ಕಾವೇರಿ ವಿವಾದ: ಸಿದ್ದರಾಮಯ್ಯ ಏನ್ ನಿಮ್ ಪ್ರಾಬ್ಲಂ? ಗಡ್ಡಪ್ಪ

Posted By:
Subscribe to Oneindia Kannada

ಮಂಡ್ಯ, ಸೆ 8: ಕಾವೇರಿ ನಮ್ದು, ರೈತರಿಗೂ ನೀರಿಲ್ಲ, ಕುಡಿಯೂಕೋ ನೀರಿಲ್ಲ. ಹಾಗಿದ್ದರೂ ತಮಿಳುನಾಡಿಗೆ ನೀರು ಬಿಟ್ಟಿದ್ದೀರಲ್ಲಾ, ಅದಲು ಮೊದಲು ನಿಲ್ಲಿಸಿ ಎಂದು ತಿಥಿ ಚಿತ್ರದ ಖ್ಯಾತಿಯ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಸರಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ (ಸೆ 7) ಮಂಡ್ಯದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಚನ್ನೇಗೌಡ, ಸಿದ್ದರಾಮಯ್ಯ ಏನ್ ನಿಮ್ ಪ್ರಾಬ್ಲಂ, ಯಾಕೆ ಹೀಗೆ ಮಾಡ್ತಾ ಇದ್ದೀರಾ? ನಾವೇ ಒದ್ದಾಡ್ತಾ ಇದ್ದೀವಿ ಎಂದು ಸರಕಾರದ ವಿರುದ್ದ ಕಿಡಿಕಾರಿದ್ದಾರೆ. (ತಜ್ಞರ ತಂಡ ಕಳಿಸುವಂತೆ ಕೇಂದ್ರಕ್ಕೆ ಪತ್ರ)

Cauvery protest: CM Siddaramaiah what is your problem, Thithi fame Gaddappa

ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ಇಲ್ಲಾಂದ್ರೆ ನಮಗೆ ಸ್ವಲ್ಪ ವಿಷ ಕೊಟ್ಟು, ನೀರಿನೊಳಗೆ ಹಾಕಿ ಏನಾದರೂ ಮಾಡಿ ನಮ್ಮನ್ನು ಸಾಯಿಸಿ, ಆಗ ನಿಮಗೆ ತೃಪ್ತಿಯಾಗುತ್ತದೆ ಎಂದು ಚನ್ನೇಗೌಡ ಹೇಳಿದ್ದಾರೆ.[ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]

ಸಿನಿಮಾದವರು ನಮಗೆ ಸಹಕಾರ ನೀಡಬೇಕು. ಎಲ್ಲರೂ ಬಂದು ನಮಗೆ ಸಪೋರ್ಟ್ ಮಾಡಿ, ನಮಗೆ ಆಶ್ರಯ ಕೊಡಿ. ಸರಕಾರ ಯಾಕೆ ನಮಗೆ ಈ ರೀತಿ ತೊಂದರೆ ಕೊಡುತ್ತಿದೆ ಎಂದು ಚನ್ನೇಗೌಡ ಪ್ರಶ್ನಿಸಿದ್ದಾರೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ತಮಿಳುನಾಡಿಗೆ ನೀರು ಬಿಟ್ಟದ್ದನ್ನು ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಗಡ್ಡಪ್ಪ ಆಲಿಯಾಸ್ ಚನ್ನೇಗೌಡ, ಸರಕಾರದ ವಿರುದ್ದ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cauvery protest: CM Siddaramaiah what is your problem, Thithi fame Gaddappa alias Channe Gowda question to Chief Minister.
Please Wait while comments are loading...