ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ -ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಹುಮತ
ಬೆಂಗಳೂರು, ಆಗಸ್ಟ್ 20: ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ರಣತಂತ್ರ ಹೆಣೆಯುತ್ತಿರುವ ಸಂದರ್ಭದಲ್ಲಿ ಸಿ ಫೋರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಭಾರಿ ಸಂಚಲನ ಮೂಡಿಸುತ್ತಿದೆ.
2017ರ ಜುಲೈ 19ರಿಂದ ಆಗಸ್ಟ್ 10ರವರೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸಲಿದೆ.ಕಾಂಗ್ರೆಸ್ ಪಕ್ಷವು ಭರ್ಜರಿ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಪೀಠಕ್ಕೇರಲಿದೆ ಎಂದು ಸಿ ಫೋರ್ ಸಂಸ್ಥೆ ಪ್ರಕಟಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆಯ ವರದಿಯನ್ನು ತಯಾರಿಸಲಾಗಿದೆ.
ಈ ಪೈಕಿ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳ ವಿವಿಧ ಧರ್ಮ, ಜಾತಿಯ ಜನರನ್ನು ಮಾತನಾಡಿಸಿ ಸಮೀಕ್ಷೆ ವರದಿ ಪ್ರಕಟಿಸಲಾಗಿದೆ.

ಸಮೀಕ್ಷೆ ಶೇ 99ರಷ್ಟು ನಿಖರ
ವಿವಿಧ ವಿಭಾಗಗಳಲ್ಲಿ ಜನರ ಬೇಡಿಕೆಗಳೇನು? ಸರ್ಕಾರದ ಸಾಧನೆಗಳೇನು? ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿದೆ.2008 ಹಾಗೂ 2013ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿ ಫೋರ್ ನಡೆಸಿದ ಸಮೀಕ್ಷೆ ಶೇ 99ರಷ್ಟು ನಿಖರವಾಗಿದೆ
ಎಂದು ಸಿ ಫೋರ್ ಸಂಸ್ಥೆ ಹೇಳಿಕೊಂಡಿದೆ.

ಶೇಕಡಾವಾರು ಮತಗಳ ನಿರೀಕ್ಷೆ
ಸಿ ಫೋರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೆ ಶೇಕಡಾವಾರು ಮತಗಳು ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಸಿಗಬಹುದು ಎಂಬ ಲೆಕ್ಕ ಇಲ್ಲಿದೆ:
ಕಾಂಗ್ರೆಸ್ : ಶೇ 43
ಬಿಜೆಪಿ : ಶೇ 32
ಜೆಡಿಎಸ್ : ಶೇ 17
ಇತರ ಪಕ್ಷಗಳಿಗೆ ಶೇ 8 ಸಿಗುವ ನಿರೀಕ್ಷೆಗಳಿವೆ.
***
ಕಾಂಗ್ರೆಸ್ : ಪುರುಷ : 42, ಮಹಿಳೆ 46
ಬಿಜೆಪಿ : ಪುರುಷ : 33, ಮಹಿಳೆ 29
ಜೆಡಿಎಸ್ : ಪುರುಷ : 18, ಮಹಿಳೆ 15
ಇತರೆ: ಪುರುಷ : 7, ಮಹಿಳೆ 10

ಯಾವ ಪಕ್ಷಕ್ಕೆ ಎಷ್ಟು ಮತ?
ಸಿ ಫೋರ್ ಸಮೀಕ್ಷೆಯಂತೆ ಅತಿ ಹೆಚ್ಚು ಶೇಕಡಾವಾರು ಮತಗಳನ್ನು ಪಡೆಯುವ ನಿರೀಕ್ಷೆ ಹೊಂದಿರುವ ಕಾಂಗ್ರೆಸ್ ಪಕ್ಷವು 114ರ ಮ್ಯಾಜಿಕ್ ನಂಬರ್ ದಾಟುವ ನಿರೀಕ್ಷೆಯಿದೆ.
* ಕಾಂಗ್ರೆಸ್ 120 ರಿಂದ 132ರವರೆಗೆ ಸ್ಥಾನ
* ಬಿಜೆಪಿಗೆ 60 ರಿಂದ 72 ಸ್ಥಾನಗಳು ಸಿಗಲಿವೆ.
* ಜೆಡಿಎಸ್ 24ರಿಂದ 30 ಸ್ಥಾನಗಳನ್ನು ಪಡೆಯಲಿದೆ.
* ಇತರೆ ಪಕ್ಷಗಳಿಗೆ 1ರಿಂದ 6 ಸ್ಥಾನಗಳು ಬರಲಿವೆ.

ಯಾವ ವಯೋಮಿತಿಯವರಿಂದ ಯಾರಿಗೆ ಮತ?
ಕಾಂಗ್ರೆಸ್ :
18-25 ವರ್ಷ : 42,
26-65: 43,
36-50: 44
50 ವರ್ಷಕ್ಕಿಂತ ಮೇಲ್ಪಟ್ಟು:47
ಬಿಜೆಪಿ :
18-25 ವರ್ಷ : 36
26-65: 32
36-50: 28
50 ವರ್ಷಕ್ಕಿಂತ ಮೇಲ್ಪಟ್ಟು: 47
ಜೆಡಿಎಸ್ :
18-25 ವರ್ಷ : 19
26-65: 16
36-50: 17
50 ವರ್ಷಕ್ಕಿಂತ ಮೇಲ್ಪಟ್ಟು: 47
ಇತರೆ:
18-25 ವರ್ಷ : 3
26-65: 9
36-50: 11
50 ವರ್ಷಕ್ಕಿಂತ ಮೇಲ್ಪಟ್ಟು: 7












Click it and Unblock the Notifications