ಕರ್ನಾಟಕ ಪೊಲೀಸರ ಬಹುದಿನದ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ

ಬೆಂಗಳೂರು, ಡಿಸೆಂಬರ್ 21; ಕರ್ನಾಟಕ ಪೊಲೀಸರ ಬಹುದಿನದ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಕೆಲವು ಷರತ್ತುಗಳೊಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ನಿರ್ಬಂಧಿತವಾಗಿದ್ದ ಅಂತರ ಜಿಲ್ಲಾ ವರ್ಗಾವಣೆಗೆ ಅನುಮೋದನೆ ನೀಡಲಾಯಿತು.

ಪೊಲೀಸ್ ಇಲಾಖೆಗೆ ಸೇರಿ ಮೂರು ವರ್ಷ ಪೂರ್ಣಗೊಂಡವರು, ನೇಮಕಾತಿ ಹೊಂದಿದ ಹಾಗೂ ಅದೇ ಜಿಲ್ಲೆಯಲ್ಲಿ ಏಳು ವರ್ಷ ಸೇವೆ ಸಲ್ಲಿಕೆ ಮಾಡಿದ ಸಿಬ್ಬಂದಿ ಇತರ ಜಿಲ್ಲೆ ಅಥವ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.

Cabinet Meeting Approved For Karnataka Police Inter District Transfer

ಮೊದಲು ರಾಜ್ಯ ನಾಗರಿಕ ಸೇವಾ ನಿಯಮದ ಅಡಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶವಿತ್ತು. ಪತಿ/ ಪತ್ನಿ ಸರ್ಕಾರಿ ಉದ್ಯೋಗಿಯಾಗಿದ್ದರೆ ಇಬ್ಬರೂ ಒಂದೇ ಜಿಲ್ಲೆಗೆ ವರ್ಗಾವಣೆಗೊಳ್ಳಲು ಅವಕಾಶವಿತ್ತು.

2021ರಲ್ಲಿ ರಾಜ್ಯ ನಾಗರಿಕ ಸೇವಾ ತಿದ್ದುಪಡಿ ನಿಯಮದ ಬಳಿಕ ಅಂತರ ಜಿಲ್ಲಾ ವರ್ಗಾವಣೆ ರದ್ದುಗೊಳಿಸಲಾಗಿತ್ತು. ಆದ್ದರಿಂದ ಪೊಲೀಸರು ಅಂತರ ಜಿಲ್ಲಾ ವರ್ಗಾವಣೆಗೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದ್ದರು.

ಪಿಎಸ್‌ಐ, ಎಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್, ಇಲಾಖೆಯ ಗ್ರೂಪ್ ಸಿ, ಡಿ ವೃಂದದ ಸಿಬ್ಬಂದಿಗೆ ಇದರಿಂದಾಗಿ ಅನುಕೂಲವಾಗಲಿದೆ. ಅಂತರ ಜಿಲ್ಲಾ ವರ್ಗಾವಣೆಗೆ ರದ್ದಾಗಿದ್ದರಿಂದ ಕೌಟುಂಬಿಕ ಜೀವನಕ್ಕೆ ತೊಂದರೆ ಉಂಟಾಗಿತ್ತು.

ಬೆಂಗಳೂರು ಕಮೀಷನರೇಟ್‌ನಲ್ಲಿ ಉದ್ಯೋಗ ಸಲ್ಲಿಸುತ್ತಿರುವ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶವಿತ್ತು. ಆದರೆ ಕಡ್ಡಾಯವಾಗಿ 7 ವರ್ಷ ಸೇವೆ ಪೂರೈಸಿರಬೇಕು ಎಂಬ ನಿಯಮವಿತ್ತು.

ಎರಡು ವರ್ಷದಲ್ಲಿ ನಿವೃತ್ತಿ ಹೊಂದುವವರಿಗೆ, ವಿಧವೆಯರಿಗೆ, ಪತ್ನಿ/ ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮಾತ್ರ ಅಂತರ ಜಿಲ್ಲಾ ವರ್ಗಾವಣೆ ಮಾಡಲು ಅವಕಾಶ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+