ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಹರೂ ಎಂಬ ದೈತ್ಯ ಶಕ್ತಿಯ ಮುಂದೆ ಬಿಜೆಪಿಯ ಅಲ್ಪಮತಿಗಳು ನಿಲ್ಲಬಲ್ಲರೇ?

By ಡಾ.ಹೆಚ್.ಸಿ.ಮಹದೇವಪ್ಪ
|
Google Oneindia Kannada News

ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳು ಸಲ್ಲುತ್ತಿರುವ ಈ ವೇಳೆಯಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಹಾಗೂ ಜಾತ್ಯಾತೀತ ಮೌಲ್ಯಗಳ ಅಡಿಪಾಯದ ಮೇಲೆ ಭಾರತದ ಅಭಿವೃದ್ಧಿ ಮತ್ತು ಜನ ಬದುಕಿನ ಕನಸುಗಳನ್ನು ನಿರ್ಮಾಣ ಮಾಡಿದ ಪಂಡಿತ್ ಜವಾಹರ್ ನೆಹರೂ ಅವರನ್ನು ಇಷ್ಟು ದಿನ ಟೀಕಿಸುತ್ತಿದ್ದ ಪ್ರಧಾನಿ ಮೋದಿ ಅವರು ದಿಢೀರ್ ಎಂದು ಅಚ್ಚರಿಯಂತೆ ಸ್ಮರಿಸಿಕೊಂಡಿದ್ದು ಅವರ ತಂತ್ರಗಳೇನು ಎಂಬುದರ ಬಗ್ಗೆ ನನ್ನನ್ನು ಚಿಂತಿಸುವಂತೆ ಮಾಡಿದೆ.

ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡಾ ನೆಹರೂ ಅವರ ಹೋರಾಟ ಮತ್ತು ಬದುಕು ಅನುಕರಣನೀಯ ಎಂದು ಹೇಳಿದರೂ ಕೂಡಾ ಅವರದೇ ಪಕ್ಷದ ಕೋಮುವ್ಯಾಧಿ ಹುಳುವೊಂದು ತನ್ನ 3 ನೇ ದರ್ಜೆಯ ಪ್ರಚಾರಕ್ಕಾಗಿ ತನ್ನ ಪ್ರಧಾನಿಯಂತೆಯೇ ನೆಹರೂ ಅವರ ಮೊರೆ ಹೋಗಿರುವುದು ಅವನ ಮೂರ್ಖತನದ ಪರಮಾವಧಿ.

ರಾಜ್ಯ ಸರಕಾರಗಳಿಂದ ಕಸಿದುಕೊಂಡಿದ್ದ ಹಕ್ಕನ್ನು ಕೇಂದ್ರ, ರಾಜ್ಯಗಳಿಗೆ ಮರಳಿಸಿದೆರಾಜ್ಯ ಸರಕಾರಗಳಿಂದ ಕಸಿದುಕೊಂಡಿದ್ದ ಹಕ್ಕನ್ನು ಕೇಂದ್ರ, ರಾಜ್ಯಗಳಿಗೆ ಮರಳಿಸಿದೆ

ಅಷ್ಟಕ್ಕೂ ಭಾರತವನ್ನು ಎಲ್ಲಾ ಅರ್ಥದಲ್ಲಿ ಅಂದರೆ ಶಿಕ್ಷಣ, ಕೃಷಿ, ನೀರಾವರಿ ಮತ್ತು ಮೂಲ ಸೌಕರ್ಯಗಳ ಆಧಾರಿತವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ನೆಹರೂ ಅವರ ಬದುಕು ಮತ್ತು ಹೋರಾಟಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿರುವಂತಹವು.

ಆಗರ್ಭ ಶ್ರೀಮಂತನಾಗಿದ್ದರೂ ಕೂಡಾ ಅವೆಲ್ಲವನ್ನೂ ಪಕ್ಕಕ್ಕೆ ಇಟ್ಟು ಇಂದು ಕೂಗುಮಾರಿಗಳಾಗಿರುವ ಅಂದಿನ ಬ್ರಿಟಿಷರ ಸೇವಕರಾಗಿದ್ದ ಮನುವಾದಿಗಳನ್ನು ದಿಟ್ಟತನದಿಂದ ಎದುರುಗೊಂಡಿದ್ದ ನೆಹರೂ ಅವರ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದು ಜೈಲು ಸೇರಿದ್ದನ್ನು ಮರೆತು ಮಾತನಾಡಿದರೆ ಅದಕ್ಕೆ ಎಂದೂ ಕ್ಷಮೆಯಿಲ್ಲ.

