Byatarayanapura Assembly Constituencey: ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ-ಜೆಡಿಸ್ ಪ್ಲಾನ್, ಹೀಗೊಂದು ವಿಶ್ಲೇಷಣೆ
ಕಾಂಗ್ರೆಸ್ ಭದ್ರಕೋಟೆಯಾದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕೈ ನಾಯಕರ ಕೃಷ್ಣ ಬೈರೇಗೌಡರೇ ನಿರಂತರ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ, ಜೆಡಿಎಸ್ ಸಿದ್ಧತೆ ಆರಂಭಿಸಿವೆ.
ಬೆಂಗಳೂರು, ಫೆಬ್ರವರಿ 21: ಬೆಂಗಳೂರು ಜಿಲ್ಲೆಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವು ಒಟ್ಟು ಏಳು ಬಿಬಿಎಂಪಿ ವಾರ್ಡ್‌ಗಳನ್ನು ಹಾಗೂ ಐದು ಗ್ರಾಮಪಂಚಾಯತಿಯನ್ನು ಒಳಗೊಂಡಿದೆ. ಕಾರ್ನಾಟಕದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಅಧಿಕಾರ ವಿಚಾರದಲ್ಲಿ ಕಾಂಗ್ರೆಸ್ ಇಲ್ಲಿ ಹ್ಯಾಟ್ರಿಕ್ ಭಾರಿಸಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2001 ರ ಭಾರತೀಯ ಜನಗಣತಿ ಪ್ರಕಾರ ಸುಮಾರು ಎರಡು ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಪುರಷರು ಶೇಕಡಾ 52ರಷ್ಟಿದ್ದಾರೆ. ಮಹಿಳೆಯರು ಶೇಕಾಡ 48ರಷ್ಟಿದ್ದಾರೆ. ಈ ಕ್ಷೇತ್ರ ಸರಾಸರಿ ಶೇಕಡಾ 73ರಷ್ಟು ಸಾಕ್ಷರತೆ ಹೊಂದಿದೆ. ಇಲ್ಲಿ ಸಾಕ್ಷರತೆ ಪ್ರಮಾಣ ತುಸು ಹೆಚ್ಚು ಎನ್ನಬಹುದು.
ಪ್ರತಿ ವಿಧಾನಸಭಾ ಚುಣಾವಣೆ ಬಂದಾಗಲೂ ಸಹ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಮತದಾರರ ಒಲವು, ಪಕ್ಷಗಳ ಗೆಲವನ್ನು ಮುಖ್ಯವಾಗಿ ರಾಜಕೀಯ ಬೆಳವಣಿಗೆಗಳನ್ನು ಊಹಿಸಲು ಸಾಧ್ಯವಿಲ್ಲ. ಸದ್ಯ ಬ್ಯಾಟರಾಯಪುರದಲ್ಲೂ ಅಷ್ಟೇ, ಇಲ್ಲಿ 2008ರಿಂದಲೂ ಕಾಂಗ್ರೆಸ್ ಬಹುಮತ ಗಳಿಸುವ ಮೂಲಕ ಅಧಿಕಾರ ಗದ್ದುಗೆ ಏರಿದೆ. 2023ರ ಚುನಾವಣೆಯಲ್ಲಿ ಅದನ್ನು ಹಾಗೇಯೆ ಕಾಪಾಡಿಕೊಳ್ಳುವ ಸವಾಲು ಕಾಂಗ್ರೆಸ್ ನಾಯಕರ ಮೇಲಿದೆ.

ಬ್ಯಾಟರಾಯನಪುರ ಕ್ಷೇತ್ರದ ರಾಜಕೀಯ ಹಿನ್ನೆಲೆ
ಸತತ ಮೂರು ಬಾರಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಭಾರಿಸಿದೆ. ಕೈ ನಾಯಕ ಕೃಷ್ಣ ಬೈರೇಗೌಡ ಅವರು 2008ರಿಂದಲೂ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ರವಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಬೀಗಿದ್ದರು. ಆದರೆ ಬಿಜೆಪಿ (5671) ಕಡಿಮೆ ಅಂತದಿಂದ ಸೋತಿದೆ. ನಿರಂತರವಾಗಿ ಮೂರು ಸಲ ಕೃಷ್ಣಬೈರೇಗೌಡಚುನಾಯಿತರಾಗಿದ್ದಾರೆ. ಇದುವರೆಗೆ ಇಲ್ಲಿ ಬಿಜೆಪಿ ಒಮ್ಮೆ ಮಾತ್ರವೇ ಗೆದ್ದಿದೆ. 1970ರ ದಶಕದಲ್ಲಿ ಕಾಂಗ್ರೆಸ್‌ಗೆ ಜನತಾ ಪಾರ್ಟಿ ನಂತರ ಜೆಡಿಎಸ್ ಸಹ ಪ್ರಬಲ ಎದುರಾಳಿ ಪಕ್ಷವಾಗಿತ್ತು.

