ಕಾವೇರಿ ವಿವಾದ ಮಧ್ಯೆ ತಮಿಳು ಸಿನಿಮಾ ಪ್ರಚಾರ! ಪತ್ರಿಕಾಗೋಷ್ಠಿಗೆ ಕನ್ನಡ ಹೋರಾಟಗಾರರ ವಿರೋಧ: ಎದ್ದು ಹೊರನಡೆದ ಸಿದ್ಧಾರ್ಥ್

ಬೆಂಗಳೂರು, ಸೆಪ್ಟೆಂಬರ್‌ 28: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕುರಿತು ಕರುನಾಡ ಜನತೆ ಹೋರಾಟ ಆರಂಭಿಸಿದ್ದು, ನಾಳೆ( ಶುಕ್ರವಾರ) ಕರ್ನಾಟಕ ಬಂದ್‌ ಕರೆ ವಿವಿಧ ಸಂಘಟನೆಗಳು ಬಂದ್‌ ಗೆ ಕರೆ ಕೊಟ್ಟಿದ್ದಾರೆ. ಇತ್ತ ಒಂದೆಡೆ ಕಾವೇರಿ ನೀರು ಹಂಚಿಕೆ‌ ವಿವಾದ ಜೋರಾಗಿದ್ರೆ ಮತ್ತೊಂದೆಡೆ ತಮಿಳು ಚಿತ್ರದ ಪ್ರಚಾರವೂ ಜೋರಾಗಿದೆ.

ತಮಿಳಿನ ಚಿತ್ತಾ ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ತಮಿಳು ನಟ ಸಿದ್ದಾರ್ಥ್ ನಟಿಸಿ, ನಿರ್ಮಿಸಿರುವ ಸಿನಿಮಾ ಚಿತ್ತಾ ಚಿಕ್ಕು ಹೆಸರಲ್ಲಿ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ತಮಿಳು ಮೂಲದ ನಟ ಸಿದ್ಧಾರ್ಥ್ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸುತ್ತಿದ್ದರು, ಈ ವೇಳೆ ಸುದ್ದಿಗೋಷ್ಠಿಗೆ ನುಗ್ಗಿದ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಸದಸ್ಯರು ಸುದ್ದಿಗೋಷ್ಠಿಯನ್ನು ತಡೆದಿದ್ದಾರೆ.

cauvery-activists-disrupt-siddarth

ಕನ್ನಡಕ್ಕೆ ಡಬ್‌ ಆಗಿರುವ ಚಿಕ್ಕು ಸಿನಿಮಾದ ಕುರಿತು ವೇದಿಕೆಯ ಮೇಲೆ ನಟ ಸಿದ್ಧಾರ್ಥ್ ತಮ್ಮ ಸಿನಿಮಾ ಕುರಿತಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ನುಗ್ಗಿದ ಕಾರ್ಯಕರ್ತರು, 'ಕಾವೇರಿ ವಿವಾದ ಕಾವೇರಿರುವ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಆರ್ಡರ್‌ ಅಲ್ಲ ಬದಲಿಗೆ ಮನವಿ, ಕೂಡಲೇ ಸಿನಿಮಾ ಪ್ರಚಾರವನ್ನ ನಿಲ್ಲಿಸಿ ಎಂದು ಕರವೇ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ನಟ ಸಿದ್ದಾರ್ಥ್‌ ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ನುಗ್ಗಿದರು ಈ ವೇಳೆ ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಸಿದ್ಧಾರ್ಥ್ ಮಾತನ್ನು ತಡೆದು, ನಾವು ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ ನೀವು ಈ ಸಂದರ್ಭದಲ್ಲಿ ಯಾರೂ ಸಹ ತಮಿಳು ಸಿನಿಮಾಕ್ಕೆ ಪ್ರಚಾರ ನೀಡಬಾರದೆಂದು ಆಗ್ರಹಿಸಿದರು. ಈ ವೇಳೆ ದ್ಧಾರ್ಥ್ ಸಹ ಕೂಡಲೇ ಎದ್ದು ದಯವಿಟ್ಟು ಎಲ್ಲರೂ ನನ್ನ ಸಿನಿಮಾ ನೋಡಿ ಎಂದು ಹೇಳಿ ಕೈಮುಗಿದು ವೇದಿಕೆ ಬಿಟ್ಟು ಹೊರಟರು.

ತಮಿಳು ನಟ ಸಿದ್ಧಾರ್ಥ್ ನಟನೆಯ 'ಚಿತ್ತ' ಸಿನಿಮಾ ಇಂದು (ಸೆಪ್ಟೆಂಬರ್ 28) ಬಿಡುಗಡೆ ಆಗಿದೆ. ಸಿನಿಮಾವು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬಂದಿದೆ. 'ಚಿತ್ತ' ಸಿನಿಮಾದ ಕನ್ನಡ ಟೀಸರ್ ಅನ್ನು ನಟ ಕಿಚ್ಚ ಸುದೀಪ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಿ ಸಿದ್ಧಾರ್ಥ್​ಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಈ ಚಿತ್ತ ಸಿನಿಮಾವೂ ಕನ್ನಡದಲ್ಲಿ ಚಿಕ್ಕು ಗೆ ಡಬ್‌ ಆಗಿದ್ದು, ಕನ್ನಡದಲ್ಲೇ ನಟ ಸಿದ್ದಾರ್ಥ್‌ ಡಬ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+