 ಬಿಜೆಪಿಯ ಅಜ್ಞಾನಿಗಳು ಕಾಂಗ್ರೆಸ್ ಬಳಿ ಆಡಳಿತಾತ್ಮಕ ಸಲಹೆ ಪಡೆಯಲಿ ಬಿಜೆಪಿಯ ಅಜ್ಞಾನಿಗಳು ಕಾಂಗ್ರೆಸ್ ಬಳಿ ಆಡಳಿತಾತ್ಮಕ ಸಲಹೆ ಪಡೆಯಲಿ

 ಕೆಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ನಂತರ ಬ್ಯಾರಿಸ್ಟರ್ ಪದವಿಯನ್ನು ಪಡೆದ ನೆಹರೂ

ಕೆಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ನಂತರ ಬ್ಯಾರಿಸ್ಟರ್ ಪದವಿಯನ್ನು ಪಡೆದ ನೆಹರೂ

ಜಗತ್ತು ಮಲಗಿರುವಾಗ ಭಾರತವು ತನ್ನ ಜನರ ಬದುಕು ಮತ್ತು ಸ್ವಾತಂತ್ರ್ಯಕ್ಕಾಗಿ ಸದಾ ಎಚ್ಚರವಾಗಿರುತ್ತದೆ ಎಂಬ ಮಾತನ್ನು ಹೇಳುತ್ತಿದ್ದ ನೆಹರೂ ಅವರು ಮಧ್ಯ ರಾತ್ರಿಯೇ ಭಾರತದ ಸ್ವಾತಂತ್ರ್ಯವನ್ನು ಘೋಷಿಸಿದ ಘಳಿಗೆಯು ಈ ದಿನ ಭಾರತೀಯರ ಪಾಲಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವಾಗಿದೆ. ಇನ್ನು ಕೆಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ನಂತರ ಬ್ಯಾರಿಸ್ಟರ್ ಪದವಿಯನ್ನು ಪಡೆದ ನೆಹರೂ ಅವರು ಓರ್ವ ವಕೀಲನಾಗಿ ದೇಶದ ಮಾನವ ಹಕ್ಕುಗಳನ್ನು ಕಾಪಾಡುವ ಸಲುವಾಗಿ ತನ್ನ ವೈಭೋಗದ ಬದುಕಿಗೆ ತಿಲಾಂಜಲಿಯಿಟ್ಟು ಹೋರಾಟಕ್ಕೆ ಧುಮುಕಿದರು.

 ಅಮೇರಿಕಾದ ಮಾನವ ಹಕ್ಕುಗಳ ಹೋರಾಟದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್

ಅಮೇರಿಕಾದ ಮಾನವ ಹಕ್ಕುಗಳ ಹೋರಾಟದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್

ನೆಹರೂ ಅವರ ಜ್ಞಾನದ ಫಲವಾಗಿ ರೂಪುಗೊಂಡ ಭಾರತದ ಹೋರಾಟಗಳು ಪರೋಕ್ಷವಾಗಿ ನಮ್ಮ ದೇಶದ ಮಾನವ ಹಕ್ಕುಗಳ ಸಮಿತಿಯ ಚರ್ಚಾ ಕೊಠಡಿಗಳಲ್ಲಿ ಇಂದು ಜೀವಂತವಾಗಿವೆ ಎಂದು ಅಮೇರಿಕಾದ ಮಾನವ ಹಕ್ಕುಗಳ ಹೋರಾಟದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಹೇಳುತ್ತಾರೆ. ಬಹುಶಃ ಈಗಿನ ಯಾವ ಬಿಜೆಪಿಗರಿಗೂ ಕೂಡಾ ಇಂತಹ ಒಂದು ಅರ್ಥಪೂರ್ಣ ಪ್ರಶಂಸೆ ದೊರೆತಿರಲಾರದು.

 ಈಗಿನ ಪ್ರಧಾನಿ ಮೋದಿಯವರು ಓರ್ವ ದಡ್ಡನಂತೆ ಕಾಣುತ್ತಾರೆ

ಈಗಿನ ಪ್ರಧಾನಿ ಮೋದಿಯವರು ಓರ್ವ ದಡ್ಡನಂತೆ ಕಾಣುತ್ತಾರೆ

ಅರೆ, ಇವರು ಅಂತಹ ಘನಕಾರ್ಯ ಏನಾದರೂ ಮಾಡಿದ್ದರೆ ತಾನೇ ಪ್ರಶಂಸೆ ದೊರೆಯುವುದು? ಇನ್ನು ಮಾನವ ಹಕ್ಕುಗಳನ್ನು ಕಾಪಾಡುವ ಮತ್ತು ದೇಶವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪಂಡಿತ್ ನೆಹರೂ ಅವರಿಗೆ ಇದ್ದಂತಹ ದೂರದೃಷ್ಟಿಯು ನಿಜಕ್ಕೂ ಪ್ರಶಂಸನೀಯವಾಗಿರುವಂತದ್ದು. ದೂರದೃಷ್ಟಿ ಮತ್ತು ವಿದೇಶಾಂಗ ನೀತಿಗಳ ನಿರ್ವಹಣೆಯಲ್ಲಿ ನೆಹರೂ ಅವರಿಗೆ ಹೋಲಿಸಿದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು (ಹೋಲಿಸಬಾರದು) ಓರ್ವ ದಡ್ಡನಂತೆ ಕಾಣುತ್ತಾರೆ.

