Sugarcane: 'ಸರ್ಕಾರದಲ್ಲಿ ದುಡ್ಡಿಲ್ಲ' ಎಂದ ಡಿಕೆಶಿ; ರೈತರ ಮುಂದೆ ವೈಫಲ್ಯ ಒಪ್ಪಿಕೊಂಡ ಡಿಕೆಶಿ: ವಿಪಕ್ಷ ನಾಯಕರು

ಬೆಂಗಳೂರು: 'ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಕಬ್ಬು ಬೆಳೆಗಾರರಿಗೆ ನಾನೇನು ನನ್ನ ಸ್ವಂತ ದುಡ್ಡು ಕೊಡೋಕೆ ಆಗುತ್ತಾ?" ಎಂದು ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳುವ ಮೂಲಕ ಸರ್ಕಾರ ವೈಫಲ್ಯ ಒಪ್ಪಿಕೊಂಡಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ರಾಜ್ಯದ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದ್ದ ಬೆಳೆಗಾರರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಿಎಂ ಡಿಕೆ ಶಿವಕುಮಾರ್ ಅವರು ಸಮನ್ವಯ ಸಾಧಿಸಿದ್ದಾರೆ. ಕೇಂದ್ರವು ನಮ್ಮ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದಿದ್ದಾರೆ. ಅದೇ ವೇಳೆ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು 'ಸರ್ಕಾರದ ಬಳಿ ದುಡ್ಡಿಲ್ಲ' ಎಂದಿರುವುದನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ.

BY Vijayendra

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಕ್ಸ್ ಮಾಡಿದ್ದು, ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನವನ್ನು ಹಾಗೂ ಅನ್ನದಾತರ ಮುಂದೆ ತಮ್ಮ ವೈಫಲ್ಯ, ಅಸಹಾಯಕತೆಗಳನ್ನು ಸ್ವತಃ ಒಪ್ಪಿಕೊಂಡಿದ್ದಾರೆ. ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳು ಮತ್ತು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಸಭೆಯಲ್ಲಿ, 'ಸರ್ಕಾರದ ಬೊಕ್ಕಸ ಖಾಲಿಯಾಗಿದೆ' ಎಂದು ಸಿಎಂ ಕೈಚೆಲ್ಲಿ ಕುಳಿತಿರುವುದು ಅತ್ಯಂತ ಶೋಚನೀಯ ಮಾತ್ರವಲ್ಲ, ತೀವ್ರ ಖಂಡನೀಯ ಎಂದರು.

ಅಭಿವೃದ್ಧಿಗೆ ಹಣವಿಲ್ಲದೆ, ರೈತಪರ ಯೋಜನೆಗಳಿಗೆ ಅನುದಾನ ನೀಡಲಾಗದೆ ಖಜಾನೆಯನ್ನು ಲೂಟಿ ಹೊಡೆದು ಬರಿದು ಮಾಡಿಕೊಂಡಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ, ಅನ್ನದಾತ ರೈತರ ಕಷ್ಟಕ್ಕೆ ಸ್ಪಂದಿಸಲು ಅಸಹಾಯಕರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಸುಳ್ಳು ಪ್ರಚಾರಕ್ಕಾಗಿ ಭಾಷಣ

ನುಡಿದಂತೆ ನಡೆದ ಸರ್ಕಾರ ಎಂದು ಭಾಷಣ ಬಿಗಿಯುವ ನಿಮ್ಮದು ಬರೀ ಸುಳ್ಳು ಪ್ರಚಾರ, ಜನರ ದುಡ್ಡಿನಲ್ಲಿ ಸುಳ್ಳು ಜಾಹಿರಾತು ನೀಡಿದ್ದಷ್ಟೇ ನಿಮ್ಮ ಸಾಧನೆಯಾಗಿದೆ. ಮುಖ್ಯಮಂತ್ರಿಗಳೇ, 'ಸರ್ಕಾರದಲ್ಲಿ ದುಡ್ಡಿಲ್ಲ' ಎಂದು ಜಾರಿಕೊಳ್ಳುವುದು ಪರಿಹಾರವಲ್ಲ, ರೈತರಿಗೆ ನೆರವಾಗದ ರಾಜ್ಯ ಸರ್ಕಾರ ಇದ್ದರೇನು, ಇಲ್ಲದಿದ್ದರೇನು! ರೈತರ ಬೆವರಿಗೂ ಬೆಲೆ ನೀಡಲಾಗದ ನಿಮ್ಮ ಈ 'ದಿವಾಳಿ ಆಡಳಿತ'ದ ವಾಸ್ತವಿಕ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಶ್ವೇತಪತ್ರ ಹೊರಡಿಸಿ, ಕನಿಷ್ಠ ನಮ್ಮ ರೈತರಿಗೆ ರಾಜ್ಯ ಸರ್ಕಾರದ ನೈಜ ಸ್ಥಿತಿಗತಿಗಳ ಬಗ್ಗೆ ಮಾಹಿತಿಯಾದರೂ ಇರಲಿ, ಭರವಸೆ ನೀಡುವುದಕ್ಕೂ, ಈಡೇರಿಸುವುದಕ್ಕೂ ಇರುವ ವ್ಯತ್ಯಾಸ ಜನರಿಗೆ ಸ್ಪಷ್ಟವಾಗಿ ತಿಳಿಯಲಿ! ಎಂದು ತಿಳಿಸಿದರು.

