Get Updates
Get notified of breaking news, exclusive insights, and must-see stories!

ಸಂಪುಟ ಸಂಕಟ: ಅಮಿತ್ ಶಾ ಪಟ್ಟಿಯಿಂದ ಶೆಟ್ಟರ್ ಸೇರಿ 6 ಮಂದಿ ಔಟ್

Recommended Video

      B S Yeddyurappa Cabinet Expansion : ಅಮಿತ್ ಶಾ ಪಟ್ಟಿಯಿಂದ 6 ಶಾಸಕರು ಹೊರಗೆ

      ಬೆಂಗಳೂರು, ಆಗಸ್ಟ್ 18: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ಹೈಕಮಾಂಡ್ ಜೊತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತುಕತೆ ಮುಗಿಸಿದ್ದು, ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಈ ಮೊದಲೇ ತಿಳಿಸಿದಂತೆ ಈ ಬಾರಿ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹಿರಿಯ ಶಾಸಕರಿಗೆ ಅಚ್ಚರಿ ಕಾದಿದೆ.

      ಮೊದಲ ಹಂತದಲ್ಲಿ 10 ರಿಂದ 12 ಮಂದಿ ಹಿರಿಯರಿಗೆ ಸ್ಥಾನ ಕಲ್ಪಿಸಲು ಬಿಜೆಪಿ ಮುಂದಾಗಿದ್ದು, ಈಗ ಹಿರಿಯದ ಜೊತೆಗೆ ಹೊಸಮುಖಗಳಿಗೆ ಆದ್ಯತೆ ನೀಡುವಂತೆ ಹೈಕಮಾಂಡ್ ಸೂಚಿಸಿರುವ ಸುದ್ದಿ ಬಂದಿದೆ. ರಾಜ್ಯ ಮತ್ತು ಕೇಂದ್ರ ನಾಯಕರಲ್ಲಿ ಒಮ್ಮತ ಮೂಡದ ಕಾರಣ ಪಟ್ಟಿ ಅಂತಿಮಗೊಂಡಿಲ್ಲ ಹೀಗಾಗಿ, ಹೈಕಮಾಂಡ್ ನಾಯಕರಿಂದ ಯಡಿಯೂರಪ್ಪ ಅವರಿಗೆ ಸಿಕ್ಕಿರುವ ಸೂಚನೆಯಂತೆ ಸಂಭಾವ್ಯ ಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಆಗಸ್ಟ್ 20ರಂದು ಕೊನೆಗಳಿಗೆಯಲ್ಲಿ ಯಾರಿಗೆ ಹೈಕಮಾಂಡ್ ನಿಂದ ಫೋನ್ ಕರೆ ಬರುವುದೋ, ಯಾರಿಗೆ ಅದೃಷ್ಟ ಒಲಿಯುವುದೋ ಕಾದು ನೋಡಬೇಕಿದೆ.

      ಲಭ್ಯ ಮಾಹಿತಿಯಂತೆ, ಸಂಪುಟಕ್ಕೆ ಯಾವ ಶಾಸಕರನ್ನು ಸೇರಿಸಿಕೊಳ್ಳಬೇಕು ಎಂದು ಮೂರು ಪಟ್ಟಿ ಸಿದ್ಧಪಡಿಸಲಾಗಿತ್ತು. ಯಡಿಯೂರಪ್ಪ ತಯಾರಿಸಿದ ಪಟ್ಟಿಯನ್ನು ಹೈಕಮಾಂಡ್ ನಾಯಕರು ಬಹುತೇಕ ಓಕೆ ಮಾಡಿದ್ದಾರೆ. ಬಿ. ಎಲ್. ಸಂತೋಷ್ ಅವರ ಪಟ್ಟಿ ಜೊತೆ ತಾಳೆ ನೋಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಂತಿಮ ಪಟ್ಟಿಯನ್ನು ಬಿ.ಎಸ್ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಈ ಅಂತಿಮ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ರೇಣುಕಾಚಾರ್ಯ ಮುಂತಾದ ಹಿರಿಯ ನಾಯಕರ ಹೆಸರುಗಳಿಲ್ಲ ಎಂಬ ಸುದ್ದಿ ಬಂದಿದೆ.

      ಶೆಟ್ಟರ್, ಬೊಮ್ಮಾಯಿ, ರೇಣುಕಾಚಾರ್ಯಗೆ ಸ್ಥಾನವಿಲ್ಲ.

      ಶೆಟ್ಟರ್, ಬೊಮ್ಮಾಯಿ, ರೇಣುಕಾಚಾರ್ಯಗೆ ಸ್ಥಾನವಿಲ್ಲ.

      ಬಿ.ಎಸ್ ಯಡಿಯೂರಪ್ಪ ಅವರ ಪಟ್ಟಿಯಲ್ಲಿದ್ದ ಅವರ ಆಪ್ತ ಶಾಸಕರ ಪೈಕಿ ಜಗದೀಶ್ ಶೆಟ್ಟರ್, ಬಸರವರಾಜ ಬೊಮ್ಮಾಯಿ, ರೇಣುಕಾಚಾರ್ಯ ಸೇರಿದಂತೆ 6 ಮಂದಿ ಹೆಸರನ್ನು ಅಮಿತ್ ಶಾ ತೆಗೆದು ಹಾಕಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಸೇರಿಸಲಾಗಿದೆ. ಮಲೆನಾಡು, ಕರಾವಳಿ ಭಾಗಕ್ಕೆ ಆದ್ಯತೆ, ಹಿಂದುಳಿದ ವರ್ಗಕ್ಕೆ ಸಚಿವ ಸ್ಥಾನ ನೀಡುವಂತೆ ಅಮಿತ್ ಸೂಚಿಸಿದ್ದಾರೆ.ಸಿ.ಟಿ ರವಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲು ಒಬ್ಬರು ಸೂಚಿಸಿದರೆ, ಮತ್ತೊಬ್ಬರು ಅರವಿಂದ ಲಿಂಬಾವಳಿ ಹೆಸರು ಸೂಚಿಸಿದ್ದಾರೆ.

      ಹೆಸರು ಖಾತ್ರಿಯಾದರೂ ಕುತೂಹಲ

      ಹೆಸರು ಖಾತ್ರಿಯಾದರೂ ಕುತೂಹಲ

      ಹಿರಿಯ ಶಾಸಕರಿಗೆ ಸಚಿವ ಸ್ಥಾನಕ್ಕಿಂತ ಪಕ್ಷದ ಸಂಘಟನೆಯ ಹೊಣೆ ನೀಡುವ ಸಾಧ್ಯತೆಯಿದೆ. ಸಿ.ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಬಹುತೇಕ ಖಚಿತವಾಗಿದೆ. ಮಿಕ್ಕ ನಾಯಕರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಅನೇಕ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹಿರಿಯ ನಾಯಕರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ ಆರ್. ಅಶೋಕ್ ಹೆಸರಿದೆ. ಈ ಪೈಕಿ ಅಶೋಕ್ ಅವರಿಗೆ ಸಚಿವ ಸ್ಥಾನ ಖಾತ್ರಿಯಾಗಿದೆ. ಆದರೆ, ಆಗಸ್ಟ್ 20ರಂದು ವೇದಿಕೆ ಏರಿ ಪ್ರಮಾಣ ವಚನ ಸ್ವೀಕರಿಸುವ ತನಕ ಯಾರಿಗೂ ತಾನು ಸಚಿವನಾಗುತ್ತೇನೆ ಎಂಬ ಭರವಸೆ ಇಲ್ಲ, ಯಡಿಯೂರಪ್ಪ ಅವರು ಕೂಡಾ ಯಾರಿಗೂ ಭರವಸೆ ನೀಡಿಲ್ಲ, ದೆಹಲಿಯಿಂದ ಬಂದ ಬಳಿಕ, ಈ ಬಗ್ಗೆ ಹೆಚ್ಚು ಮಾತನಾಡಿಲ್ಲ.

      ಸಂಭಾವ್ಯ ಪಟ್ಟಿಯಲ್ಲಿ ಯಾರು ಯಾರಿದ್ದಾರೆ?

      ಸಂಭಾವ್ಯ ಪಟ್ಟಿಯಲ್ಲಿ ಯಾರು ಯಾರಿದ್ದಾರೆ?

      ಗೋವಿಂದ ಕಾರಜೋಳ, ಸುರೇಶ್ ಕುಮಾರ್, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ಅವರಲ್ಲದೆ, ಪ್ರೀತಂ ಗೌಡ, ಕುಡಚಿ ಶಾಸಕ ಪಿ ರಾಜೀವ್, ಅಭಯ್ ಪಾಟೀಲ್, ಎಸ್.ಅಂಗಾರ, ವೀರಣ್ಣ ಚಿರಂತಿಮಠ, ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಉದಾಸಿ, ಕುಮಾರ ಬಂಗಾರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹೆಸರುಗಳು ಸೇರಿವೆ. ಇವರಲ್ಲದೆ, ಬಿ. ಶ್ರೀರಾಮುಲು, ಕರುಣಾಕರ ರೆಡ್ಡಿ, ಎಂಎಲ್ಸಿ ರವಿಕುಮಾರ್ ಹೆಸರು ಕೇಳಿ ಬಂದಿವೆ. ಮುಖ್ಯವಾಗಿ ಬಿ.ಎಲ್ ಸಂತೋಷ್ ಪಟ್ಟಿಗೂ, ಯಡಿಯೂರಪ್ಪ ಪಟ್ಟಿಗೂ 6 ಹೆಸರು ವ್ಯತ್ಯಾಸವಿದೆ. ಸಂತೋಷ್ ಪಟ್ಟಿಯಲ್ಲಿ ರೇಣುಕಾಚಾರ್ಯ, ಶೆಟ್ಟರ್, ಬೊಮ್ಮಾಯಿ ಹೆಸರು ಇಲ್ಲ.

      ಎರಡು ಹಂತದಲ್ಲಿ ಸಂಪುಟ ವಿಸ್ತರಣೆ

      ಎರಡು ಹಂತದಲ್ಲಿ ಸಂಪುಟ ವಿಸ್ತರಣೆ

      ಎರಡು ಹಂತದಲ್ಲಿ ಸಂಪುಟ ವಿಸ್ತರಣೆಯಾಗಲಿದ್ದು, ಇಂದಲ್ಲ, ನಾಳೆ ಸಂಪುಟ ಸೇರಲಿರುವ ಶಾಸಕರ ಪಟ್ಟಿ ಹೀಗಿದೆ.

      ಕೆಎಸ್ ಈಶ್ವರಪ್ಪ(ಕುರಬ)
      ಜೆಸಿ ಮಾಧುಸ್ವಾಮಿ (ಲಿಂಗಾಯತ)
      ಶ್ರೀರಾಮುಲು(ಪರಿಶಿಷ್ಟ ಪಂಗಡ)
      ಬಾಲಚಂದ್ರ ಜಾರಕಿಹೊಳಿ(ಪರಿಶಿಷ್ಟ ಪಂಗಡ)
      ಆರ್ ಅಶೋಕ(ಒಕ್ಕಲಿಗ)
      ಉಮೇಶ್ ಕತ್ತಿ(ಲಿಂಗಾಯತ)
      ಜಿ ಕರುಣಾಕರ ರೆಡ್ಡಿ(ರೆಡ್ಡಿ)
      ಎಸ್ ಅಂಗಾರ(ದಲಿತ)
      ಶಿವನಗೌಡ ನಾಯಕ(ಪರಿಶಿಷ್ಟ ಪಂಗಡ0
      ಗೋವಿಂದ ಕಾರಜೋಳ(ದಲಿತ)
      ಡಾ. ಅಶ್ವಥ ನಾರಾಯಣ(ಒಕ್ಕಲಿಗ)
      ಸುನೀಲ್ ಕುಮಾರ್ (ಈಡಿಗ)
      ಕೋಟಾ ಶ್ರೀನಿವಾಸ ಪೂಜಾರಿ(ಎಂಲ್ಸಿ)
      ರವಿ ಕುಮಾರ್ (ಎಂಲ್ಸಿ)

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+