಧೀಶರ ಬೆಂಚ್ ಸುಪ್ರಿಂ ರಚನೆ ಮಾಡಿದೆ, ಆಗಸ್ಟ್ 28 ಕ್ಕೆ ಪೀಠದ ಮುಂದೆ ವಿಚಾರಣೆ ಬರಲಿದೆ
ಕರ್ನಾಟಕದ ಹಿತ ಕಾಪಾಡಲು ಬೇಕಾದ ಸಮರ್ಥ ವಾದ ಮಂಡನೆ ಗೆ ಸೂಚನೆ ನೀಡಿದ್ದೇವೆ, ಕಾನೂನು ತಜ್ಞ ರು ಅವರ ಅಭಿಪ್ರಾಯ ತಿಳಿಸಿದ್ದಾರೆ.

ಅಪ್ಪರ್ ಕೃಷ್ಣಾ ವಿಚಾರದಲ್ಲಿ ಸರ್ವ ಪಕ್ಷಗಳ ನಿಯೋಗ ದೆಹಲಿಗೆ ಹೋಗಲು ಚರ್ಚೆ ಮಾಡಿದ್ದೇವೆ. ಕೇಂದ್ರ ಜಲ ಸಂಪನ್ಮೂಲ ಸಚಿವರು ಪ್ರಧಾನಿಗಳ ಭೇಟಿಗೆ ನಿರ್ಧಾರ ಮಾಡಿದ್ದೇವೆ, ಅನಗತ್ಯವಾಗಿ ಮಹದಾಯಿ ಯೋಜನೆಯಲ್ಲಿ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಇನ್ನೂ ಆಗಿಲ್ಲ. ಕೇಂದ್ರ ಪರಿಸರ ಸಚಿವರನ್ನು ಕೂಡ ಸರ್ವ ಪಕ್ಷ ಗಳ ನಿಯೋಗ ಭೇಟಿ ಮಾಡ್ತೇವೆ, ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್ ಕೊಡಬೇಕು ಎಂದೂ ಕೂಡ ಕೇಂದ್ರವನ್ನು ಒತ್ತಾಯ ಮಾಡುತ್ತೇವೆ. ಸರ್ವ ಪಕ್ಷಗಳ ನಿಯೋಗ ಕೂಡ ದೆಹಲಿಗೆ ತೆರಳುವ ಬಗ್ಗೆ ಚರ್ಚೆಯಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+