Cauvery: ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್! ತಮಿಳುನಾಡಿಗೆ 1200 ಕ್ಯೂಸೆಕ್ ನೀರು ಬಿಡಲು ಆದೇಶ: ಭುಗಿಲೆದ್ದ ಪ್ರತಿಭಟನೆಗಳು
ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ತಮಿಳುನಾಡಿಗೆ ನೀರು ಹರಿಸುವಂತೆ ಮತ್ತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWMC) ಆದೇಶ ಮಾಡಿದೆ. ಈ ಮೂಲಕ ತಮಿಳುನಾಡಿಗೆ ನಿತ್ಯ 1.2 ಟಿಎಂಸಿಯಂತೆ 15 ದಿನ ನಿತ್ಯ 1200 ಕ್ಯೂಸೆಕ್ ನೀರು ಬಿಡುವಂತೆ ಹೇಳುವ ಮೂಲಕ ಕರ್ನಾಟಕಕ್ಕೆ ಶಾಕ್ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಇತ್ತ ಮಂಡ್ಯ, ಮೈಸೂರು ಭಾಗದಲ್ಲಿ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ರೈತರಿಂದ ರಸ್ತೆ ತಡೆದು ಪ್ರತಿಭಟನೆ ಆರಂಭವಾಗಿದೆ.
ತಮಿಳುನಾಡು ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ (ಆ.13) ಎರಡು ದಿನ ಮೊದಲು CWMC ಕರ್ನಾಟಕಕ್ಕೆ ನೀರು ಬಿಡುವಂತೆ ಶಿಫಾರಸು ಮಾಡಿದೆ. ಮುಂದಿನ 15 ದಿನ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ದಿಂದಲೂ ಸಭೆ ನಡೆಯಲಿದೆ. ಇತ್ತ ಕಾವೇರಿ ಸಮಿತಿಯಿಂದ ನೀರು ಬಿಡುವಂತೆ ಆಗ್ರಹ ಕೇಳಿ ಬರುತ್ತಿದ್ದಂತೆ ಮಂಡ್ಯ, ಮೈಸೂರು ಭಾಗದ ರೈತರು ಮಂಗಳವಾರ ನಡುರಸ್ತೆಯಲ್ಲಿ ಕೂತು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿ ಬಾರಿಯು ನೀರು ಬಿಡುವಂತೆ ಆದೇಶಿಸುವ ಸಮಿತಿ ನಿರ್ಧಾರಕ್ಕೆ ಕಾವೇರಿ ಜಲಾನಯನ ಭಾಗದ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನೀರು ಬಿಡುವ ಬಗ್ಗೆ ಸರ್ಕಾರ ನಿರ್ಧರಿಸುತ್ತೆ: ಡಿಕೆ ಶಿವಕುಮಾರ್
ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಬೆನ್ನಲ್ಲೆ ಸಭೆ ನಡೆಸಿ ಮಾತನಾಡಿರುವ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಮಿತಿ ಆದೇಶಿಸಿದೆ. ಆದರೆ ನೀರು ಬಿಡುವ ಬಗ್ಗೆ ಕರ್ನಾಟಕ ಸರ್ಕಾರ ತೀರ್ಮಾನಿಸಲಿದೆ. ನೀವು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ಕೊಟ್ಟಿದ್ದಾರೆ.
ಈಗಾಗಲೇ ಮೇ, ಜೂನ್ ತಿಂಗಳಲ್ಲಿ ಸಹಜವಾಗಿ ತಮಿಳುನಾಡಿಗೆ ನೀರು ಹರಿದಿದೆ. ಇದೀಗ ಕಾವೇರಿ ಸಮೀತಿ ಮತ್ತೆ ಆದೇಶಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ದಿಂದಲೂ ಸಭೆ ನಡೆಯಲಿದೆ. ಅಲ್ಲಿ ನಮ್ಮ ವಾದ ಆಲಿಸಲಿದ್ದಾರೆ. ಮಂಡ್ಯ ಸೇರಿದಂತೆ ಕಾವೇರಿ ಜಲಾನಯನ ಭಾಗದ ಜನರ ಸಮಸ್ಯೆಗಳ, ಅವರ ಅಳಲು ಏನೆಂದು ನನಗೆ ಸಂಪೂರ್ಣವಾಗಿ ತಿಳಿಸಬೇಕು. ಅದರ ವರದಿ ತರಿಸಿಕೊಂಡು ನಿರ್ಧರಿಸಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕಾವೇರಿ ನೀರು ಬಿಡಲು ವಿರೋಧ: ಬಂದ್ ಗೆ ಕೈ ಜೋಡಿಸಿ:ವಾಟಾಳ್
ಕಾವೇರಿ ನೀರು ಬಿಡಲು ಸೂಚನೆ ನೀಡುತ್ತಿದ್ದಂತೆ ಮಂಡ್ಯ, ರಾಮನಗರ ಭಾಗದ ರೈತರು ಬೀದಿಗೆ ಇಳಿದಿದ್ದಾರೆ. ರಸ್ತೆ ಮಧ್ಯೆ ಬಸ್ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಮೈಸೂರಲ್ಲಿ ರೈತ ಮುಖಂಡ ಕುರುಬೂರ ಶಾಂತ್ ಕುಂಆರ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ಶುರು ಮಾಡಿದ್ದಾರೆ.
ಕರ್ನಾಟಕ ಬರಗಾಲ: ಜನ ಗುಳೆ ಹೋಗದಂತೆ ಊರಲ್ಲೇ ಉದ್ಯೋಗ ಕೊಡಿ, ಅಧಿಕಾರಿಗಳಿಗೆ ಡಿಸಿಎಂ ಸೂಚನೆ
ಇತ್ತ ಕರ್ನಾಟಕ ಬಂದ್ ಅನುಮಾನ ಎನ್ನಲಾಗುತ್ತಿತ್ತು. ಇದೀಗ ಕಾವೇರಿ ನೀರು ಬಿಡುವಂತೆ ಅಧಿಕೃತ ಆದೇಶ ಹೊರ ಬಿದ್ದ ಬೆನ್ನಲ್ಲೆ ವಾಟಾಳ್ ನಾಗರಾಜ್ ಅವರು ತಮಿಳುನಾಡು ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ. ಯಾವುದೇ ಕಾರಣಕ್ಕೂ ಕಾವೇರ ನೀರು ಬಿಡಬಾರದು. ತಮಿಳನಾಡಿನ ಅನ್ಯಾಯಕ್ಕೆ ನಮ್ಮ ಸರ್ಕಾರ ಮಣಿಯಬಾರದು. ದಯವಿಟ್ಟು ಎಲ್ಲರು ಆಗಸ್ಟ್ 13ರಂದು ನಡೆಸಲಾಗುವ 'ಕರ್ನಾಟಕ ಬಂದ್' ಗೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.


Click it and Unblock the Notifications
