ಕಾವೇರಿ ಕಣಿವೆ ನಿರ್ವಹಣೆ : ನಾರಿಮನ್ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ

ಬೆಂಗಳೂರು, ಮೇ 09 : ಕಾವೇರಿ ಕಣಿವೆಯ ನಿರ್ವಹಣೆ ಕುರಿತ ತಜ್ಞರ ಸಮಿತಿ ರಚನೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿನ ರಾಜ್ಯದ ಪರ ವಕೀಲ ಫಾಲಿ ಎಸ್ ನಾರಿಮನ್ ಅವರ ಜೊತೆಯಲ್ಲಿ ಮುಂದಿನ ವಾರ ಸಮಾಲೋಚಿಸಿ, ರಾಜ್ಯದ ಅಂತಿಮ ನಿಲುವನ್ನು ಜಲ ಸಂಪನ್ಮೂಲ ಮಂತ್ರಾಲಯಕ್ಕೆ ತಿಳಿಸಲು ಸರ್ವ ಪಕ್ಷಗಳ ಸದನ ನಾಯಕರ ಸಭೆಯಲ್ಲಿ ಇಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಈ ಸಭೆಯಲ್ಲಿ, ಕಾವೇರಿ ಕಣಿವೆಯ ನಿರ್ವಹಣೆ ಕುರಿತ ತಜ್ಞರ ಸಮಿತಿ ರಚನೆಗೆ ಸಂಬಂಧಿಸಿದಂತೆ ನಡೆದ ಸುದೀರ್ಘ ಚರ್ಚೆಯಲ್ಲಿ, ರಾಜ್ಯದ ಪರ ವಕೀಲರು ಹಾಗೂ ರಾಜ್ಯದ ಅಡ್ವೋಕೇಟ್ ಜನರಲ್, ಕೇಂದ್ರ ಸರ್ಕಾರದ ಸಂದೇಶದಲ್ಲಿ ಉಲ್ಲೇಖಿಸಿರುವ ಕಾನೂನು ವ್ಯಾಪ್ತಿಯ ಆರು ಅಂಶಗಳ ಸೂತ್ರದ ಸಾಧಕ-ಬಾಧಕಗಳ ಬಗ್ಗೆ ಸಭೆಯ ಗಮನ ಸೆಳೆದರು.

ತಜ್ಞರ ಸಮಿತಿ ರಚನೆಗೆ ಸಂಬಂಧಿಸಿದಂತೆ, ಜಲ ಸಂಪನ್ಮೂಲ ಮಂತ್ರಾಲಯದ ಸಂದೇಶ ಕುರಿತಂತೆ, ಅಂತಾರಾಜ್ಯ ಜಲ ವಿವಾದ ಕಾಯಿದೆ 1956 ಅನ್ವಯ, ರಾಜ್ಯಗಳ ಸಮ್ಮತಿ ಇಲ್ಲದೆಯೇ ಮಾಸಿಕ ಹರಿವು ನಿರ್ಧರಿಸಲು ಅಥವಾ ಸಂಕಷ್ಟ ಹಂಚಿಕೆ ಸೂತ್ರವನ್ನು ನಮೂದಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರ ಅಥವಾ ವ್ಯಾಪ್ತಿ ಇಲ್ಲ ಎಂದು ರಾಜ್ಯದ ಪರ ವಕೀಲ ಮೋಹನ್ ಕಾತರಕಿ ಅವರು ತಮ್ಮ ಲಿಖಿತ ಅಭಿಪ್ರಾಯದಲ್ಲಿ ತಿಳಿಸಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು.

Cauvery dispute : Final decision on expert group after consulting Nariman

ಕರ್ನಾಟಕ ಸೇರಿದಂತೆ ಕಣಿವೆ ವ್ಯಾಪ್ತಿಯ ನಾಲ್ಕೂ ರಾಜ್ಯಗಳ ಅಭಿಪ್ರಾಯ ಪಡೆಯಲು, ಕೇಂದ್ರ ಜಲ ಸಂಪನ್ಮೂಲ ಮಂತ್ರಾಲಯ ಕಳುಹಿಸಿರುವ ಸಂದೇಶದಲ್ಲಿ, ಕಾವೇರಿ ಕಣಿವೆಯ ಅಂತಾರಾಜ್ಯ ಜಲ ವಿವಾದದ ಪ್ರಮುಖ ಅಂಶಗಳನ್ನು ಗುರುತಿಸಿ ದಾಖಲಿಸುವಂತೆ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸೂಚಿಸಲಾಗಿದೆ.