ಜೆಡಿಎಸ್ ಹೇಳಿದ್ದೇನು?

ಇನ್ನೂ ಜೆಡಿಎಸ್ ಕೂಡ ಎಕ್ಸ್‌ ಮೂಲಕ ಸರ್ಕಾರದ ಕಾಲೆಳೆದ, ನಿಮ್ಮ 'ಜೇಬಲ್ಲಿ ದುಡ್ಡಿಲ್ಲ' ಅಂತ ಹೇಳೋಕೆ ಇಷ್ಟು ದಿನ ಬೇಕಿತ್ತಾ? ಮುಖ್ಯಮಂತ್ರಿಗಳೇ, ನಾಡಿನ ರೈತರ ಕಣ್ಣೀರು ನಿಮಗೆ ಕಾಣಿಸ್ತಿಲ್ವಾ? ಎಂದು ಕಿಡಿ ಕಾರಿದೆ.

ಸರ್ಕಾರ ದಿವಾಳಿ: ರೈತರು ಯಾಕೆ ಬಲಿಪಶು ಆಗಬೇಕು?

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, "ಬೊಕ್ಕಸದಲ್ಲಿ ದುಡ್ಡಿದ್ದರೆ ತಾನೇ ಕೊಡೋದು? ಎಂದು ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಉಡಾಫೆಯ ಮಾತಾಡುವ ಮೂಲಕ ಈ ದರಿದ್ರ ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಗ್ಯಾರಂಟಿಗಳ ಹೆಸರಿನಲ್ಲಿ ರಾಜಕೀಯ ಲಾಭ ಗಿಟ್ಟಿಸಿಕೊಂಡು, ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಅತೃಪ್ತ ಕಾಂಗ್ರೆಸ್ ಆತ್ಮಗಳಿಗೆ ಗಂಜಿ ಕೇಂದ್ರಗಳನ್ನು ತೆರೆದು, ವೈಯಕ್ತಿಕ ಪ್ರತಿಷ್ಠೆಗಳಿಗೆ ಸಾಧನಾ ಸಮಾವೇಶಗಳನ್ನು ಮಾಡಿ, ಪ್ರತಿಯೊಂದು ಇಲಾಖೆ, ನಿಗಮ ಮಂಡಳಿಗಳಲ್ಲಿ ಲೂಟಿ ಹೊಡೆದು ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಕೊನೆಗೆ ಕಷ್ಟಪಟ್ಟು ಬೆಳೆ ಬೆಳೆದ ಕಬ್ಬು ಬೆಳೆಗಾರರ ಕೈಗೆ ಚೊಂಬು ಕೊಟ್ಟಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.

"I am an Agriculturaist by Birth" ಎಂದು ಹೇಳಿಕೊಳ್ಳುವ ತಮಗೆ ಅನ್ನದಾತನ ಹೊಟ್ಟೆಗೆ ಹೊಡೆಯಲು ಮನಸ್ಸಾದರೂ ಹೇಗೆ ಬರುತ್ತೆ ಸಿಎಂ ಡಿ.ಕೆ. ಶಿವಕುಮಾರ್ ಅವರೇ?. ರೈತರ ಶ್ರಮಕ್ಕೆ ಬೆಲೆ ಇಲ್ಲವೇ?: ಹಗಲಿರುಳು ಕಷ್ಟಪಟ್ಟು ಕಬ್ಬು ಬೆಳೆದ ರೈತರು ತಮ್ಮ ನ್ಯಾಯಯುತ ಬೆಂಬಲ ಬೆಲೆಗಾಗಿ ಬೀದಿಗೆ ಇಳಿದರೆ, "ಹಣವಿಲ್ಲ, ತಕ್ಷಣ ಕೊಡಲು ಸಾಧ್ಯವಿಲ್ಲ" ಎಂದು ರೈತ ಮುಖಂಡರ ಎದುರಲ್ಲೇ ಕೈಚೆಲ್ಲಿ ಕುಳಿತಿರುವುದು ನಿಮ್ಮ ಸಂವೇದನಾರಹಿತ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+