ಕಾಫಿಕಿಂಗ್ ಸಿದ್ದಾರ್ಥ್ ಬಯೋಪಿಕ್ ತೆರೆ ಮೇಲೆ ತರಲು ಸಿದ್ಧತೆ!
ಬೆಂಗಳೂರು, ಜೂ.17: ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡು ಮೂರು ವರ್ಷ ಸಮೀಪಿಸುತ್ತಿದೆ. ಈ ಮಧ್ಯೆ ಅವರ ಜೀವನವನ್ನು ತೆರೆಮೇಲೆ ತರುವ ಉದ್ದೇಶದಿಂದ ಬಯೋಪಿಕ್ ಮಾಡುವ ತಯಾರಿ ನಡೆದಿದೆ.
ಬಯೋಪಿಕ್ ಟ್ರೆಂಡ್ ಸಿಕ್ಕಾಪಟ್ಟೆ ನಡೆಯುತ್ತಿದ್ದು, ಇದೀಗ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡ ಸಿಸಿಡಿ ಸಂಸ್ಥಾಪಕ ಸಿದ್ದಾರ್ಥ ಅವರ ಬಯೋಪಿಕ್ ಮಾಡಲು ನಿರ್ಮಾಣ ಸಂಸ್ಥೆಗಳಾದ ಟೀ ಸಿರೀಸ್ ಫಿಲ್ಮ್ಸ್, ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಹಾಗು ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಸಜ್ಜಾಗಿವೆ.
Koo AppBIOPIC OF CAFE COFFEE DAY FOUNDER ANNOUNCED... #TSeries [#BhushanKumar], #AlmightyMotionPicture and #KarmaMediaEntertainment acquire AV rights to the biography of entrepreneur #VGSiddhartha, Founder of #CafeCoffeeDay... Details in the OFFICIAL ANNOUNCEMENT... - Taran Adarsh (@taran_adarsh) 17 June 2022
ಈ ಬಗ್ಗೆ ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್ ಕೂ ಮಾಡಿದ್ದಾರೆ. ಕಾಫಿ ಮೊಗಲ್ ನ ಜೀವನ ಗಾಥೆಯನ್ನು ಈ ನಿರ್ಮಾಣ ಸಂಸ್ಥೆಗಳು ಪ್ರಸ್ತುತ ಪಡಿಸಲಿವೆ.

ಇತ್ತೀಚೆಗಷ್ಟೇ ಟೀ ಸಿರೀಸ್ ಫಿಲ್ಮ್ಸ್, ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗಳು ಉದ್ಯಮಿ ರತನ್ ಟಾಟಾ ಹಾಗು ಅವರ ಕುಟುಂಬದವರ ಬಯೋಪಿಕ್ ಮಾಡುವುದಾಗಿ ಘೋಷಿಸಿತ್ತು.
ಕಾಫಿ ನಾಡು ಚಿಕ್ಕಮಗಳೂರು ಮೂಲದ ಸಿದ್ಧಾರ್ಥ ಕಾಫಿ ಬೆಳೆಗಾರರ ಕುಟುಂಬದಲ್ಲಿಯೇ ಜನಿಸಿದ್ದರು. ಅವರ ಕುಟುಂಬ ಸುಮಾರು 140 ವರ್ಷದಿಂದ ಕಾಫಿ ಬೆಳೆಯುತ್ತಾ ಬಂದಿದೆ. ಸಿದ್ಧಾರ್ಥ ಅವರು 'ಕಾಫಿ ಡೇ' ಸ್ಥಾಪಿಸುವ ಮೂಲಕ ಕಾಫಿ ಉದ್ಯಮಕ್ಕೆ ಹೊಸ ಆಯಾಮ ನೀಡಿದ್ದರು. ಬಳಿಕ ದೇಶದ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ದೇಶದಾದ್ಯಂತ ಸುಮಾರು 200 ನಗರಗಳಲ್ಲಿ 1700ಕ್ಕೂ ಅಧಿಕಾ ಕಾಫಿ ಡೇಗಳನ್ನು ಸ್ಥಾಪಿಸಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆವರ ಅಳಿಯನೂ ಆಗಿದ್ದ ಸಿದ್ಧಾರ್ಥ ಅವರು ಸುಮಾರು 22 ಸಾವಿರ ಕೋಟಿ ಆಸ್ತಿ ಹೊಂದಿದ್ದರು. ದೇಶದ ಶ್ರೀಮಂತರ ಪಟ್ಟಿಯಲ್ಲಿ ಹೆಸರನ್ನೂ ಹೊಂದಿದ್ದರು. ಆದರೆ, 2019ರ ಜುಲೈ 29ರಂದು ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಸಮೀಪ ನಾಪತ್ತೆಯಾಗಿದ್ದರು. ಆಗಸ್ಟ್ 1ರಂದು ನೇತ್ರಾವತಿ ನದಿ ತೀರದಲ್ಲಿಯೇ ಅವರ ಶವ ಪತ್ತೆಯಾಗಿತ್ತು. ಕಾಫಿ ಸಾಮ್ರಾಜ್ಯದ ದೊರೆಯಂತಿದ್ದ ಸಿದ್ಧಾರ್ಥ್ ಅವರ ಆತ್ಮಹತ್ಯೆ ದೇಶದ ಉದ್ಯಮಿಗಳನ್ನು ಮತ್ತು ಜನಸಾನ್ಯರಿಗೆ ಶಾಕ್ ನೀಡಿತ್ತು. ಬಳಿಕ ಅವರ ಪತ್ನಿ ಮಾಳವಿಕಾ ಹೆಗ್ಡೆ ಕಾಫಿ ಡೇ ಸಿಇಓ ಆಗಿ ಉದ್ಯಮ ಮುನ್ನಡೆಸುತ್ತಿದ್ದಾರೆ.












Click it and Unblock the Notifications