ಇನ್ನೂ ಐದು ದಿನ ತಮಿಳುನಾಡಿಗೆ ಕಾವೇರಿ: ಪ್ರಾಧಿಕಾರ ಆದೇಶ

ನವದೆಹಲಿ, ಆಗಸ್ಟ್ 01: ಇನ್ನೂ ಐದು ದಿನ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರವು ಆದೇಶ ನೀಡಿದೆ.

ಕಾವೇರಿ ನೀರು ನಿರ್ವಹಣ ಪ್ರಾಧಿಕಾರವು ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ಇಂದು ದೆಹಲಿಯಲ್ಲಿ ಸಭೆ ನಡೆಸಿತು, ಸಭೆಯಲ್ಲಿ ಮೇಲಿನಂತೆ ನಿರ್ಣಯ ಕೈಗೊಳ್ಳಲಾಗಿದೆ. ಇದು ಮಂಡ್ಯ-ಮೈಸೂರು ಭಾಗದ ರೈತರ ಪಾಲಿಗೆ ನಿರಾಸೆ ಉಂಟು ಮಾಡಿದೆ.

ಈಗಾಗಲೇ ಜುಲೈ 20 ರಿಂದಲೂ ಪ್ರತಿದಿನ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಆದರೆ ಇನ್ನೂ ಐದು ದಿನ ನೀರು ಹರಿಸುವಂತೆ ಆದೇಶ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಎಂದು ರಾಜ್ಯದ ರೈತ ಮುಖಂಡರು ವಿಶ್ಲೇಷಿಸಿದ್ದಾರೆ.

Cauvery regulatery board ordered to release water to Tamilnadu for next five days

ಮತ್ತೆ ಕಾವೇರಿ ನೀರು ನಿರ್ವಹಣಾ ಪ್ರಾಧೀಕಾರದ ಸಭೆಯು ಆಗಸ್ಟ್‌ 8 ರಂದು ನಡೆಸುವಂತೆ ಸಹ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಿರೀಕ್ಷಿತ ಮಟ್ಟದಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಆಗಿಲ್ಲವೆಂದು ಪ್ರಾಧೀಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಎಡವಿರುವುದೇ ಪ್ರಾಧೀಕಾರದಿಂದ ಈ ರೀತಿಯ ಆದೇಶ ಹೊರ ಬೀಳಲು ಕಾರಣ ಎನ್ನಲಾಗುತ್ತಿದೆ.

ಜುಲೈ 31 ರಂದು ಕೆ.ಆರ್.ಎಸ್ ಡ್ಯಾಂನಲ್ಲಿ 80.80 ಅಡಿ ನೀರಿದೆ. 4,968 ಕ್ಯೂಸೆಕ್‌ ನೀರು ಒಳಹರಿವು ಆಗಿದ್ದರೆ, 9890 ಕ್ಯೂಸೆಕ್ ನೀರು ಹೊರಹರಿವು ಉಂಟಾಗಿದೆ. ಪ್ರಾಧೀಕಾರವು ಇಂದು ನೀಡಿರುವ ಆದೇಶದಂತೆ ನಾಳೆಯಿಂದ ಐದು ದಿನಗಳು ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+