ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವುದು ನರೇಂದ್ರ ಮೋದಿಗೆ ಯಾವ ಲೆಕ್ಕ ಎಂದ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 2: ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಸಂದರ್ಭದಲ್ಲಿನ ಭಾಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿಲ್ಲ ಎಂದು ಹೇಳಿರುವ ಕರ್ನಾಟಕ ಕಾಂಗ್ರೆಸ್, 'ಬಿಎಸ್‌ವೈ ಈಗ ಚಲಾವಣೆಯಲ್ಲಿ ಇಲ್ಲದ ನಾಣ್ಯ' ಎಂದು ಟೀಕಿಸಿದೆ.

"ಬಿಎಸ್‌ವೈ ವೇದಿಕೆಯಲ್ಲಿದ್ದರೂ ನರೇಂದ್ರ ಮೋದಿ ಸೌಜನ್ಯಕ್ಕೂ ಅವರ ಹೆಸರು ಹೇಳಲಿಲ್ಲ. ಇಷ್ಟು ಬೇಗ ಬಿ.ಎಸ್.ಯಡಿಯೂರಪ್ಪ ಒಡೆದ ಮಡಕೆಯಂತಾದರೆ" ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

ಅಡ್ವಾಣಿಯವರನ್ನೇ ಮುಕ್ತ ಮಾಡಿರುವಾಗ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವುದು ನರೇಂದ್ರ ಮೋದಿಗೆ ಯಾವ ಲೆಕ್ಕ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ ಎಂದು ಕಾಂಗ್ರೆಸ್ ಹೇಳಿದೆ.

Breaking: ಮಂಗಳೂರಲ್ಲಿ ಪ್ರಧಾನಿ: ಡಬಲ್ ಇಂಜಿನ್ ಸರ್ಕಾರ ಜನರ ಆಕಾಂಕ್ಷೆ ಪೂರೈಸುತ್ತೆBreaking: ಮಂಗಳೂರಲ್ಲಿ ಪ್ರಧಾನಿ: ಡಬಲ್ ಇಂಜಿನ್ ಸರ್ಕಾರ ಜನರ ಆಕಾಂಕ್ಷೆ ಪೂರೈಸುತ್ತೆ

ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷ, ದಕ್ಷಿಣ ಕನ್ನಡ ಸಂಸದರಾಗಿದ್ದರೂ ವೇದಿಕೆಯಲ್ಲಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಕಟೀಲ್ ಅವರ ಹೆಸರು ಹೇಳದಿರುವುದು ಯಾಕೆ? ಎಂದು ಪ್ರಶ್ನೆ ಮಾಡಿದೆ.

ಕಾರ್ಯಕರ್ತರು ಕಾರು ಅಲ್ಲಾಡಿಸಿದ ಪರಿಣಾಮವೇ?, ನಳಿನ್ ಕುಮಾರ್ ಕಟೀಲ್ ವಿರೋಧಿ ಬಣದ ಅಭಿಯಾನಕ್ಕೆ ಸಿಕ್ಕ ಯಶಸ್ಸೇ?, ಇದು ದಕ್ಷಿಣ ಕನ್ನಡದ ಸಂಸತ್ ಅಭ್ಯರ್ಥಿ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆಯೇ? ಎಂದು ಪ್ರಶ್ನೆ ಮಾಡಿದೆ.

ನರೇಂದ್ರ ಮೋದಿ 25 ಭರವಸೆಗೆ ಉತ್ತರ ಕೇಳಿದ ಸಿದ್ದರಾಮಯ್ಯ!ನರೇಂದ್ರ ಮೋದಿ 25 ಭರವಸೆಗೆ ಉತ್ತರ ಕೇಳಿದ ಸಿದ್ದರಾಮಯ್ಯ!

ಸಿಎಂ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

ಸಿಎಂ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದರು ಅವರು ನಿಮ್ಮ ಪಕ್ಕದಲ್ಲೇ ನಿಂತಿದ್ದರು. ನೀವೆ ಅವರನ್ನು ಸ್ವಾಗತಿಸಿದಿರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವಂತೆ ಪ್ರಧಾನಿಯವರನ್ನು ಯಾಕೆ ಆಹ್ವಾನಿಸಲಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಅತಿವೃಷ್ಟಿ ವರದಿ ನೀಡಿ, ಪರಿಹಾರಕ್ಕೆ ಬೇಡಿಕೆ ಇಡಲಿಲ್ಲವೇಕೆ?. ರಾಜ್ಯದ ಪಾಲಿನ ಜಿಎಸ್‌ಟಿ ಬಾಕಿ, ರಾಜ್ಯದ ಪಾಲಿನ ಅನುದಾನಗಳ ಬಿಡುಗಡೆಗೆ ಕೇಳಲಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಜನರಿಗೆ ಪ್ರಧಾನಿ ಮೋದಿ ಮೋಸ ಅರ್ಥವಾಗಿದೆ

ಜನರಿಗೆ ಪ್ರಧಾನಿ ಮೋದಿ ಮೋಸ ಅರ್ಥವಾಗಿದೆ

ಜನರನ್ನು ಕರೆತರಲು ಬಸ್ಸುಗಳನ್ನು ನಿಯೋಜಿಸಲಾಗಿತ್ತು, ಬಲವಂತದ ಆದೇಶಗಳನ್ನು ಮಾಡಲಾಯಿತು. ನೋಡಲ್ ಅಧಿಕಾರಿಗಳ ಹಗಲು ರಾತ್ರಿ ಶ್ರಮ, ಮನೆ ಮನೆಗೆ ತೆರಳಿ ಜನರಿಗೆ ಆಹ್ವಾನ, ಇಷ್ಟೆಲ್ಲಾ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಕೆಲವೇ ಸಾವಿರ ಜನ ಅಷ್ಟೇ ಸೇರಿದ್ದಾರೆ ಎಂದು ಕಾಂಗ್ರೆಸ್ ಹೇಳಿದ್ದು, ಜನರಿಗೂ ಮೋದಿ ಮೋಸ ಅರ್ಥವಾಗಿದೆ ಎಂದು ಹೇಳಿದೆ.


