ಸಿಎಂ,ಡಿಸಿಎಂ, ಸ್ಪೀಕರ್ ಆಯ್ತು.. ಈಗ ಸಂಪುಟ ಫೈಟ್! ರಾತ್ರಿವರೆಗೂ ನಡೆಯಲಿದೆ ಸರಣಿ ಸಭೆ! ಇಲ್ಲಿದೆ ಸಂಭಾವ್ಯ ಪಟ್ಟಿ
ಬೆಂಗಳೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸಂಪುಟ ವಿಸ್ತರಣೆ ಕುರಿತು ತೀವ್ರ ಜಟಾಪಟಿ ನಡೆದಿದ್ದು, ಹೈಕಮಾಂಡ್ ನಾಯಕರ ಮುಂದೆ ಇದೀಗ ಸಂಪುಟ ವಿಸ್ತರಣೆ ಚರ್ಚೆ ನಡೆಯಲಿದೆ.
135 ಸ್ಥಾನಗಳನ್ನ ಗೆದ್ದಿರುವ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ಹೆಚ್ಚಾಗಿದ್ದು, ಸುಮಾರು 50ಕ್ಕೂ ಹೆಚ್ಚು ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ದೆಹಲಿ ಮುಟ್ಟಿದ್ದು, ಭರ್ಜರಿ ಲಾಬಿ ಆರಂಭಿಸಿದ್ದಾರೆ. ಒಂದು ಕಡೆ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನವನ್ನ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ರೆ, ಇತ್ತ ಹೈಕಮಾಂಡ್ ನಾಯಕರನ್ನ ನೇರವಾಗಿ ಭೇಟಿ ಮಾಡಿ ಹಲವು ಜನ ನಾಯಕರು ಒತ್ತಡ ಹಾಕಿರುವುದು ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ.

ಸಚಿವ ಸಂಪುಟದಲ್ಲಿ ಜಾತಿ ಲೆಕ್ಕಾಚಾರದ ಪ್ರಕಾರ ಲಿಂಗಾಯತರಿಗೆ ಆರು, ಒಕ್ಕಲಿಗರಿಗೆ ಐದು, ಪರಿಶಿಷ್ಟರಿಗೆ 5, ಪರಿಶಿಷ್ಟ ಪಂಗಡಕ್ಕೆ 2, ಹಿಂದುಳಿದವರಿಗೆ 4, ಮುಸ್ಲಿಂ - 3, ಕುರುಬ -3, ಕ್ರೈಸ್ತರು, ಜೈನ, ಬ್ರಾಹ್ಮಣದಂತಹ ಸಮುದಾಯಗಳಿಗೆ ತಲಾ ಒಂದು ಸ್ಥಾನ ನೀಡುವ ಸಾಧ್ಯತೆಯಿದ್ದು, ಮೂರು ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳುವ ನಿರ್ಧಾರವನ್ನ ದೆಹಲಿಯ ವರಿಷ್ಠರು ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಸಂಪುಟದಲ್ಲಿ 10 ಮಂದಿ ಇದ್ದು, ಬಾಕಿ ಉಳಿದ ಸ್ಥಾನಗಳನ್ನ ತುಂಬಿಕೊಳ್ಳುವ ಸಲುವಾಗಿ ತಯಾರಿ ನಡೆಸಿದೆ. ಸಿದ್ದರಾಮಯ್ಯ ಅವರ ಬಣಕ್ಕೆ 10 ಶಾಸಕರಿಗೆ ಹಾಗೂ ಡಿ ಕೆ ಶಿವಕುಮಾರ್ ಅವರ ಬಣದ ಶಾಸಕರಿಗೆ 10 ಸಚಿವ ಸ್ಥಾನವನ್ನ ನೀಡಲು ಹೈಕಮಾಂಡ್ ಮೊದಲಿಗೆ ನಿರ್ಧಾರಿಸಿತ್ತು, ಇದೀಗ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾದ ಬೆನ್ನಲ್ಲೇ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನವನ್ನ ನೀಡಬೇಕು ಎನ್ನುವ ಗೊಂದಲದಲ್ಲಿದೆ.
ಈಗಾಗಲೇ ಸಾಲು ಸಾಲು ಸಚಿವ ಸ್ಥಾನದ ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಿದದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು ಗುರುವಾರ ರಾತ್ರಿ ಅಮೆರಿಕಾಕ್ಕೆ ತೆರಳಲಿದ್ದಾರೆ. ಹೀಗಾಗಿ ಗುರುವಾರ ರಾತ್ರಿಯವರೆಗೂ ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ಸರಣಿ ಸಭೆ ನಡೆಸಲಿದ್ದಾರೆ.

ಸಂಭವನೀಯರ ಪಟ್ಟಿ
ಸಂತೋಷ್ ಲಾಡ್
ಬಿ.ಕೆ. ಹರಿಪ್ರಸಾದ್
ಎಂ. ಕೃಷ್ಣಪ್ಪ
ಆರ್.ವಿ.ದೇಶಪಾಂಡೆ
ಬೈರತಿ ಸುರೇಶ್
ಶರಣ ಪ್ರಕಾಶ್ ಪಾಟೀಲ್
ಲಕ್ಷ್ಮಣ ಸವದಿ
ಬಸವರಾಜ ರಾಯರೆಡ್ಡಿ
ಲಕ್ಷ್ಮೀ ಹೆಬ್ಬಾಳಕರ್
ರಾಘವೇಂದ್ರ ಹಿಟ್ನಾಳ್
ಈಶ್ವರ್ ಖಂಡ್ರೆ
ಚೆಲುವರಾಯಸ್ವಾಮಿ
ಎಸ್. ಎಸ್. ಮಲ್ಲಿಕಾರ್ಜುನ್
ರಾಜೇಗೌಡ
ನಾಗೇಂದ್ರ
ಸಿ. ಪುಟ್ಟರಂಗಶೆಟ್ಟಿ
ಶಿವರಾಜ ತಂಗಡಗಿ
ಕೃಷ್ಣ ಬೈರೇಗೌಡ
ದಿನೇಶ್ ಗುಂಡೂರಾವ್
ಮಧು ಬಂಗಾರಪ್ಪ
ಶಿವಾನಂದ ಪಾಟೀಲ್
ಕೆ.ಎನ್. ರಾಜಣ್ಣ
ವಿನಯ ಕುಲಕರ್ಣಿ
ಎಚ್.ಸಿ. ಮಹದೇವಪ್ಪ
ಸಲೀಂ ಅಹಮದ್

ಸಿಎಂ ಸಿದ್ದರಾಮಯ್ಯ ಬಣದಲ್ಲಿ ಇರುವ ಸಚಿವಾಕಾಂಕ್ಷಿಗಳು?
ಆರ್ ವಿ ದೇಶಪಾಂಡೆ
ದಿನೇಶ್ ಗುಂಡೂರಾವ್
ಬಸವರಾಜ ರಾಯರೆಡ್ಡಿ
ಎಂ ಕೃಷ್ಣಪ್ಪ
ಕೆ.ಎನ್ ರಾಜಣ್ಣ
ಶಿವರಾಜ್ ತಂಗಡಗಿ
ಸಂತೋಷ ಲಾಡ
ಅಜಯ್ ಸಿಂಗ್
ಎಚ್.ಕೆ ಪಾಟೀಲ್
ಟಿ ಬಿ ಜಯಚಂದ್ರ
ಕೃಷ್ಣ ಬೈರೇಗೌಡ
ರಾಘವೇಂದ್ರ ಹಿಟ್ನಾಳ್
ಬೈರತಿ ಸುರೇಶ್
ಹೆಚ್ ವೈ ಮೇಟಿ
ಇ.ತುಕಾರಾಂ
ಜಿಎಸ್ ಪಾಟೀಲ್
ಹೊಸದುರ್ಗ ಗೋವಿಂದಪ್ಪ
ಡಾ ಎಚ್ ಸಿ ಮಹದೇವಪ್ಪ
ಬಂಗಾರಪೇಟೆ ನಾರಾಯಣಸ್ವಾಮಿ
ಬಸನಗೌಡ ದದ್ದಲ್
ಚಲುವರಾಯಸ್ವಾಮಿ
ನರೇಂದ್ರ ಸ್ವಾಮಿ
ಡಿಸಿಎಂ ಡಿ.ಕೆ ಶಿವಕುಮಾರ್ ಬಣ
ಲಕ್ಷ್ಮೀ ಹೆಬ್ಬಾಳ್ಕರ್
ಎನ್.ಎ ಹ್ಯಾರಿಸ್
ತನ್ವೀರ್ ಸೇಠ್
ಮಧುಬಂಗಾರಪ್ಪ
ಕುಣಿಗಲ್ ರಂಗನಾಥ್
ಮಾಗಡಿ ಬಾಲಕೃಷ್ಣ
ಪಿರಿಯಾ ಪಟ್ಟಣ ವೆಂಕಟೇಶ್
ಡಿ ಸುಧಾಕರ್
ಮಲ್ಲಿಕಾರ್ಜುನ ಖರ್ಗೆ ಬಣ
ರಹೀಂ ಖಾನ್
ಶರಣ್ ಪ್ರಕಾಶ್ ಪಾಟೀಲ್
ಅಬ್ಬಯ್ಯ ಪ್ರಸಾದ್












Click it and Unblock the Notifications