ತುಮಕೂರಿನಿಂದ ಸೋಮಣ್ಣ ಸ್ಪರ್ಧೆ ಕುರಿತು ಮಹತ್ವದ ಹೇಳಿಕೆ ನೀಡಿದ ಬಿ ವೈ ವಿಜಯೇಂದ್ರ
ತುಮಕೂರು, ಫೆಬ್ರವರಿ 03: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಮಾಜಿ ಸಚಿವ ವಿ ಸೋಮಣ್ಣ , ಇದೀಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಹೌದು, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟಿದ್ದ ವಿ ಸೋಮಣ್ಣ ಗೆ ಹೈಕಮಾಂಡ್ ನಡೆಯಿಂದ ಬೇಸರಗೊಂಡ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ, ಹೈಕಮಾಂಡ್ ಮಾಜಿ ಸಚಿವ ವಿ ಸೋಮಣ್ಣ ಅವರನ್ನ ಮನವೊಲಿಸುವಲ್ಲಿ ಯಶಸ್ಸಿಯಾಗಿದ್ದು, ಲೋಕಸಭಾ ಚುನಾವಣಾ ಟಿಕೆಟ್ ನೀಡುವ ಕುರಿತು ಭರವಸೆ ನೀಡಿದೆ. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗಾಗಿ ಸೋಮಣ್ಣ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಸೋಮಣ್ಣ ಸಂಚಾರ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಒಪ್ಪಿಗೆ ಸೂಚಿಸಿದರೆ ನಮ್ಮದೇನು ಅಭ್ಯಂತರ ಇಲ್ಲ. ಸೋಮಣ್ಣ ಎಲ್ಲರಿಗಿಂತ ಹಿರಿಯರಿದ್ದಾರೆ. ಪಕ್ಷ ಒಗ್ಗಟ್ಟಾಗಿ ಎಲ್ಲಾ ತೀರ್ಮಾನ ಮಾಡುತ್ತದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಸ್ಪರ್ಧಿಸುವುದಕ್ಕೆ ಯಾರ ವಿರೋಧವೂ ಇಲ್ಲ ಎಂದು ತಿಳಿಸಿದ್ದಾರೆ.
2047ರಲ್ಲಿ ನಮ್ಮ ದೇಶವು ವಿಕಸಿತ ಭಾರತವಾಗಿ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಆಗಬೇಕೆಂಬ ಸಂಕಲ್ಪದೊಂದಿಗೆ ಮೋದಿಜೀ ಅವರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಈ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಒಬ್ಬ ದಲಿತ ಮಹಿಳೆ ಗೌರವಾನ್ವಿತ ದ್ರೌಪದಿ ಮುರ್ಮು ಅವರು ಅಲಂಕರಿಸಲು ಬಿಜೆಪಿ ಕಾರಣ. ದೇಶದ ಹಣಕಾಸು ಸಚಿವರ ಸ್ಥಾನವನ್ನು ಮಹಿಳೆಗೆ ಮೋದಿಜೀ ಅವರು ನೀಡಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಈ ವಿಷಯದಲ್ಲಿ ಕೇವಲ ಮಾತನಾಡುತ್ತ ಬಂದಿತ್ತು.
ಸ್ವಾತಂತ್ರ್ಯ ಬಂದ ಬಳಿಕ ಒಬ್ಬ ಮಹಿಳೆಗೆ ಇಂಥ ಸುವರ್ಣಾವಕಾಶ ಲಭಿಸಿದೆ. ಅದರಲ್ಲೂ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ, ಹಣಕಾಸು ಸಚಿವರಾಗಿ ಈ ದೇಶವನ್ನು ಮುನ್ನಡೆಸುವ ನರೇಂದ್ರ ಮೋದಿಜೀ ಅವರಿಗೆ ಶಕ್ತಿ ತುಂಬಿದ ದಿಟ್ಟ ಮಹಿಳೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎನ್ನುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ಎಂದರು.
ಈ ದೇಶದಲ್ಲಿ ಸ್ತ್ರೀ ಸಮಾನತೆ, ಸ್ತ್ರೀಯರ ಹಕ್ಕುಗಳ ಕುರಿತು 12ನೇ ಶತಮಾನದಲ್ಲಿ ಮೊದಲ ಬಾರಿಗೆ ಧ್ವನಿ ಎತ್ತಲಾಗಿತ್ತು. ಶಿವಶರಣೆ ಅಕ್ಕಮಹಾದೇವಿ ಅವರು ಅಂದಿನ ಕಾಲಘಟ್ಟದಲ್ಲಿ ಈ ವಿಷಯಗಳ ಕುರಿತು ಧ್ವನಿ ಎತ್ತಿದ್ದರು. ಸ್ವಾತಂತ್ರ್ಯದ ಬಳಿಕ 17 ವರ್ಷಗಳ ಕಾಲ ಪ್ರಧಾನಿ ಹುದ್ದೆಯನ್ನು ಇಂದಿರಾ ಗಾಂಧಿಯವರು ನಿರ್ವಹಿಸಿದ್ದರು. ಮಹಿಳಾ ಸಮಾನತೆ ಮತ್ತು ಸ್ತ್ರೀಯರಿಗೆ ಹಕ್ಕುಗಳನ್ನು ನೀಡುವುದು, ಸ್ತ್ರೀ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಗಟ್ಟಿ ನಿರ್ಧಾರವನ್ನು ಅವರು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ವಿಪರ್ಯಾಸ ಮತ್ತು ಕಟುಸತ್ಯ ಎಂದು ಹೇಳಿದರು.
ದೇಶಾದ್ಯಂತ ಸುಮಾರು 2,67,295 ಸ್ವ ಸಹಾಯ ಸಂಘಗಳು ಹಾಗೂ ಎನ್.ಜಿ.ಒ ಗಳೊಂದಿಗೆ ಸಂಪರ್ಕ ಸಾಧಿಸಿ 25 ಲಕ್ಷಕ್ಕೂ ಹೆಚ್ಚಿನ ಮಹಿಳೆಯರನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರ 'ವಿಕಸಿತ ಭಾರತ ಸಂಕಲ್ಪ' ಅಭಿಯಾನದೊಂದಿಗೆ ಜೋಡಿಸುವ ಮಹತ್ವದ ಗುರಿ ಈಡೇರಿಸಲು ಶಕ್ತಿಮೀರಿ ಶ್ರಮಿಸಬೇಕೆಂಬ ಮನವಿ ಮಾಡಿದರು.












Click it and Unblock the Notifications