ಕಾವೇರಿ ವಿವಾದ: ನಟ ಗೋಲ್ಡನ್ ಸ್ಟಾರ್ ಗಣೇಶ್ ಪ್ರತಿಕ್ರಿಯೆ ಹೀಗಿತ್ತು
ಕರ್ನಾಟಕ, ಸೆಪ್ಟೆಂಬರ್, 26: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಹರಿಸುತ್ತಿರುವ ಹಿನ್ನೆಲೆ ರಾಜ್ಯಾಂದ್ಯಂತ ರೈತರು ಸಮರ ಮುಂದುವರಸಿದ್ದಾರೆ. ಹಾಗೆಯೇ ಕನ್ನಡ ಸಿನಿಮಾ ತಾರೆಯರು ಕೂಡ ರೈತರ ಪರ ಧ್ವನಿ ಎತ್ತುತ್ತಿದ್ದಾರೆ. ಅಲ್ಲದೆ ಇಂದು ನಟ ಗೋಲ್ಡನ್ ಸ್ಟಾರ್ ಗಣೇಶ ಅವರು ನಮ್ಮ ನೆಲ ನಮ್ಮ ಜಲ, ಮೊದಲು ನಮ್ಮ ಜನಕ್ಕೆ ಎಂದು ಟ್ವೀಟ್ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಮುಂಗಾರು ಮಳೆ ಅಭಾವದಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಸಹ ಸಮಸ್ಯೆ ಉಂಟಾಗುತ್ತಿದೆ . ಕಾವೇರಿ ನಮ್ಮ ಮೂಲ ಸಂಪನ್ಮೂಲ ಆದ ಕಾರಣ ಸರ್ಕಾರವು ಎಲ್ಲಾ ವಿಷಯವನ್ನು ಗಮನಿಸಿ, ನಮ್ಮ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

"ಅಂದು ಇಂದು ಎಂದೆಂದಿಗೂ ಕಾವೇರಿ ನಮ್ಮದು. ಮಳೆ ಇಲ್ಲದೆ ನಮ್ಮ ರಾಜ್ಯದ ಜನಕ್ಕೆ ಕುಡಿಯಲು ನೀರಿಲ್ಲದ ಪರಿಸ್ಥಿಯಲ್ಲಿ ತಮಿಳು ನಾಡಿನ ರೈತರಿಗೆ ಬೆಳೆ ಬೆಳೆಯಲು ನೀರು ಬಿಡಬೇಕು ಎನ್ನುವ ಆದೇಶಕ್ಕೆ ನಮ್ಮ ಧಿಕ್ಕಾರವಿದೆ. ನಾಡು ನುಡಿ ನೀರಿನ ವಿಷಯದಲ್ಲಿ ನಮ್ಮ ರಾಜ್ಯದ ಪರ ನಮ್ಮ ಬೆಂಬಲ ಸದಾ ಇರುತ್ತದೆ," ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ನೆಲ ನಮ್ಮ ಜಲ
— Ganesh (@Official_Ganesh) September 26, 2023
ಮೊದಲು ನಮ್ಮ ಜನಕೆ
ಮುಂಗಾರು ಮಳೆ ಅಭಾವದಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಸಹ ಸಮಸ್ಯೆ ಉಂಟಾಗುತ್ತಿದೆ . ಕಾವೇರಿ ನಮ್ಮ ಮೂಲ ಸಂಪನ್ಮೂಲ ಆದಕಾರಣ ಸರ್ಕಾರವು ಎಲ್ಲಾ ವಿಷಯವನ್ನು ಗಮನಿಸಿ, ನಮ್ಮ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ.#kaverinammadu…
ಅಂಚೆ ಕಾರ್ಡ್ ಚಳವಳಿ
ಚಾಮರಾಜನಗರದಲ್ಲಿ ಕಾವೇರಿ ಕ್ರಿಯ ಸಮಿತಿಯವರು ಅಂಚೆ ಕಾರ್ಡ್ ಚಳವಳಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನೆಲ ನಮ್ಮ ಜಲ
— Ganesh (@Official_Ganesh) September 26, 2023
ಮೊದಲು ನಮ್ಮ ಜನಕೆ
ಮುಂಗಾರು ಮಳೆ ಅಭಾವದಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಸಹ ಸಮಸ್ಯೆ ಉಂಟಾಗುತ್ತಿದೆ . ಕಾವೇರಿ ನಮ್ಮ ಮೂಲ ಸಂಪನ್ಮೂಲ ಆದಕಾರಣ ಸರ್ಕಾರವು ಎಲ್ಲಾ ವಿಷಯವನ್ನು ಗಮನಿಸಿ, ನಮ್ಮ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ.#kaverinammadu…
ಚಾಮರಾಜನಗರ ಭವನದ ಎದುರು ಕೆಲಕಾಲ ಪ್ರತಿಭಟನಾ ನಡೆಸಿದ ಕಾವೇರಿ ಕ್ರಿಯ ಸಮಿತಿಯ ಕಾರ್ಯಕರ್ತರು ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರ ಮತ್ತು ಪ್ರಾಧಿಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಅಲ್ಲದೆ ಇದೇ ವೇಳೆ ಕೂಡಲೇ ಮಧ್ಯೆ ಪ್ರವೇಶ ಮಾಡಿ ನ್ಯಾಯ ದೊರಕಿಸಿ ಕೊಡುವಂತೆ ರಾಷ್ಟ್ರಪತಿಗೆ ಅಂಚೆ ಪತ್ರ ಬರೆದು ಮನವಿ ಮಾಡಿದ ಘಟನೆ ನಡೆದಿದೆ.
ಮಂಡ್ಯದಲ್ಲಿ ರಕ್ತ ಚಳವಳಿ
ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ನಿಲ್ಲಿಸುವಂತೆ ಒತ್ತಾಯಿಸಿ ಇಂದು ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘನೆಗಳು ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸಿವೆ. ಅದೇ ರೀತಿ ರೇಷ್ಮೆನಗರಿ ರಾಮನಗರದಲ್ಲೂ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ರಕ್ತ ಚಳವಳಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದ್ದು, ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸಿರಿಂಜ್ ಮೂಲಕ ರಕ್ತ ತೆಗದು ರಸ್ತೆಗೆ ರಕ್ತ ಚೆಲ್ಲಿದ್ದಾರೆ. ಅಲ್ಲದೆ ಇದೇ ವೇಳೆ ರಕ್ತ ಕೊಟ್ಟೆವೂ ನೀರು ಕೊಡೆವು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೂ ತಮಿಳುನಾಡು ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.












Click it and Unblock the Notifications