ಆ ಸಂದೇಶದಲ್ಲಿ, ನೀರಿಗೆ ಸಂಕಷ್ಟವಿರುವ ವರ್ಷದಲ್ಲಿ ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಐತೀರ್ಪಿನ ಷರತ್ತು(6) ಮತ್ತು (9) ಅನುಷ್ಠಾನಗೊಳಿಸುವ ವಿಧಾನವನ್ನು ನಿರ್ಧರಿಸುವಂತೆ, ನೀರಿನ ಬಳಕೆಯ ತೀವ್ರತೆಯ ಮತ್ತು ಮಟ್ಟವನ್ನು ಕಡಿಮೆ ಮಾಡಿ ಪೂರೈಕೆ ಮತ್ತು ಬೇಡಿಕೆ ನಿರ್ವಹಣಾ ಆಯ್ಕೆಗಳ ಸಲಹೆ ಮಾಡುವಂತೆ ಹಾಗೂ ಅಂತಾರಾಜ್ಯ ಜಲ ವಿವಾದವನ್ನು ಬಗೆಹರಿಸಲು ಶಾಶ್ವತ ಸಾಂಸ್ಥಿಕ ಯಾಂತ್ರಿಕ ವ್ಯವಸ್ಥೆಯನ್ನು ಸಲಹೆ ಮಾಡುವಂತೆ ನಮೂದಿಸಲಾಗಿದೆ.

ಜಲ ಸಂಪನ್ಮೂಲ ಮಂತ್ರಾಲಯದ ಸಂದೇಶ ಕುರಿತು ವಕೀಲ ನಾರಿಮನ್ ಅವರೊಂದಿಗೆ ಚರ್ಚಿಸಿ, ಎಲ್ಲಾ ಪಕ್ಷಗಳ ಮುಖಂಡರು ನೀಡಿರುವ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಪ್ರಕಟಿಸಿದರು.

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಅವರು, ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಲ್ಲಿ ಕೇಂದ್ರ ಜಲ ಸಂಪನ್ಮೂಲ ಆಯೋಗವು ತಜ್ಞರ ಸಮಿತಿಯ ರಚನೆಯ ಬಗ್ಗೆ ಮುನ್ಸೂಚನೆ ನೀಡಿತ್ತು ಎಂದು ತಿಳಿಸಿದರು.

ಅಲ್ಲದೆ, ಕಾವೇರಿ ಜಲ ವಿವಾದ ಕುರಿತಂತೆ ಕರ್ನಾಟಕದ ಸಂವಾದಕ ಅರ್ಜಿ (ಇಂಟರ್‌ಲೊಕೇಟರಿ ಅಪ್ಲಿಕೇಷನ್), ಅಂತಾರಾಜ್ಯ ಜಲ ವಿವಾದ ನ್ಯಾಯಾಧಿಕರಣ ಐತೀರ್ಪನ್ನು ಪ್ರಶ್ನಿಸಿರುವ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಅರ್ಜಿಗಳ ವಿಚಾರಣೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಜುಲೈ 11ಕ್ಕೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅಂಶಗಳ ಕುರಿತು ವಕೀಲ ನಾರೀಮನ್ ನೇತೃತ್ವದ ತಂಡದೊಂದಿಗೆ ಚರ್ಚಿಸಿ ರಾಜ್ಯದ ಹಿತವನ್ನು ಕಾಪಾಡುವ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಗೃಹ ಸಚಿವ ಡಾ ಜಿ. ಪರಮೇಶ್ವರ್, ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜಾತ್ಯಾತೀತ ಜನತಾ ದಳದ ಮುಖಂಡರಾದ ಎಚ್. ಡಿ. ರೇವಣ್ಣ ಮತ್ತು ಬಸವರಾಜ ಹೊರಟ್ಟಿ, ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್, ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಕಾನೂನು ತಂಡದ ಸದಸ್ಯರು, ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಎಲ್. ಕೆ. ಅತೀಕ್ ಮತ್ತು ತುಷಾರ್ ಗಿರಿನಾಥ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+