 ಟ್ರಂಪ್ ಚುನಾವಣೆ ಪರವಾಗಿ ಕೆಲಸ ಮಾಡಲು ಅಮೆರಿಕಾ ದೇಶಕ್ಕೆ ಹೋಗಿದ್ದ ಮೋದಿ

ಟ್ರಂಪ್ ಚುನಾವಣೆ ಪರವಾಗಿ ಕೆಲಸ ಮಾಡಲು ಅಮೆರಿಕಾ ದೇಶಕ್ಕೆ ಹೋಗಿದ್ದ ಮೋದಿ

ಕಾರಣ ನೆಹರೂ ಅವರ ವಿದೇಶಿ ಸಂಬಂಧಗಳ ತಟಸ್ಥ ನೀತಿಯನ್ನು ಅನುಸರಿಸಿದರೆ ನಮ್ಮ ಪ್ರಧಾನಿಗಳು ಅಮೇರಿಕಾದ ಓರ್ವ ಅತಿರೇಕದ ಮಾಜಿ ಅಧ್ಯಕ್ಷನಾಗಿದ್ದ ಡೊನಾಲ್ಡ್ ಟ್ರಂಪ್ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ. ಚುನಾವಣೆಯಲ್ಲಿ ಜೋ ಬಿಡೇನ್ ಅವರು ಗೆದ್ದ ಮೇಲೆ ಟ್ರಂಪ್ ಚುನಾವಣೆ ಪರವಾಗಿ ಕೆಲಸ ಮಾಡಲು ಅಮೆರಿಕಾ ದೇಶಕ್ಕೆ ಹೋಗಿದ್ದ ಮೋದಿಯನ್ನು ಯಾವ ರೀತಿ ಕಾಣುತ್ತಾರೆ ಮತ್ತು ಭಾರತಕ್ಕೆ ಅವರು ಬೆಂಬಲ ಕೊಡಬಲ್ಲರೇ ಎಂಬ ಸಣ್ಣ ಕಾಮನ್ ಸೆನ್ಸ್ ಇದ್ದಿದ್ದರೆ ಮೋದಿಯವರನ್ನು ಮೆಚ್ಚಬಹುದಿತ್ತು.

 ನೆಹರೂ ಬಗ್ಗೆ ಮಾತನಾಡಲು ಇವರಿಗೆ ಅರ್ಹತೆ ಬರಬೇಕೆಂದರೆ ಇವರು ಪುನಃ ಹುಟ್ಟಿ ಬರಬೇಕು

ನೆಹರೂ ಬಗ್ಗೆ ಮಾತನಾಡಲು ಇವರಿಗೆ ಅರ್ಹತೆ ಬರಬೇಕೆಂದರೆ ಇವರು ಪುನಃ ಹುಟ್ಟಿ ಬರಬೇಕು

ಆದರೆ ಪ್ರಚಾರದ ಹುಚ್ಚಿನಲ್ಲಿ ಮುಳುಗಿರುವ ನಮ್ಮ ಪ್ರಧಾನಿಗಳಿಗಾಗಲೀ, ದೇಶದ ಜನಸೇವಾ ವಲಯವನ್ನು ಮೌಢ್ಯ ಮತ್ತು ಅಪಾಯಕಾರಿ ಧಾರ್ಮಿಕತೆಯಿಂದ ನಿರ್ಮಿಸಲು ಹೊರಟಿರುವ ಬಿಜೆಪಿ ಪಕ್ಷದ ಬಾಲಂಗೋಚಿಗಳಿಗಾಗಲೀ ಆಧುನಿಕ ಭಾರತದ ನಿರ್ಮಾತೃವಾದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಬಗ್ಗೆ ಮಾತನಾಡುವ ಕನಿಷ್ಠ ಯೋಗ್ಯತೆ ಇಲ್ಲ. ನೆಹರೂ ಬಗ್ಗೆ ಮಾತನಾಡಲು ಇವರಿಗೆ ಅರ್ಹತೆ ಬರಬೇಕೆಂದರೆ ಇವರು ಪುನಃ ಹುಟ್ಟಿ ಬಂದು ಅಸಮಾತೆಯ ಸಂಕಷ್ಟಗಳನ್ನು ಮತ್ತು ಜಾತಿ ಕಾರಣದ ನೋವುಗಳನ್ನು ಅನುಭವಿಸಬೇಕು ಎಂದು ನನಗೆ ತೋರುತ್ತದೆ!

Recommended Video

ಮಗನನ್ನು ರಾಜಕೀಯಕ್ಕೆ ತರಲು ಸೈಲೆಂಟಾಗಿ ಪ್ಲಾನ್ ಮಾಡ್ತಿದ್ದಾರಾ CM ಬೊಮ್ಮಾಯಿ? | Oneindia Kannada

English summary
Cannot Compare Jawaharlal Nehru With Any Of The BJP Leaders Article By DR H C Mahadevappa. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X