ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆ. 07: ಕಾವೇರಿ ಜಲವಿವಾದ ಪ್ರಕರಣದಲ್ಲಿ ಕರ್ನಾಟಕದ ಪರ ವಾದ ಮಂಡಿಸಲು ಹಿರಿಯ ವಕೀಲರಾದ ಫಾಲಿ ನಾರಿಮನ್ ಅವರನ್ನು ಆಯ್ಕೆ ಮಾಡಿದ್ದು ಯಾರು? ಅಸಲಿಗೆ ವಕೀಲರ ಆಯ್ಕೆ ಪ್ರಕಿಯೆ ಹೀಗೆ ನಡೆಯುತ್ತದೆ ಎಂಬುದರ ಬಗ್ಗೆ ಸ್ಥೂಲ ಚಿತ್ರಣ ಇಲ್ಲಿದೆ.

ರಾಜ್ಯಕ್ಕೆ ಪದೇ ಪದೆ ಸೋಲುಂಟಾಗುತ್ತಿರುವುದಕ್ಕೆ ಫಾಲಿ ನಾರಿಮನ್ ಹಾಗೂ ಅವರ ತಂಡವೇ ಕಾರಣ. ಸಮರ್ಥವಾಗಿ ವಾದ ಮಂಡಿಸದ ಕಾರಣ, ಕರ್ನಾಟಕ ವಕೀಲರ ಆಯೋಗದ ಮುಖ್ಯಸ್ಥರಾದ ಫಾಲಿ ಎಸ್ ನಾರಿಮನ್ ಅವರನ್ನು ಬದಲಾಯಿಸುವಂತೆ ಎಂದು ಮಾಜಿ ಸಂಸದ, ಕಾವೇರರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಆಗ್ರಹಿಸಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕ ಸರ್ಕಾರ ಪ್ರತಿಕ್ರಿಯಿಸಿದ್ದು ಓದಿರಬಹುದು. [ಫಾಲಿ ನಾರಿಮನ್ ತೆಗೆದು ಹಾಕಿ, ಬೇಡಿಕೆಗೆ ಸೊಪ್ಪು ಹಾಕದ ಸಿಎಂ]

ಆಯ್ಕೆ ಪ್ರಕ್ರಿಯೆ : ಈ ಕೇಸಿನಲ್ಲಿ ವಾದ ಮಂಡಿಸಲು ಫಾಲಿ ನಾರಿಮನ್ ಅವರು ಸಮರ್ಥರಾಗಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಒಮ್ಮೆ ಕಾನೂನಿನ ಮೂಲಕ ಹೋರಾಟ ನಡೆಸಬೇಕು ಎಂದು ನಿರ್ಧರಿಸಿದ ಮೇಲೆ ವಕೀಲರ ಆಯೋಗ ನೇಮಕ ಮಾಡಬೇಕಾಗುತ್ತದೆ. ರಾಜ್ಯದ ಕಾನೂನು ಸಚಿವರ ನೇತೃತ್ವದ ನಡೆಸಲಾಗುತ್ತದೆ. ಕಾನೂನು ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಉಪಸ್ಥಿತರಿರುತ್ತಾರೆ.[ತಮಿಳುನಾಡು ಸರ್ಕಾರಕ್ಕೆ ಸುಬ್ರಮಣ್ಯಯನ್ ಸ್ವಾಮಿ ಸಲಹೆ?]

ಈ ಸಭೆಯಲ್ಲಿ ಹಿರಿಯ ವಕೀಲರ ಹೆಸರನ್ನು ನಿರ್ಧರಿಸಲಾಗುತ್ತದೆ. ಆ ವಕೀಲರಿಗೆ ಮನವಿ ಮಾಡಲಾಗುತ್ತದೆ. ಅವರು ಒಪ್ಪಿಗೆ ಸೂಚಿಸಿದ ನಂತರ ಆ ವಕೀಲರ ಹೆಸರನ್ನು ಅಂದಿನ ಮುಖ್ಯಮಂತ್ರಿ ಅಂತಿಮಗೊಳಿಸುತ್ತಾರೆ.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]

