• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೊಮ್ಮಾಯಿ ನೂತನ ಸಂಪುಟದಲ್ಲಿ ಬ್ರಾಹ್ಮಣ ಕೋಟಾದ ಲೆಕ್ಕಾಚಾರ ಹೀಗಿದೆ

|
Google Oneindia Kannada News

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟ ರಚನೆಯ ಕಸರತ್ತಿಗೆ ಬಿಜೆಪಿ ಹೈಕಮಾಂಡಿನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಂಗಳವಾರ ಸಂಜೆ ಯಾರ್ಯಾರಿಗೆ ಸಚಿವ ಸ್ಥಾನದ ಅದೃಷ್ಟ ಒಲಿಯಲಿದೆ ಎನ್ನುವುದು ಅಂತಿಮವಾಗಲಿದೆ. ಬಹುತೇಕ ಬುಧವಾರ (ಆ 4) ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಮತೋಲನ ಸೂತ್ರದ ಸಂಪುಟ ರಚನೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಸಮತೋಲನ ಎಂದರೆ ಪ್ರಾದೇಶಿಕವಾಗಿ, ವಿಭಾಗವಾರು ಮತ್ತು ಜಾತ್ಯಾತೀತವಾಗಿ ಸಂಪುಟ ರಚನೆಯಾಗಲಿದೆ. ಈ ಬಾರಿ ಕಿರಿಯರಿಗೆ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಸಿಗುವ ಬಗ್ಗೆ ಹಲವು ಸುಳಿವುಗಳು ಹೊರಬಿದ್ದಿವೆ.

ಬೊಮ್ಮಾಯಿ ಸರಕಾರ ಅಲ್ಪಾಯುಶಿ: ಮೈಲಾರ ದೈವವಾಣಿಯಲ್ಲಿ ಉಲ್ಲೇಖವಾದ ಗಡ್ಡದಾರಿ ಸಿಎಂ ಯಾರು?ಬೊಮ್ಮಾಯಿ ಸರಕಾರ ಅಲ್ಪಾಯುಶಿ: ಮೈಲಾರ ದೈವವಾಣಿಯಲ್ಲಿ ಉಲ್ಲೇಖವಾದ ಗಡ್ಡದಾರಿ ಸಿಎಂ ಯಾರು?

ಎಷ್ಟೇ ಪ್ರಾಮಾಣಿಕ/ಜನಾನುರಾಗಿಯಾಗಿದ್ದರೂ ಜಾತಿ ಲೆಕ್ಕದಲ್ಲೇ ನಮ್ಮ ರಾಜಕೀಯ ನಡೆಯುವುದು. ಇದಕ್ಕೆ ಯಾವ ಪಕ್ಷಗಳು ಹೊರತಾಗಿಲ್ಲ ಎನ್ನುವುದು ನಿರ್ವಿವಾದ. ಅದೇ ಆಧಾರದ ಮೇಲೆ ಬೊಮ್ಮಾಯಿ ಕೂಡಾ ಮುಖ್ಯಮಂತ್ರಿಯಾಗಿದ್ದದ್ದು ಎನ್ನುವುದು ಗೊತ್ತಿರುವ ವಿಚಾರ.

ಬಸವರಾಜ ಬೊಮ್ಮಾಯಿಯವರ ನೂತನ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯದ ಎಷ್ಟು ಶಾಸಕರಿಗೆ ಮಂತ್ರಿಗಿರಿ ಲಭಿಸಬಹುದು ಎನ್ನುವ ಲೆಕ್ಕಾಚಾರ ಆ ಸಮುದಾಯದಲ್ಲಿ ಜೋರಾಗಿ ನಡೆಯುತ್ತಿದೆ. ಹಾಗಾದರೆ, ಮೂರ್ನಾಲ್ಕು ಬಾರಿ ಶಾಸಕರಾಗಿರುವ ಮತ್ತು ಸಚಿವರೂ ಆಗಿರುವ ಎಷ್ಟು ಜನ ಬಿಜೆಪಿಯಲ್ಲಿದ್ದಾರೆ, ಯಾರಿಗೆ ಸಚಿವ ಸ್ಥಾನ ಸಿಗಬಹುದು? ಒಂದು ಲೆಕ್ಕಾಚಾರ ಹೀಗಿದೆ:

 ಸುರೇಶ್ ಕುಮಾರ್ ಅವರು ರಾಜಾಜಿನಗರ ಕ್ಷೇತ್ರವನ್ನು, ಶಿವರಾಂ ಹೆಬ್ಬಾರ್ ಅವರು ಯಲ್ಲಾಪುರ ಕ್ಷೇತ್ರದ ಶಾಸಕರು

ಸುರೇಶ್ ಕುಮಾರ್ ಅವರು ರಾಜಾಜಿನಗರ ಕ್ಷೇತ್ರವನ್ನು, ಶಿವರಾಂ ಹೆಬ್ಬಾರ್ ಅವರು ಯಲ್ಲಾಪುರ ಕ್ಷೇತ್ರದ ಶಾಸಕರು

ಯಡಿಯೂರಪ್ಪನವರ ಸರಕಾರದಲ್ಲಿ ಇಬ್ಬರು ಸಚಿವರಾಗಿದ್ದರು. ಸುರೇಶ್ ಕುಮಾರ್ ಅವರು ಬೆಂಗಳೂರಿನ ರಾಜಾಜಿನಗರ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಶಿವರಾಮ ಹೆಬ್ಬಾರ್ ಅವರು ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇನ್ನು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸ್ಪೀಕರ್ ಆಗಿದ್ದವರು ಮತ್ತು ಇವರು ಉತ್ತರ ಕನ್ನಡದ ಶಿರಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇಬ್ಬರು ಮತ್ತು ಕಾಗೇರಿಯವರು ಬೊಮ್ಮಾಯಿ ಸಂಪುಟದಲ್ಲೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

 ಉಡುಪಿ ಕ್ಷೇತ್ರದಿಂದ ಆಯ್ಕೆ ರಘುಪತಿ ಭಟ್, ಬಸವನಗುಡಿಯ ರವಿ ಸುಬ್ರಮಣ್ಯ

ಉಡುಪಿ ಕ್ಷೇತ್ರದಿಂದ ಆಯ್ಕೆ ರಘುಪತಿ ಭಟ್, ಬಸವನಗುಡಿಯ ರವಿ ಸುಬ್ರಮಣ್ಯ

ಈ ಮೂವರ ಜೊತೆಗೆ ಮೈಸೂರು, ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ಕೂಡಾ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು, ಎರಡು ಬಾರಿ ಉಡುಪಿ ಕ್ಷೇತ್ರದಿಂದ ಆಯ್ಕೆಯಾಗಿರುವ ರಘುಪತಿ ಭಟ್ ಅವರ ಹೆಸರೂ ಕೇಳಿ ಬರುತ್ತಿತ್ತು. ಆದರೆ, ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಇಲ್ಲ ಎನ್ನುವುದು ಖಚಿತವಾಗಿದೆ. ಇದರ ಜೊತೆಗೆ, ಬೆಂಗಳೂರು ಬಸವನಗುಡಿಯ ಮೂರು ಬಾರಿ ಶಾಸಕರಾಗಿರುವ ರವಿ ಸುಬ್ರಮಣ್ಯ ಅವರ ಹೆಸರೂ ಕೇಳಿ ಬರುತ್ತಿತ್ತು. ಆದರೆ, ಇವರೂ ಪಟ್ಟಿಯಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ.

 ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಸ್.ಎ.ರಾಮದಾಸ್ - ಸಚಿವ ಸ್ಥಾನ ಖಚಿತ?

ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಸ್.ಎ.ರಾಮದಾಸ್ - ಸಚಿವ ಸ್ಥಾನ ಖಚಿತ?

ಹಾಗಾಗಿ, ಒಟ್ಟು ನಾಲ್ವರು ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಇದರಲ್ಲಿ ಕಳೆದ ಬಿಎಸ್ವೈ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಮತ್ತು ಕಾರ್ಮಿಕ ಖಾತೆಯ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಇನ್ನು, ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಸ್.ಎ.ರಾಮದಾಸ್, ಇವರಿಬ್ಬರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ.

 ಬೊಮ್ಮಾಯಿ ನೂತನ ಸಂಪುಟದಲ್ಲಿ ಬ್ರಾಹ್ಮಣ ಕೋಟಾದ ಲೆಕ್ಕಾಚಾರ ಹೀಗಿದೆ

ಬೊಮ್ಮಾಯಿ ನೂತನ ಸಂಪುಟದಲ್ಲಿ ಬ್ರಾಹ್ಮಣ ಕೋಟಾದ ಲೆಕ್ಕಾಚಾರ ಹೀಗಿದೆ

ಒಂದು ವೇಳೆ ಕಾಗೇರಿಯವರಿಗೆ ಸಚಿವ ಸ್ಥಾನ ಸಿಕ್ಕಿದರೆ, ಸ್ಪೀಕರ್ ಆಗಿ ಸುರೇಶ್ ಕುಮಾರ್ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ವಲಸಿಗ ಕೋಟಾದಲ್ಲಿಂದ ಬಂದ ಶಿವರಾಮ ಹೆಬ್ಬಾರ್ ಅವರಿಗೆ ಸಚಿವ ಸ್ಥಾನ ತಪ್ಪುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಅಥವಾ ಸಂಘ ಪರಿವಾರದ ಒತ್ತಡ ಹೆಚ್ಚಾದಲ್ಲಿ ಸುರೇಶ್ ಕುಮಾರ್ ಅವರು ಮಂತ್ರಿಯಾಗಬಹುದು, ಆಗ, ರಾಮದಾಸ್ ಅವರಿಗೆ ಹಿನ್ನಡೆಯಾಗಲಿದೆ.

   ದೆಹಲಿಯಲ್ಲೇ ಬೀಡುಬಿಟ್ಟಿರುವ ಬಸವರಾಜ್ ಬೊಮ್ಮಾಯಿ! | Oneindia Kannada

   English summary
   Karnataka Cabinet Expansion: Minister Post for Brahmin Community Leaders in CM Basavaraj Bommai Cabinet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X