ರಾಜ್ಯದ ಜನತೆಗೆ ಮೋದಿ ಮೋಸದ ಅಸಲಿ ಬಂಡವಾಳ ತಿಳಿದುಹೋಗಿದೆ. ರಾಜ್ಯದ ಭ್ರಷ್ಟ ಸರ್ಕಾರದ ಮೇಲೆ ಜನರ ಆಕ್ರೋಶ ಇಮ್ಮಡಿಯಾಗಿದೆ ಎಂದು ಕಾಂಗ್ರಸ್ ಹೇಳಿದೆ.

40% ಕಮಿಷನ್ ಬಗ್ಗೆಯೂ ಮಾತನಾಡಿ ಮೋದಿ

40% ಕಮಿಷನ್ ಬಗ್ಗೆಯೂ ಮಾತನಾಡಿ ಮೋದಿ

ಮತ್ತದೇ ಹಳೆ ಕ್ಯಾಸೆಟ್, ಮತ್ತದೇ ಸುಳ್ಳು ಅಂಕಿ ಅಂಶಗಳನ್ನು ಹೇಳುವುದು, ಆತ್ಮವಂಚನೆಯ ಮಾತುಗಳನ್ನಾಡುವುದೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ 40 % ಕಮಿಷನ್ ಲೂಟಿಯ ಬಗ್ಗೆ ಮಾತನಾಡದಿರುವುದು ಆತ್ಮವಂಚಕತನವಲ್ಲವೇ ಎಂದು ಪ್ರಶ್ನೆ ಮಾಡಿದೆ.

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯ ಅಭಿವೃದ್ಧಿಯಾಗುತ್ತಿದೆ ಎಂದು ಹಳೇ ಸುಳ್ಳನ್ನು ಪುನರಾವರ್ತಿಸುವ ಮೂಲಕ ತಮ್ಮ ನಯವಂಚಕತನವನ್ನು ತೋರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮೈಸೂರನ್ನು ಪ್ಯಾರಿಸ್ ಮಾಡುವ ಯೋಜನೆ ಏನಾಗಿದೆ?

ಮೈಸೂರನ್ನು ಪ್ಯಾರಿಸ್ ಮಾಡುವ ಯೋಜನೆ ಏನಾಗಿದೆ?

ನರೇಂದ್ರ ಮೋದಿಯವರೇ ಮೈಸರನ್ನು ಪ್ಯಾರಿಸ್ ಮಾಡುವ ನಿಮ್ಮ ಯೋಜನೆ ಏನಾಯ್ತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮೈಸೂರು ಪ್ಯಾರಿಸ್ ಆಗಲಿಲ್ಲ, ಕನಿಷ್ಠ ಪಕ್ಷ ಮೊನ್ನೆಯ ಮಳೆಗೆ ಮೈಸೂರಿಗೆ ತೆರಳುವ ನಿಮ್ಮ ಹೊಚ್ಚ ಹೊಸ ರಾಷ್ಟ್ರೀಯ ಹೆದ್ದಾರಿ 'ವೆನಿಸ್' ಆಗಿ ಬದಲಾಗಿತ್ತು. ಇದು ನಿಮ್ಮ ಗಮನಕ್ಕೆ ಬಂದಿದೆಯೇ ಎಂದು ಕೇಳಿದೆ. ಹೇಳುವುದು ಒಂದು ಮಾಡುವುದು ಇನ್ನೊಂದು, ಇದು ನರೇಂದ್ರ ಮೋದಿ ವರಸೆ ಎಂದು ಅದು ಹೇಳಿದೆ.

ಮಹಿಳೆಯರ ರಕ್ಷಣೆ ಬಗ್ಗೆ ಬಹಳ ಗೌರವಯುತವಾಗಿ ಮಾತನಾಡಿದ್ದ ನರೇಂದ್ರ ಮೋದಿಯವರೇ, ಬಿಲ್ಕಿಸ್ ಬಾನು ಅವರ ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸಿ, ಸನ್ಮಾನಿಸಿದ್ದು ನಿಮ್ಮದೇ ಸರ್ಕಾರವಲ್ಲವೇ? ಇದೇನಾ ನಿಮ್ಮ ಸ್ತ್ರೀ ಗೌರವ, ಇದೇನಾ ನಿಮ್ಮ ಸಂಸ್ಕೃತಿ ಎಂದು ಪ್ರಶ್ನಿಸಿದೆ.

English summary
Karnataka Congress Tweeted About PM Narendra Modi Programme Held In Mangaluru. It Said That BSY is now an uncirculated coin in BJP. Even though BSY was on the stage, Modi did not even mention his name as a courtesy, so soon did BS Yadyurappa become like a broken pot. Can Narendra Modi Trying to Do BSY Mukta BJP?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X