ಸಂಪುಟ ವಿಸ್ತರಣೆ ಮುಹೂರ್ತ ಫಿಕ್ಸ್, ಆರಲ್ಲ, ಹತ್ತು ಶಾಸಕರಿಗೆ ಮಂತ್ರಿ ಸ್ಥಾನ!
Recommended Video

ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿದ್ದ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಅಂತಿಮ ಮುಹೂರ್ತ ಫಿಕ್ಸ್ ಆಗಿದ್ದು ಅಕ್ಟೋಬರ್ 10 ಕ್ಕೆ ಸಂಪುಟ ವಿಸ್ತರಣೆ ಆಗಲಿದೆ.
ಆರು ಮಂತ್ರಿ ಸ್ಥಾನ ಖಾಲಿ ಇದ್ದು 15 ಕ್ಕೂ ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿರುವ ಕಾರಣ ಬಹುತೇಕರನ್ನು ಸಮಾಧಾನ ಪಡಿಸಲೆಂದು ಹೊಸ ಸೂತ್ರ ಪ್ರಯೋಗಿಸಲು ಸಜ್ಜಾಗಿದೆ. ಆರು ಶಾಸಕರಿಗೆ ಮಂತ್ರಿ ಸ್ಥಾನದ ಬದಲಿಗೆ 10 ಶಾಸಕರಿಗೆ ಮಂತ್ರಿ ಸ್ಥಾನ ಕೊಡುವ ಬಗ್ಗೆ ಯೋಜನೆ ರೂಪಿತವಾಗುತ್ತಿದೆ.

ಹೌದು, ನಾಲ್ಕು ಜನ ಮಂತ್ರಿಗಳ ಕೈಲಿ ರಾಜೀನಾಮೆ ಕೊಡಿಸಿ ಒಟ್ಟಿಗೆ 10 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ರಾಜ್ಯ ಕಾಂಗ್ರೆಸ್‌ನಲ್ಲಿ ಮಾತುಕತೆ ನಡೆಯುತ್ತಿದೆ. ಇದರ ಮುಂದಾಳತ್ವವನ್ನು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ವಹಿಸಿದ್ದಾರೆ ಎಂದಿವೆ ಮೂಲಗಳು.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಪ್ರಚಾರವು ಪ್ರಾರಂಭವಾಗುವ ಮೊದಲೇ ಕಾಂಗ್ರೆಸ್ ತನ್ನ ಒಳಬೇಗುದಿಯನ್ನು ಶಮನ ಮಾಡಬೇಕಾದ ಇಕ್ಕಟ್ಟಿನಲ್ಲಿದೆ ಹಾಗಾಗಿ. ಹೆಚ್ಚು ಜನರಿಗೆ ಮಂತ್ರಿ ಸ್ಥಾನ ಕಲ್ಪಿಸಿಕೊಟ್ಟು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ತಂತ್ರಕ್ಕೆ ಮರೆಹೋಗುವ ಪ್ಲಾನ್ ರಚಿಸಲಾಗಿದೆ.
ಸಂಪುಟ ಪುನರ್‌ರಚನೆ ಪ್ರಹಸನವು ಆಷಾಡ ಪ್ರಾರಂಭವಾಗುವ ಮೊದಲಿನಿಂದಲೂ ನಡೆಯುತ್ತಲೇ ಬರುತ್ತಿದ್ದು, ಆಕಾಂಕ್ಷಿಗಳು ಹೆಚ್ಚಾಗಿ ಬಂಡಾಯದ ಬಾವುಟಗಳು ಹೆಚ್ಚಾಗಿದ್ದ ಕಾರಣ ಪದೇ ಪದೇ ಸಂಪುಟ ವಿಸ್ತರಣೆ ಸಮಯವನ್ನು ಮುಂದು ಹಾಕುತ್ತಲೇ ಬರಲಾಗಿತ್ತು.
ಆದರೆ ಈಗ, ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮುನ್ನಾ ಎಲ್ಲ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕೆಂದು ಹೈಕಮಾಂಡ್ ಆಜ್ಞೆ ಆಗಿರುವ ಕಾರಣ ಅಕ್ಟೋಬರ್ 10 ರಂದು ಅಥವಾ 8 ರಂದು ಸಂಪುಟ ವಿಸ್ತರಣೆ ಆಗಲಿದೆ.












Click it and Unblock the Notifications