ನಂತರ ಹಿರಿಯ ವಕೀಲರು, ಕಾನೂನು ಕಾರ್ಯದರ್ಶಿ ಹಾಗೂ ಅಡ್ವೊಕೇಟ್ ಜನರಲ್ ಅವರ ಮಾರ್ಗದರ್ಶನಲ್ಲಿ ವಕೀಲರ ಆಯೋಗ ನೇಮಕವಾಗುತ್ತದೆ. [ತಮಿಳುನಾಡಿಗೆ ಕಾವೇರಿ ನೀರು, ಸೋಮವಾರ ಸುಪ್ರೀಂಗೆ ಅರ್ಜಿ]

Caurvery Dispute Legal Battle: How the senior counsel appointed

ವಕೀಲರಿಗೆ ಎಷ್ಟು ಮೊತ್ತ ನೀಡಲಾಗುತ್ತದೆ?:
ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡನೆಗೂ ಮುನ್ನ ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ಮುಂದೆ ನಾರಿಮನ್ ನೇತೃತ್ವದ ವಕೀಲರ ಆಯೋಗಕ್ಕೆ ಕರ್ನಾಟಕ ನೀಡಿರುವ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಪುರಶ್ಕಾರ ಫೋರಮ್ ನ ಕೃಷ್ಣ ಜೋಶಿ ಅವರು 2007ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಉತ್ತರ ಕಂಡುಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ಹೆಚ್ಚು ಕಮ್ಮಿ ವಕೀಲರ ಆಯೋಗಕ್ಕೆ ಸರಾಸರಿ ಅಷ್ಟೇ ಮೊತ್ತ ಸಿಗುತ್ತಿದೆ ಎಂಬ ಮಾಹಿತಿ ಇದೆ.[ಫಾಲಿ ನಾರಿಮನ್ ತೆಗೆದು ಹಾಕಿ, ಬೇಡಿಕೆಗೆ ಸೊಪ್ಪು ಹಾಕದ ಸಿಎಂ]

* ಕರ್ನಾಟಕ ಸರಿ ಸುಮಾರು 23.44 ಕೋಟಿ ರು ಮೊತ್ತ ನೀಡಿದೆ.
* ವಕೀಲರಿಗೆ ವಾದ ಮಂಡನೆಗೆ ಮೊತ್ತ, ಹೋಟೆಲ್ ಖರ್ಚು ವೆಚ್ಚ ಸೇರಿಸಿ ಎಲ್ಲವನ್ನು ಲೋಕೋಪಯೋಗಿ ಇಲಾಖೆ ನೀಡಿದ ಬಜೆಟ್ ನಂತೆ ಪಾವತಿಸಲಾಗುತ್ತದೆ.
* ಹಿರಿಯ ವಕೀಲ ಅನಿಲ್ ದಿವಾನ್ ಅವರಿಗೆ 9.66 ಕೋಟಿ ರು
* ಫಾಲಿ ಎಸ್ ನಾರಿಮನ್ ಅವರಿಗೆ 2.08 ಕೋಟಿ ರು (ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ವೆಚ್ಚ ಸೇರಿಸಿ)
* ಮೋಹನ್ ಕಾತರಿಕಿ ಅವರಿಗೆ 2.75 ಕೋಟಿ ರು
* ಎಸ್ಎಸ್ ಜವಳಿ ಅವರಿಗೆ 3.77 ಕೋಟಿ ರು
* ಶಂಬು ಪ್ರಸಾದ್ ಸಿಂಗ್ ಅವರಿಗೆ 2.41 ಕೋಟಿ ರು ನೀಡಲಾಗಿತ್ತು.[ಇಂದೂ ಬೆಂಗಳೂರು-ಮೈಸೂರು ರಸ್ತೆ ಬಂದ್?]

ಇದಲ್ಲದೆ 10 ಮಂದಿ ಅಡ್ವೊಕೇಟ್ ಜನರಲ್ ಅವರಿಗೆ 1990 ರಿಂದ 2007ರ ತನಕ 1.34 ಕೋಟಿ ರು ಮೊತ್ತ ನೀಡಲಾಗಿದೆ. ಹೆಚ್ಚಿನ ವಿವರವನ್ನು ಇಲ್ಲಿ ಪಡೆದುಕೊಳ್ಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cauvery Dispute Legal Battle: Once it is decided to fight the case out, a meeting is convened in which the Law Minister, Law secretary and the Advocate General of the state are present. The name of the senior counsel would be suggested by this team following which the the counsel would be contacted for approval.
Please Wait while comments are loading...