ಕಾಂಗ್ರೆಸ್ ಪ್ರಬಲ ಪೈಪೋಟಿ ಒಡ್ಡಲು ಬಿಜೆಪಿ ಸಿದ್ಧತೆ
ಕಾಂಗ್ರೆಸ್ ಭದ್ರಕೋಟೆಯಾಗಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ವರ್ಷಗಳಿಂದಲೂ ಅಧಿಕಾರ ಹಿಡಿಯಲು ಹವಣಿಸುತ್ತಿದೆ. 2018ರಲ್ಲಿ ಇನ್ನೇನು ಕ್ಷೇತ್ರ ಬಿಜೆಪಿ ಪಾಲಾಯಿತು ಎನ್ನುವಷ್ಟರಲ್ಲಿ ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದೆ. ಮರಳಿ ಯತ್ನವ ಮಾಡು ಎಂಬಂತೆ ಈ ಭಾರಿ ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕೇ ತೀರಲು ಬಿಜೆಪಿ ನಾಯಕರು ಚಿತ್ತ ನೆಟ್ಟಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ನಾಯಕರು, ಕಾರ್ಯಕರ್ತರ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಈ ಸಲ ಅತ್ಯಧಿಕ ಸ್ಥಾನ ಗೆಲ್ಲುವ ಉತ್ಸಾಹ ತೋರುತ್ತಿರುವ ಜೆಡಿಎಸ್ ಸಹ ಸಿದ್ಧತೆ ಆರಂಭಿಸಿರುವುದು ಗೊತ್ತಾಗಿದೆ.

ಬ್ಯಾಟರಾಯನಪುರ: ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ
ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ಮುಸ್ಲಿಂ ಸಮುದಾಯದದ ಮತಗಳು ಹೆಚ್ಚಿವೆ. ಅವರೇ ಇಲ್ಲಿ ನೀರ್ಣಾಯಕರು ಎನ್ನಬಹುದು. ಮೂಲ ನಿವಾಸಿಗಳ ಸಂಖ್ಯೆಯಷ್ಟೇ ಇಲ್ಲಿ ವಲಸಿಗರು ಇದ್ದಾರೆ. ಮುಖ್ಯವಾಗಿ ಇಲ್ಲಿ ಎಲ್ಲ ಜಾತಿ ಜನಾಂಗದವರು ಇದ್ದಾರೆ. ಅಲ್ಲದೇ ಹಿಂದಿ, ತೆಲುಗು, ತಮಿಳು, ಅಲ್ಪಸಂಖ್ಯಾತರು ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಇದ್ದು, ಅದೇ ಪಕ್ಷದ ಅಭ್ಯರ್ಥಿ ಕೃಷ್ಣ ಬೈರೇಗೌಡರು. ಅಲ್ಲದೇ ಕಾಂಗ್ರೆಸ್ ಮುಸ್ಲಿಂ ಓಲೈಕೆ ಹೆಚ್ಚು ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು
ಕಾಂಗ್ರೆಸ್ ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆರೋಪಗಳು ಇವೆ. ಈ ಸಲ ಕೃಷ್ಣ ಬೈರೇಗೌಡರೇ ಕೈ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯವು ಬಯಕೆ ಹೊಂದಿದ್ದಾರೆ. ಬಿಜೆಪಿಯಿಂದ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಎ. ರವಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಅವರು ಗೆಲ್ಲಲೇ ಬೇಕೆಂದು ಪಣತೊಟ್ಟಿದ್ದಾರೆ. ಒಕ್ಕಲಿಗರ ಮತ ಸೆಳೆಯಲು ಮುಂದಾಗಿರುವ ಜೆಡಿಎಸ್ ನಿಂದ ಸ್ಥಳಿಯ ನಾಯಕ ವೇಣುಗೋಪಾಲ್ ಹಾಗೂ ಚಂದ್ರು ಟಿಜಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications